ನಾಲತವಾಡ: ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ್ದ ಕೋತಿಗೆ ನಾಲತವಾಡ ಪಟ್ಟಣದ ಜಗದೇವನಗರ ನಿವಾಸಿಗಳು ಹಣೆಗೆ ಕುಂಕುಮವಿಟ್ಟು ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ನಡೆದಿದೆ.
ಜಗದೇವನಗರದ ಹನುಮಾನ ದೇವಸ್ಥಾನದ ಮರವೊಂದರಲ್ಲಿ ಆಟವಾಡುತ್ತಿದ್ದ ಕೋತಿಗಳ ಗುಂಪಿನ ದೊಡ್ಡ ಕೋತಿಯೊಂದು ಆಯ ತಪ್ಪಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿತ್ತು.
ಸ್ಥಳೀಯರು ಆ ಕೋತಿಯನ್ನು ದೇವರೆಂಬ ಭಾವನೆಯಿಂದ ಪೂಜಿಸುತ್ತಾರೆ, ಹೀಗಾಗಿ ಕೋತಿಯ ಮೃತ ದೇಹಕ್ಕೆ ಮಾಲೆಗಳನ್ನು ತೊಡಿಸಿ, ಹಾಡು, ಬ್ಯಾಂಡ್ ಸಮೇತ ಕೋತಿಯ ಅಂತ್ಯಕ್ರಿಯೆಗೆ ಮೆರವಣಿಗೆ ನಡೆಸಿದರು. ಕೆಲ ಹಿರಿಯರು ಯುವಕರು, ಕ್ಷಣಗಳ ಕಾಲ ಭಾವುಕರಾದರು ಕೋತಿಯ ಮೃತ ದೇಹಕ್ಕೆ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿದ್ದಾರೆ.
ಈ ವೇಳೆ ಸದಸ್ಯರಾದ ರಮೇಶ ಅಲಕೊಪ್ಪರ. ಮಹಮ್ಮದ ನಾಡದಾಳ. ಗುರು ತಂಗಡಗಿ. ರಾಚಯ್ಯ ಹಿರೆಮಠ, ಮುದಕಪ್ಪ ಚಲವಾದಿ, ಆನಂದ, ಅಮರಣವರ ಬಾಬು, ಕಸಾಬ್, ವೀರೇಶ, ದಾರಿಮನಿ ಮಲ್ಲು, ತಳವಾರ ಮಲ್ಲು, ನೆರಬಂಚಿ ಬಸ್ಸು, ಮುರಾಳ ಶರಣಪ್ಪ, ಬಂಡಿವಡ್ಡರ ಹಾಗೂ ಜಗದೇವನಗರ, ವಿನಾಯಕ ನಗರದ ಹಿರಿಯರು, ಯುವಕರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296