nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಿಜೆಪಿಯಂತೆ ನಾಯಕತ್ವದ ದಿವಾಳಿ ನಮ್ಮಲ್ಲಿ ಇಲ್ಲ: ಸಚಿವ ಎಂ.ಬಿ.ಪಾಟೀಲ್‌

    October 23, 2025

    ಕಿತ್ತೂರ ರಾಣಿ ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿ: ಸಿಎಂಗೆ ಕೇಂದ್ರ ಸಚಿವ ವಿ.ಸೋಮಣ್ಣ ಪತ್ರ

    October 23, 2025

    ಮೈಸೂರು: ಭ್ರೂಣಹತ್ಯೆ ಜಾಲ ಪತ್ತೆ : 7 ಮಂದಿಯ ವಿರುದ್ಧ ಪ್ರಕರಣ ದಾಖಲು

    October 23, 2025
    Facebook Twitter Instagram
    ಟ್ರೆಂಡಿಂಗ್
    • ಬಿಜೆಪಿಯಂತೆ ನಾಯಕತ್ವದ ದಿವಾಳಿ ನಮ್ಮಲ್ಲಿ ಇಲ್ಲ: ಸಚಿವ ಎಂ.ಬಿ.ಪಾಟೀಲ್‌
    • ಕಿತ್ತೂರ ರಾಣಿ ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿ: ಸಿಎಂಗೆ ಕೇಂದ್ರ ಸಚಿವ ವಿ.ಸೋಮಣ್ಣ ಪತ್ರ
    • ಮೈಸೂರು: ಭ್ರೂಣಹತ್ಯೆ ಜಾಲ ಪತ್ತೆ : 7 ಮಂದಿಯ ವಿರುದ್ಧ ಪ್ರಕರಣ ದಾಖಲು
    • ಹಾಸನಾಂಬೆ ದರ್ಶನೋತ್ಸವಕ್ಕೆ ತೆರೆ: ಈ ಬಾರಿ ದಾಖಲೆ
    • ಯತೀಂದ್ರ ಸಿದ್ದರಾಮಯ್ಯ ಹೇಳಿದ್ದರಲ್ಲಿ ತಪ್ಪೇನಿದೆ?: ಪರಮೇಶ್ವರ್ ಪ್ರಶ್ನೆ
    • ದೇಶಿ ಕೋಳಿ ಮರಿಗಳ ವಿತರಣೆ : ಮಹಿಳೆಯರಿಂದ ಅರ್ಜಿ ಆಹ್ವಾನ
    • ಅಕ್ಟೋಬರ್ 31:  ಕುಂಚಿಗರ ಸಂಘದ ನೂತನ ಭವನದ ಉದ್ಘಾಟನೆ
    • ದೀಪಾವಳಿ: ಜೈ ಭೀಮ್ ಅಂಬೇಡ್ಕರ್ ಹುಡುಗರಿಂದ ಎತ್ತಿನಗಾಡಿ ಓಟ ಸ್ಪರ್ಧೆ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವಿಕಲಚೇತನರಲ್ಲಿ ಹೃದಯ ಶ್ರೀಮಂತಿಕೆಯಿದೆ: ಜಪಾನಂದಜೀ
    ತುಮಕೂರು February 20, 2025

    ವಿಕಲಚೇತನರಲ್ಲಿ ಹೃದಯ ಶ್ರೀಮಂತಿಕೆಯಿದೆ: ಜಪಾನಂದಜೀ

    By adminFebruary 20, 2025No Comments2 Mins Read
    tumakuru vv

    ತುಮಕೂರು: ವಿಕಲಚೇತನರಿಗೆ ಅಂಗ ವೈಕಲ್ಯ ಇರಬಹುದು. ಆದರೆ ಅವರಲ್ಲಿ ಹೃದಯವಂತಿಕೆಯಿದೆ. ನಾಗರಿಕರಾದ ನಾವು ಒಮ್ಮೆ ಹೃದಯ ಕೆದಕಿ ನೋಡಿಕೊಳ್ಳಬೇಕು. ಅಲ್ಲಿ ಶ್ರೀಮಂತಿಕೆಯೇ ಇಲ್ಲ. ಎಲ್ಲರೂ ಹೃದಯ ಶೂನ್ಯರಾಗಿದ್ದಾರೆ ಎಂದು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದಜೀ ಮಹಾರಾಜ್ ಹೇಳಿದರು.

    ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮೊಬಲಿಟಿ ಇಂಡಿಯಾ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ‘ಹಿರಿಯ ನಾಗರಿಕರಿಗೆ ನೆರವು ಮತ್ತು ಸಾಮಾಜಿಕ ಆರೈಕೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
    ಹೆತ್ತ ತಂದೆ–ತಾಯಿಯನ್ನು ಬೀದಿಪಾಲುಮಾಡುವ ಕೆಳಮಟ್ಟಕ್ಕೆ ಇಳಿದಿದ್ದೇವೆ. ಹಾಗಾದರೆ ಶಾಲೆ, ಕಾಲೇಜುಗಳಲ್ಲಿ ನಮಗೆ ನೀಡುವ ಶಿಕ್ಷಣ ಎಂಥದ್ದು ಪ್ರಶ್ನೆ ಹುಟ್ಟುತ್ತದೆ. ಶಾಲಾ ಕಾಲೇಜುಗಳಲ್ಲಿ ಶಿಕ್ಷಣಕ್ಕಿಂತ ಹೆಚ್ಚಾಗಿ ಸಂಸ್ಕಾರ ಕಲಿಸಬೇಕು ಎಂದರು.


    Provided by
    Provided by
    Provided by

    ಪಾವಗಡ ಆಶ್ರಮದ ವತಿಯಿಂದ 19,000 ಕ್ಷಯ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ. ಎಲ್ಲವನ್ನು ಸರ್ಕಾರದ ಮೇಲೆ ಹಾಕಬೇಡಿ; ನಮ್ಮ ಕರ್ತವ್ಯವೂ ಇದೆ ಎನ್ನುವುದನ್ನು ಮರೆಯಬೇಡಿ ಎಂದರು.

    ವಯಸ್ಸಾದವರನ್ನು ಮೂಲೆಗೆ ಕೂರಿಸಿ ಅವರಲ್ಲಿ ನಕಾರಾತ್ಮಕತೆಯನ್ನು ತುಂಬುತ್ತಿದ್ದೇವೆ. ವೃದ್ಧಾಪ್ಯದಲ್ಲಿರುವವರಿಗೆ, ವಿಕಲಚೇತನರಿಗೆ ಹಣದ ಅವಶ್ಯಕತೆಯಿಲ್ಲ. ಬದಲಾಗಿ ನಿಮ್ಮ ಪ್ರೀತಿ, ಕಾಳಜಿಯ ಅವಶ್ಯಕತೆಯಿದೆ.

    ಎಲ್ಲಿಯವರೆಗೂ ವಿಕಲಚೇತನರನ್ನು ಹಾಗೂ ವೃದ್ಧರನ್ನು ನಮ್ಮವರೆಂದು ತಿಳಿಯುವುದಿಲ್ಲವೋ ಅಲ್ಲಿಯವರೆಗೆ ಭಾರತ ಮಹಾನ್ ಆಗುವುದಿಲ್ಲ ಎಂದರು.
    ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಿನ ಯುವಕ ಯುವತಿಯರು ಮಾಲ್ ಕಲ್ಚರ್ ಗಳನ್ನು ಅನುಸರಿಸುತ್ತಿರುವುದರಿಂದ ಅವರಿಗೆ ವೃದ್ಧರ, ವಿಕಲಚೇತನರ ಕಷ್ಟ ಕಾರ್ಪಣ್ಯಗಳು ಕಾಣುತ್ತಿಲ್ಲ. ಸಂಸ್ಕಾರವಿಲ್ಲದ ವಿದ್ಯೆ ಎಂದಿಗೂ ಶೂನ್ಯ ಎಂದರು.

    ವಿಕಲಚೇತನರಿಗೆ ಹಾಗೂ ವೃದ್ಧರಿಗೆ ಸರ್ಕಾರ ನೀಡುತ್ತಿರುವ ಯೋಜನೆಗಳು ಸಂಪೂರ್ಣವಾಗಿ ತಲುಪುತ್ತಿಲ್ಲ. ಅನೇಕ ಸೌಲಭ್ಯಗಳು ದುರುಪಯೋಗವಾಗುತ್ತಿವೆ. ಕರ್ನಾಟಕದಲ್ಲಿ ಇಂಥವರಿಗಾಗಿ ಅತಿಹೆಚ್ಚು ಯೋಜನೆಗಳಿವೆ. ಇವುಗಳ ಜಾರಿಯಲ್ಲಿ ತುಮಕೂರು ವಿಶ್ವವಿದ್ಯಾನಿಲಯವು ಕೂಡ ಹೆಚ್ಚಿನ ಪ್ರಯತ್ನ ಮಾಡಲಿದೆ ಎಂದರು.

    ಮೊಬಿಲಿಟಿ ಇಂಡಿಯಾ ಕಾರ್ಯಕಾರಿ ನಿರ್ದೇಶಕಿ ಅಲ್ಬಿನಾ ಶಂಕರ್ ಮಾತನಾಡಿ, ವಿಕಲಚೇತನರು ಮತ್ತು ವೃದ್ಧರಿಗೆ ಸ್ಟಿಕ್, ಕನ್ನಡಕ, ಕುರ್ಚಿಗಳಂತ ಸಾಮಾನ್ಯ ನೆರವು ನೀಡಿದರೆ ಸಾಕು, ಅವರು ಯಾರಿಗೂ ಕೈ ಚಾಚದೆ ಬದುಕುತ್ತಾರೆ. ಅವರು ಪ್ರೀತಿ ಕಾಳಜಿ ಹೊರತು ಇನ್ನೇನೆನ್ನೂ ಅಪೇಕ್ಷಿಸುವುದಿಲ್ಲ. ಇಂದು ಅವರಿಗಾಗುವ ಸಮಸ್ಯೆಗಳು ಮುಂದೆ ನಮಗೂ ಕಾಡುತ್ತವೆ ಎನ್ನುವುದನ್ನು ಮರೆಯಬೇಡಿ ಎಂದು ಕಿವಿಮಾತು ಹೇಳಿದರು.

    ತುಮಕೂರು ವಿವಿ ಕುಲಸಚಿವೆ ನಾಹಿದಾ ಜûಮ್ ಜûಮ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಂಟಿ ನಿರ್ದೇಶಕ ನಟರಾಜ್ ಎಸ್., ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ. ರಮೇಶ್ ಬಿ., ಹಿರಿಯ ಪ್ರಾಧ್ಯಾಪಕ ಪ್ರೊ. ಕೆ. ಜಿ. ಪರಶುರಾಮ, ವರದಕ್ಷಿಣೆ ವಿರೋಧಿ ವೇದಿಕೆಯ ಕಾರ್ಯದರ್ಶಿ ಸಾ.ಚಿ.ರಾಜಕುಮಾರ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಿಲ್ಪ ದೊಡ್ಡಮನಿ ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ದೇಶಿ ಕೋಳಿ ಮರಿಗಳ ವಿತರಣೆ : ಮಹಿಳೆಯರಿಂದ ಅರ್ಜಿ ಆಹ್ವಾನ

    October 23, 2025

    ಜೂನಿಯರ್ ಕಾಲೇಜು ಮೈದಾನದ ತುಂಬಾ ಕಾಲಿಟ್ಟ ಕಡೆಯಲ್ಲಿ ಮೊಳೆಗಳು: ಜಿಲ್ಲಾಡಳಿತದ ನಿರ್ಲಕ್ಷ್ಯ!

    October 22, 2025

    ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಿನಲ್ಲಿ ಕಂಪೆನಿ ನಿರ್ವಾಹಕನಿಗೆ ಪಂಗನಾಮ!

    October 21, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಬಿಜೆಪಿಯಂತೆ ನಾಯಕತ್ವದ ದಿವಾಳಿ ನಮ್ಮಲ್ಲಿ ಇಲ್ಲ: ಸಚಿವ ಎಂ.ಬಿ.ಪಾಟೀಲ್‌

    October 23, 2025

    ಬೆಂಗಳೂರು:  ಮುಖ್ಯಮಂತ್ರಿಯಾಗಲು ಕಾಂಗ್ರೆಸ್‌ ‍ನಲ್ಲಿ ಬಹಳಷ್ಟು ನಾಯಕರು ಸಮರ್ಥರಿದ್ದಾರೆ. ಬಿಜೆಪಿಯಂತೆ ನಾಯಕತ್ವದ ದಿವಾಳಿ ನಮ್ಮಲ್ಲಿ ಇಲ್ಲ ಎಂದು ಬೃಹತ್‌ ಮತ್ತು…

    ಕಿತ್ತೂರ ರಾಣಿ ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿ: ಸಿಎಂಗೆ ಕೇಂದ್ರ ಸಚಿವ ವಿ.ಸೋಮಣ್ಣ ಪತ್ರ

    October 23, 2025

    ಮೈಸೂರು: ಭ್ರೂಣಹತ್ಯೆ ಜಾಲ ಪತ್ತೆ : 7 ಮಂದಿಯ ವಿರುದ್ಧ ಪ್ರಕರಣ ದಾಖಲು

    October 23, 2025

    ಹಾಸನಾಂಬೆ ದರ್ಶನೋತ್ಸವಕ್ಕೆ ತೆರೆ: ಈ ಬಾರಿ ದಾಖಲೆ

    October 23, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.