ಸತ್ನಾ: ಮಾಲಿಕನನ್ನು ರಕ್ಷಿಸಲು ಹುಲಿಯೊಂದಿಗೆ ಹೋರಾಡಿದ ಸಾಕು ನಾಯಿಯೊಂದು ತನ್ನ ಪ್ರಾಣವನ್ನೇ ತ್ಯಾಗ ಮಾಡಿದೆ.
ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಫೆಬ್ರವರಿ 26ರಂದು ಬಾಂಧವಗಢ ಹುಲಿ ಅಭಯಾರಣ್ಯದ ಬಳಿ ಈ ಘಟನೆ ನಡೆದಿದೆ.
ಶಿವಂ ಬಡ್ಗೈಯಾ ಎಂಬವರು ತಮ್ಮ ಸಾಕು ನಾಯಿ ಜರ್ಮನ್ ಶೆಫರ್ಡ್‌ನೊಂದಿಗೆ ಮನೆಯ ಹೊರಗೆ ಇದ್ದಾಗ, ಹತ್ತಿರದ ಕಾಡಿನಿಂದ ಬಂದ ಹುಲಿ ಶಿವಂ ಬಡ್ಗೈಯಾ ಮೇಲೆ ದಾಳಿ ಮಾಡಲು ಯತ್ನಿಸಿದೆ> ಈ ವೇಳೆ ಸಾಕು ನಾಯಿ ಮಾಲಿಕನಿಗೆ ಅಡ್ಡ ನಿಂತು ಹುಲಿ ಜೊತೆಗೆ ಹೋರಾಡಿದೆ.
ಹುಲಿ ನಾಯಿಯನ್ನು ಕಚ್ಚಿ ಎಳೆದೊಯ್ದರೂ, ನಾಯಿ ಹುಲಿಯೊಂದಿಗೆ ತೀವ್ರವಾಗಿ ಹೋರಾಡಿದೆ. ಅಂತಿಮವಾಗಿ ನಾಯಿಯನ್ನು ಬಿಟ್ಟು ಹುಲಿ ಕಾಡಿಗೆ ಹೋಗಿತ್ತು. ತಕ್ಷಣವೇ ನಾಯಿಯನ್ನು ಪಶುವೈದ್ಯರ ಬಳಿಗೆ ಕರೆದೊಯ್ಯಲಾಯಿತು, ಆದರೆ ನಾಯಿ ವಿಪರೀತ ರಕ್ತಸ್ರಾವದಿಂದ ಸಾವನ್ನಪ್ಪಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4