ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಕಡಿಮೆ ಇದ್ದಾಗ ಉಬರ್ ಕ್ಯಾಬ್ ಬುಕ್ ಮಾಡುತ್ತೀದ್ದೀರಾ?. ಹಾಗಾದರೆ, ನೀವು ಹೆಚ್ಚು ಹಣವನ್ನು ಪಾವತಿಸಬೇಕಾಗುತ್ತದೆ.! ಹೌದು, ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಇಂತಹದೊಂದು ಆರೋಪವನ್ನು ಬೆಲ್ಜಿಯನ್ ಪತ್ರಿಕೆಯೊಂದು ವರದಿ ಮಾಡಿದೆ.
ನಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಸಾಮರ್ಥ್ಯ ಕಡಿಮೆ ಇದ್ದ ವೇಳೆ ಉಬರ್ ಕ್ಯಾಬ್ ಬುಕ್ಕಿಂಗ್ ದರವನ್ನು ಹೆಚ್ಚಿಸುತ್ತದೆ. ಸ್ಮಾರ್ಟ್‌ಫೋನಿನಲ್ಲಿ ಬ್ಯಾಟರಿ ಶಕ್ತಿ ಕಡಿಮೆ ಇದ್ದಷ್ಟು ಕ್ಯಾಬ್ ದರಗಳು ಹೆಚ್ಚಾಗುತ್ತವೆ ಎಂದು ತಿಳಿಸಿದೆ .
ಈ ಮೂಲಕ ಉಬರ್ ಸಂಸ್ಥೆ ಜನರಿಗೆ ಮೋಸಮಾಡುತ್ತಿದೆ ಎಂಬರ್ಥದಲ್ಲಿ ‘ಡೆರ್ನಿಯರ್ ಹ್ಯೂರ್’ ಎಂಬ ಪತ್ರಿಕೆಯು ಸಾಕ್ಷಿಯುತ ವರದಿಯನ್ನು ಪ್ರಕಟಿಸಿದೆ. ಇದರಿಂದ ಉಬರ್ ಸಂಸ್ಥೆ ತನ್ನ ಗ್ರಾಹಕರ ಸಂಕಷ್ಟದ ಸ್ಥಿತಿಯನ್ನು ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆಯಾ ಎಂಬ ಅನುಮಾನ ಕೂಡ ಮೂಡಿಬಂದಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA