ತುಮಕೂರು: ರೈಲ್ವೇ ಅಂಡರ್ ಪಾಸ್ ನಲ್ಲಿ ತುಂಬಿದ್ದ ನೀರಿನ ಫೋಟೋ ತೆಗೆಯುತ್ತಿದ್ದ ವೇಳೆ ಆಟೋ ಚಾಲಕರೊಬ್ಬರು ಕಾಲು ಜಾರಿ ಬಿದ್ದು, ನೀರಿನಲ್ಲಿ ಕೊಚ್ಚಿ ಕೊಂಡು ಹೋದ ಘಟನೆ ಶನಿವಾರ ನಗರದ ಹೆಗಡೆ ಕಾಲೊನಿ ರೈಲ್ವೆ ಅಂಡರ್ ಪಾಸ್ ಸಮೀಪ ನಡೆದಿದೆ.
ಶಾಂತಿನಗರದ ಚಾಲಕ ಅಮ್ಜದ್ ಖಾನ್ (44) ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾದವರಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ.
ವರದಿಗಳ ಪ್ರಕಾರ, ದಾನ ಪ್ಯಾಲೇಸ್ ಕಡೆಯಿಂದ ಗುಬ್ಬಿಗೇಟ್ ಕಡೆಗೆ ತೆರಳುತ್ತಿದ್ದ ಆಟೊವನ್ನು ಚಾಲಕ ಅಮ್ಜದ್ ರೈಲ್ವೆ ಅಂಡರ್ ಪಾಸ್ ಸಮೀಪ ನಿಲ್ಲಿಸಿದ್ದಾರೆ. ಅದೇ ವೇಳೆ ಸುರಿದ ಜೋರು ಮಳೆಗೆ ಅಂಡರ್ ಪಾಸ್‌ನಲ್ಲಿ ನೀರು ತುಂಬಿಕೊಂಡಿದೆ. ನೀರು ನಿಂತಿರುವ ಫೋಟೊ ತೆಗೆಯುವ ಸಮಯದಲ್ಲಿ ಮೊಬೈಲ್ ಜಾರಿ ಬಿದ್ದಿದ್ದು, ಅದನ್ನು ತೆಗೆದುಕೊಳ್ಳಲು ನೀರಿಗೆ ಇಳಿದಿದ್ದಾರೆ. ಮೊಬೈಲ್ ಹುಡುಕಾಡುತ್ತಲೇ ನೀರಿನಲ್ಲಿ ಮುಳುಗಿದ್ದಾರೆ ಎಂದು ಪೊಲೀಸರು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz