ತುಮಕೂರು : ಜೈವಿಕ ಇಂಧನ ಸಂಶೋಧನೆ ಮತ್ತು ಗುಣಮಟ್ಟ ಖಾತ್ರಿ ಪ್ರಯೋಗಾಲಯ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮದ ಪ್ರಯುಕ್ತ ಕೃಷಿ ವಿಶ್ವ ವಿದ್ಯಾನಿಲಯದಿಂದ ನೂರು ಅರಣ್ಯ ಸಸಿಗಳನ್ನು ಕೊರಟಗೆರೆ ತಾಲ್ಲೂಕಿನ ತೀತಾ ಗ್ರಾಮಕ್ಕೆ ನೀಡಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಸಂತೋಷ ಮಾತನಾಡಿ ಜೈವಿಕ ಇಂಧನ ಮತ್ತು ಅರಣ್ಯ ಸಸಿಗಳ ಬಗ್ಗೆ ಕಾರ್ಯಕ್ರಮವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ಜೈವಿಕ ಇಂಧನಗಳನ್ನು ಸಸ್ಯ, ಪ್ರಾಣಿ ಅಥವಾ ಸೂಕ್ಷ್ಮ ಜೀವಿಗಳಿಂದ ಪಡೆಯಲಾಗುತ್ತದೆ. ಮುಖ್ಯವಾಗಿ ಬಳಕೆಯಲ್ಲಿರುವ ಜೈವಿಕ ಇಂಧನಗಳೆಂದರೆ-ಜೈವಿಕ ಡೀಸಲ್, ಜೈವಿಕ ಎಥನಾಲ್, ಬಯೋಗ್ಯಾಸ್ ಇತ್ಯಾದಿ ಇವು ಪರಿಸರ ಸ್ನೇಹಿ ನವೀಕರಿಸಲಾಗುವ ಇಂಧನ ಮೂಲಗಳು, ಇವು ಇಂಗಾಲ ತಟಸ್ಥ, ಅಂದರೆ-ಜೈವಿಕ ಇಂಧನಗಳನ್ನು ಉರಿಸಿದಾಗ ಬರುವ ಇಂಗಾಲದ ಡೈ ಆಕ್ಷಡನ್ನು ಸಸ್ಯಗಳು ಹೀರಿಕೊಂಡು ವಾತಾವರಣದಲ್ಲಿರುವ ಒಟ್ಟು ಇಂಗಾಲದ ಅಂಶವನ್ನು ಸಮಪ್ರಮಾಣದಲ್ಲಿರಿಸುತ್ತವೆ.
ಜೈವಿಕ ಡೀಸಲ್ : ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಬೆಳೆಯುವ ಹೊಂಗೆ, ಜಮೋಘ, ಜೀವುಸಿಪ್ಪೆ ಸಿಮರೂಬ ಮತ್ತಿತರ ಅಖಾದ್ಯ ಎಣ್ಣೆ ಬೀಜಗಳು ಮತ್ತು ಪ್ರಾಣಿಜನ್ಯ ಕೊಬ್ಬಿನಿಂದ ಜೈವಿಕ ಡೀಸಲ್ ಅನ್ನು ತಯಾರಿಸಬಹುದು. ಈ ಎಣ್ಣೆಗಳಲ್ಲಿ ಜಿಡ್ಡಿನಾಂಶ ಹೆಚ್ಚಾಗಿದ್ದು ಅದನ್ನು ರಾಸಾಯನಿಕ ಕ್ರಿಯೆಯಿಂದ ಸಂಸ್ಕರಿಸಿ ಜೈವಿಕ ಡೀಸಲ್ ಉತ್ಪಾದಿಸಲಾಗುತ್ತದೆ. ಇದನ್ನು ನೇರವಾಗಿ ಅಥವಾ ಡೀಸಲ್ ಜೊತೆ ವಿವಿಧ ಪ್ರಮಾಣಗಳಲ್ಲಿ ಡೀಸಲ್ ಇಂಜಿನ್‌ಗಳಲ್ಲಿ ಬಳಸಬಹುದು.
ಜೈವಿಕ ಎಥನಾಲ್ : ಕಬ್ಬು, ಸಿಹಿ ಜೋಳ, ಹಣ್ಣಿನ ತ್ಯಾಜ್ಯ, ಕೃಷಿ ತ್ಯಾಜ್ಯ, ಹುಲ್ಲು ಇತ್ಯಾದಿಗಳು ಶರ್ಕರ ಪಿಷ್ಪದಿಂದ ಕೂಡಿದ್ದು, ಎಥನಾಲ್ ತಯಾರಿಸಲು ಯೋಗ್ಯ ಕಚ್ಚಾವಸ್ತುಗಳಾಗಿರುತ್ತವೆ. ಈ ವಸ್ತುಗಳನ್ನು ಸೂಕ್ತ ಜೀವಿಗಳ ಸಹಾಯದಿಂದ ಹುದುಗಿಸುವಿಕೆಯ ಮೂಲಕ ಜೈವಿಕ ಎಥನಾಲನ್ನು ಉತ್ಪಾದಿಸಬಹುದು. ಇದನ್ನು ಪೆಟ್ರೋಲ್‌ನೊಂದಿಗೆ ವಿವಿಧ ಪ್ರಮಾಣಗಳಲ್ಲಿ ಬೆರೆಸಿ ಬಳಸಬಹುದು.
ಜೈವಿಕ ಅನಿಲ : ಕೃಷಿ ತ್ಯಾಜ್ಯ, ಗೃಹ ತ್ಯಾಜ್ಯ, ಕೈಗಾರಿಕಾ ತ್ಯಾಜ್ಯಗಳಂತಹ ಜೈವಿಕ ತ್ಯಾಜ್ಯವಸ್ತುಗಳನ್ನು ಬಳಸಿ ಬಯೋಗಾನ್ ಉತ್ಪಾದಿಸಬಯದು. ಈ ಕಚ್ಚಾ ವಸ್ತುಗಳು ಸ್ಥಳೀಯವಾಗಿ ಲಭ್ಯವಿದ್ದು ಅಡುಗೆ ಅನಿಲವಾಗಿ, ವಿದ್ಯುತ್ ಉತ್ಪಾದನೆ ಮತ್ತು ವಾಹನದಲ್ಲಿ ಬಳಸಬಹುದಾಗಿದೆ.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಪಿಡಿಓ ರಮೇಶ್ ಅವರು ಜೈವಿಕ ಇಂಧನದ ಮಹತ್ವ ಮತ್ತು ಪ್ರಯೋಜನವನ್ನು ಹೇಳಿದರು. ತದನಂತರ ಶಾಲೆಯ ಶಾಲೆಯ ಆವರಣದಲ್ಲಿ ಗಿಡವನ್ನು ಗ್ರಾಮಸ್ಥರು ಮತ್ತು ಪಿಡಿಒ ರಮೇಶ್ ಮತ್ತು ಮಕ್ಕಳಿಂದ ನೆಡಲಾಯಿತು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC