ತುರುವೇಕೆರೆ: ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ನಮ್ಮ ಜಿಲ್ಲೆಗೆ 6 ನೇ ತಾರೀಖು ನಿಟ್ಟೂರಿನ ಹೆಚ್.ಎ.ಎಲ್. ಘಟಕದ ಉದ್ಘಾಟನೆಗೆ ಆಗಮಿಸಲಿದ್ದು, ಈ ಕಾರ್ಯಕ್ರಮಕ್ಕೆ ಕಾರ್ಯಕರ್ತರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದಲ್ಲಿ ಮೋದಿಯವರ ಮಾತುಗಳನ್ನು ಆಲಿಸಿ ಎಂದು ಶಾಸಕ ಮಸಾಲ ಜಯರಾಮ್ ಮನವಿ ಮಾಡಿದರು.
ಶಾಸಕರ ತೋಟದಮನೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರ ಮನೆಯ ಮೇಲೆ ಪಕ್ಷದ ಬಾವುಟವನ್ನು ಕಟ್ಟಬೇಕು. ನಮ್ಮ ತಾಲ್ಲೂಕಿನಲ್ಲಿ ಪಕ್ಷ ಸಂಘಟನೆ ಮಾಡುವ ಮನೆಮನೆ ಅಭಿಯಾನ ಕಾರ್ಯಕ್ರಮ ಬೇರೆ ತಾಲ್ಲೂಕುಗಳಿಗಿಂತ ಸ್ವಲ್ಪ ನಿದಾನವಾಗಿ ನಡೆದಿದೆ. ಮುಖ್ಯಮಂತ್ರಿಗಳ ಜೊತೆ ಅಭಿಯಾನಕ್ಕೆ ಚಾಲನೆಯನ್ನು ತುಮಕೂರಿನಲ್ಲಿ ನೀಡಿದ್ದೇವೆ. ನಮ್ಮ ತಾಲ್ಲೂಕಿನಲ್ಲಿ ಅಭಿಯಾನದ ವೇಗವನ್ನು ಹೆಚ್ಚಿಸಬೇಕಿದೆ. ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ನಾವು ಸಂಘಟನಾತ್ಮಕವಾಗಿ ಕೆಲಸಮಾಡಿ ಗೆಲುವು ಸಾಧಿಸಿದ್ದೇವೆ. ಸಂಘಟನೆಯ ಬಗ್ಗೆ ಒತ್ತು ಕೊಡಬೇಕಿದೆ ಎಂದು ಕರೆ ನೀಡಿದರು.
ಪ್ರಧಾನ ಮಂತ್ರಿ ನರೇದ್ರ ಮೋದಿಯವರು ಕೊಟ್ಟಿರುವಂತಹ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವಂತಹ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ತಾಲ್ಲೂಕಿನಲ್ಲಿ ಎಲ್ಲ ಹಳ್ಳಿಗಳಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ. ಇನ್ನು ಕೆಲಸಗಳು ಬಾಕಿಯಿವೆ, 25–30 ಕೋಟಿ ಅನುದಾನ ಬಿಡುಗಡೆ ಮಾಡಿ, ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಹೇಮಾವತಿ ನಾಲೆಗೆ ಅಮ್ಮಸಂದ್ರದ ಹತ್ತಿರ ತೂಬುನ್ನು ಮಾಡಿಸಿದ್ದೇವೆ ಇದು ಆ ಭಾಗದ ರೈತರ ಕಷ್ಟವನ್ನು ನಿವಾರಿಸಿದ್ದೇವೆ ಇದರ ಕೀರ್ತಿ ಸಚಿವ ಮಾಧುಸ್ವಾಮಿಯವರಿಗೆ ಸಲ್ಲಬೇಕು ಎಂದರು.
ಇದೇ ವೇಳೆ ಸಿದ್ದನಹಟ್ಟಿ, ಗೋಣೀತುಮಕೂರು, ಹೊಣಕೆರೆ, ಸೊರವನಹಳ್ಳಿ ಮುಂತಾದ ಊರುಗಳಿಂದ ನೂರಾರು ಕಾರ್ಯಕರ್ತರು ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜೆ.ಡಿ.ಎಸ್. ಮತ್ತು ಕಾಂಗ್ರೆಸ್ ತೊರೆದು ಪಕ್ಷ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಕುಮಾರ್, ಪ್ರಾಂತೀಯ ಉಸ್ತುವಾರಿ ಜೇಷ್ಟ ಪಡಿವಾಳ್, ಹಿರಿಯ ಮುಖಂಡ ಹುಲಿನಾಯ್ಕರ್, ಗಂಗರಾಜು, ಅಧ್ಯಕ್ಷ ಮುತ್ತಣ್ಣ, ಕೆಂಪೇಗೌಡ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಯಶಸ್, ತಾಲ್ಲೂಕು ಯುವಮೋರ್ಚಾಧ್ಯಕ್ಷ ಹಟ್ಟಿಹಳ್ಳಿ ಗೌರೀಶ್. ಪ್ರಕಾಶ್, ರಾಮೇಗೌಡ ಮುಖಂಡರಾದ ವಿ.ಬಿ.ಸುರೇಶ ಕಾಳಂಜೀಹಳ್ಳಿ ಸೋಮಶೇಖರ್ ಭರತ್, ಲಿಂಗರಾಜೇಗೌಡ ಮತ್ತಿತರರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1