ಅರಿಶಿಣ ಬೆಳೆಯಲ್ಲಿ ಗಾಂಜಾ ಕೃಷಿ ಮಾಡುತ್ತಿದ್ದ ತಂದೆ–ಮಗನನ್ನು ಪೊಲೀಸರು ಬಂಧಿಸಿರುವ ಘಟನೆ ಚಾಮರಾಜನಗರ ಹನೂರು ತಾಲೂಕಿನ ಆನೆಗುಂದಿ ಗ್ರಾಮದದಲ್ಲಿ ನಡೆದಿದೆ.
ಅರಿಶಿಣ ತೋಟದಲ್ಲಿ ಎಸ್. ಬಾಲು(65) ಮತ್ತು ಮಹಾಲಿಂಗ(35) ಎಂಬ ತಂದೆ–ಮಗ ಅಕ್ರಮವಾಗಿ ಗಾಂಜಾ ಕೃಷಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ಅಪರಿಚಿತರು ಪೊಲೀಸರಿಗೆ ಮಾಹಿತಿ ನೀಡಿದ್ದು ಅರಿಶಿಣ ಬೆಳೆ ಮಧ್ಯದಲ್ಲಿ ನೆಟ್ಟಿದ್ದ ಸುಮಾರು 2 ಲಕ್ಷ ಮೌಲ್ಯದ 95 ಗಾಂಜಾ ಗಿಡಗಳನ್ನು (34 ಕೆಜಿ) ಪೊಲೀಸರು ವಶಪಡಿಸಿಕೊಂಡಿದ್ದಾರೆ.


