ಬೆಂಗಳೂರು: ಬೆಂಗಳೂರು ಮಾದಕ ವಸ್ತುಗಳ ರಾಜಧಾನಿ ಆಗ್ತಿದೆ. ರಾಜಧಾನಿ ಸಿಸಿಬಿ ಪೊಲೀಸರು ಅಂಥಾ ಬೃಹತ್ ಮಾದಕ ಜಾಲವೊಂದನ್ನ ಬೇಧಿಸಿ ಬರೋಬ್ಬರಿ 7 ಕೋಟಿ 83 ಲಕ್ಷ ಮೌಲ್ಯದ ಡ್ರಗ್ಸ್ ಅನ್ನು ಸೀಝ್ ಮಾಡಿದ್ದಾರೆ.
ಸರಿ ಸುಮಾರು 190kg ತೂಕದ 7 ಕೋಟಿ 83 ಲಕ್ಷ ರೂಪಾಯಿ ಮೌಲ್ಯದ ವಿವಿಧ ಬಗೆಯ ಮಾದಕ ವಸ್ತುಗಳನ್ನು ಕೇವಲ ಒಂದೇ ವಾರದಲ್ಲಿ ಸೀಜ್ ಮಾಡಿದ್ದಾರೆ.
ಈ ಪ್ರಕರಣದಲ್ಲಿ, ಬೆಂಗಳೂರಿನ 3 ಮಂದಿ, ಕೇರಳದ ನಾಲ್ವರು, ಒರಿಸ್ಸಾದ ನಾಲ್ವರು ಸೇರಿದಂತೆ ಮೂವರು ವಿದೇಶಿ ಪ್ರಜೆಗಳ ಹೆಡೆಮುರಿ ಕಟ್ಟಿದ್ದಾರೆ.


