ಬೀದರ್: ಜಿಲ್ಲೆಯ ವಿವಿಧೆಡೆಗಳಲ್ಲಿ ದಾಳಿ ನಡೆಸಿರುವ ಪೊಲೀಸರು, ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ಅಕ್ರಮ ಪಾನ್ ಮಸಾಲ ಹಾಗೂ ತಂಬಾಕು ಪದಾರ್ಥಗಳ ತಯಾರಿಕಾ ಘಟಕಕ್ಕೆ ದಾಳಿ ನಡೆಸಿ, ತಂಬಾಕು ಪದಾರ್ಥ ಹಾಗೂ ಇನ್ನಿತರ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಬೀದರ ಜಿಲ್ಲೆಯ ಗಾಂಧಿಗಂಜ ಪೊಲೀಸ್ ಠಾಣೆಯ ರೌಡಿ ನಿಗೃಹ ದಳದ ಅಧಿಕಾರಿ ಹನುಮರಡ್ಡೆಪ್ಪ ಪಿ.ಐ ಅವರ ನೇತೃತ್ವದಲ್ಲಿ ರಾಜಕಿರಣ, ರಾಜಕುಮಾರ, ದೀಪಕ ತಂಡದ ಇವರ ತಂಡ, ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ ಮಹೇಶ ಪಾಟೀಲ್ ಇವರ ಸಮಕ್ಷಮದಲ್ಲಿ ಲಾಡಗೇರಿಯಲ್ಲಿ ಗೋದಾಮಿನ ಮೇಲೆ ದಾಳಿ ನಡೆಸಿ, ನಕಲಿ ಪಾನ್ ಮಸಾಲಾ ಮಾಡುವ ಸಾಮಗ್ರಿಗಳು ಮತ್ತು ಕಚ್ಚಾ ಪದಾರ್ಥಗಳು ಹೀಗೆ ಒಟ್ಟು 34,83,147 ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಹುಲಸೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಅಂಬೇವಾಡಿ ಚೆಕ್ ಪೊಸ್ಟ್ ಮುಖಾಂತರ ಅಕ್ರಮವಾಗಿ ಪಾನ್ ಮಸಾಲ ಸಾಗಿಸುತ್ತಿದ್ದವರ ಮೇಲೆ ನಾಗೇಂದ್ರ, ಪಿ.ಎಸ್.ಐ ಹುಲಸೂರ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ ಶರ್ಫೋದ್ದೀನ್, ,ಮಾಂತೇಶ ಅವರ ತಂಡ ದಾಳಿ ಮಾಡಿ ಪ್ರತಿಷ್ಠಿತ ಕಂಪನಿಯ ಹೆಸರಿರುವ ಪಾನ್ ಮಸಾಲಾ ಮತ್ತು ತಂಬಾಕು ಪದಾರ್ಥಗಳ ಪೌಚಗಳು ಮತ್ತು ಒಂದು ವಾಹನ ಹೀಗೆ ಒಟ್ಟು 6,90,000 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


