ಸೈಬರ್ ಕ್ರೈಮ್ ತಡೆಗಟ್ಟುವ ನಿಟ್ಟಿನಲ್ಲಿ ಕಳೆದ ಮೂರು ವಾರಗಳಲ್ಲಿ ವಂಚಕರು ಬೆಂಗಳೂರಿನ ನಿವಾಸಿಗಳನ್ನು ವಂಚಿಸಲು ಬಳಸುತ್ತಿದ್ದ 15,000ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನು ನಗರ ಪೊಲೀಸರು ಗುರುತಿಸಿ ಬ್ಲಾಕ್ ಮಾಡಿದ್ದಾರೆ.
ಆಗಸ್ಟ್ 16 ರಂದು ವಿಶೇಷ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈ ಕ್ರಮದ ಭಾಗವಾಗಿ, ಪೊಲೀಸರು ಆಗಸ್ಟ್ 16 ರಿಂದ ಸೆಪ್ಟೆಂಬರ್ 7 ರವರೆಗೆ 15, 378 ಸಿಮ್ ಕಾರ್ಡ್‌ಗಳನ್ನು ಗುರುತಿಸಿ ನಿರ್ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


