ಮಧುಗಿರಿ: ಪಟ್ಟಣದಲ್ಲಿ ಸಂತೆ ದಿನವಾದ ಬುಧವಾರದಂದು ಬೆಳಿಗ್ಗೆ ಪೊಲೀಸರ ದಿಢೀರ್ ಪಥಸಂಚಲನ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿತು.
ಯಾವುದೇ ಚುನಾವಣೆ ಇಲ್ಲ, ಯಾವುದೇ ಗಲಭೆಗಳು ಆಗಿಲ್ಲ, ಕೋಮು ಸೌಹಾರ್ತೆಗೆ ಧಕ್ಕೆ ಆಗುವಂತ ಯಾವುದೇ ಪ್ರಕರಣಗಳ ನಡೆಯದಿದ್ದರೂ ಕೂಡ ಡಿವೈಎಸ್ಪಿ ನೇತೃತ್ವದಲ್ಲಿ ನಡೆದ ಪಥ ಸಂಚಲನಕ್ಕೆ ಕಾರಣ. ಇತ್ತೀಚೆಗೆ ಡಿವೈಎಸ್ಪಿ ಕಚೇರಿಯಲ್ಲಿ ಡಿವೈಎಸ್ಪಿ ನಡೆಸಿದ ರಾಸಲೀಲೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿದ್ದನ್ನು ಸಾರ್ವಜನಿಕರಲ್ಲಿ ಪೊಲೀಸರ ಮೇಲೆ ಉಂಟಾದ ಕೆಟ್ಟ ಅಭಿಪ್ರಾಯ ಹೋಗಲಾಡಿಸುವ ಸಲುವಾಗಿ ಮತ್ತು ಕಾನೂನು ಅರಿವು ಜಾಗೃತ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡಿವೈಎಸ್ಪಿ ಮಂಜುನಾಥ್, ಪಿಎಸ್ ಐ ಗಳಾದಂತಹ ವಿಜಯಕುಮಾರ್, ಮುತ್ತುರಾಜ್, ಅಮ್ಮಣ್ಣಗಿ ಮತ್ತು ಮಧುಗಿರಿ ಪೊಲೀಸರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಮಧುಗಿರಿಯ ಡಿವೈಎಸ್ ಪಿ ಕಚೇರಿಯಿಂದ ಹೊರಟ ಜಾತ ದಂಡೋರ ಬಾಗಿಲು ರಸ್ತೆ, ದೊಡ್ಡಪೇಟೆ, ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ರಸ್ತೆ ,ಡೂಂಲೈಟ್ ವೃತ್ತ,, ಹೈ ಸ್ಕೂಲ್ ರಸ್ತೆ, ತಾಲೂಕು ಆಫೀಸ್ ರಸ್ತೆ, ನೃಪತುಂಗ ವೃತ್ತ, ಟಿವಿವಿ ಪೆಟ್ರೋಲ್ ಬಂಕ್ ವೃತ್ತ, ಡಿಸಿಸಿ ಬ್ಯಾಂಕ್ ರಸ್ತೆ , ತುಮಕೂರ್ ಗೇಟ್, ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ರಸ್ತೆ, ಖಾಸಗಿ ಬಸ್ ನಿಲ್ದಾಣದ ಮೂಲಕ ಮಧುಗಿರಿ ಪೊಲೀಸ್ ಠಾಣೆಯವರೆಗೂ ಜಾಗೃತಿ ಜಾಥಾ ನಡೆಯಿತು.
ರೌಡಿಗಳ ಪೆರೇಡ್: ಮಧುಗಿರಿ ಪೊಲೀಸ್ ಠಾಣಾ ಅವಣದಲ್ಲಿ ರೌಡಿಗಳ ಪೆರೇಡ್ ನಡೆಸಿದ ಡಿವೈಎಸ್ಪಿ ಮಂಜುನಾಥ್ ರವರು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx