ಔರಾದ–ಬಿ ಪಟ್ಟಣದ ಎ.ಪಿ.ಎಂ.ಸಿ ಕ್ರಾಸ್ ಹತ್ತಿರ ಮೂರು ವರ್ಷದ ಮಗುವೊಂದು ತನ್ನ ಪಾಲಕರಿಂದ ಆಕಸ್ಮಿಕವಾಗಿ ದಾರಿ ತಪ್ಪಿ ಬಂದಿರುವ ಬಗ್ಗೆ ಮಾಹಿತಿಯ ಮೇರೆಗೆ ಎಸ್.ಜೆ.ಪಿ.ಯು ಘಟಕದ ಅಧಿಕಾರಿಯಾದ ವಾಶೀಂ ಪಟೇಲ್, ಪಿಎಸ್ ಐ, ಔರಾದ ಪೊಲೀಸ್ ಠಾಣೆ ಇವರು ಮಹಿಳಾ ಸಿಬ್ಬಂದಿಯೊಂದಿಗೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಮಗುವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡು ಕೇವಲ ಒಂದು ಗಂಟೆಯೊಳಗೆ ಪೋಷಕರ ಮಡಿಲು ಸೇರಿಸಿದ್ದಾರೆ.
ಮಗುವಿನ ಪಾಲಕರ ಬಗ್ಗೆ ಮಾಹಿತಿ ಪಡೆದು ಠಾಣೆಗೆ ಕರೆಸಿಕೊಳ್ಳಲಾಯಿತು. ಬಳಿಕ ಮಗು ತನ್ನ ಪಾಲಕರಿಗೆ ಗುರುತಿಸಿದ್ದರಿಂದ ಮಗುವನ್ನು ಪಾಲಕರ ಮಡಿಲಿಗೆ ಒಪ್ಪಿಸಲಾಯಿತು.
ಪಾಲಕರಿಂದ ಬೇರ್ಪಟ್ಟ ಮಗುವಿನ ಪಾಲಕರಿಗೆ ಕೇವಲ ಒಂದು ಗಂಟೆಯ ಒಳಗಾಗಿ ಪತ್ತೆ ಹಚ್ಚಿ ಮರಳಿಸಿದ ಔರಾದ ಠಾಣೆಯ ಎಸ್.ಜೆ.ಪಿ.ಯು ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯಕ್ಕೆ ಪ್ರದೀಪ ಗುಂಟಿ ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು ಬೀದರ್ ಶ್ಲಾಘಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296