ಶಿವಮೊಗ್ಗ : ಸುಮಾರು 3 ಸಾವಿರ ಹಾಫ್ ಹೆಲ್ಮೆಟ್ ಗಳು, 70 ಸೈಲೆನ್ಸರ್‌ಗಳನ್ನು ಸಂಚಾರ ಪೊಲೀಸರು ನಾಶಪಡಿಸಿದ್ದಾರೆ. ಸರ್ಕಲ್ ನಲ್ಲಿ ಎಲ್ಲವನ್ನು ಸಾಲಾಗಿ ಜೋಡಿಸಿ ಅವುಗಳ ಮೇಲೆ ರೋಡ್ ರೋಲರ್ ಹತ್ತಿಸಲಾಯಿತು.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್ ಸೇರಿದಂತೆ ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣೆಯ ಸಿಬ್ಬಂದಿ ಇದ್ದರು. ಕಾರ್ಯಾಚರಣೆಯನ್ನು ವೀಕ್ಷಿಸಲು ಗೋಪಿ ಸರ್ಕಲ್ ನಲ್ಲಿ ದೊಡ್ಡ ಸಂಖ್ಯೆಯ ಜನ ಜಮಾಯಿಸಿದ್ದರು.
ಹಾಫ್ ಹೆಲ್ಮೆಟ್ ಗಳ ವಿರುದ್ಧ ಸಂಚಾರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿರುವುದು ಇದೆ ಮೊದಲಲ್ಲ. ಕೆಲವು ತಿಂಗಳ ಹಿಂದೆ ಸಾವಿರಾರು ಹಾಫ್ ಹೆಲ್ಮೆಟ್‌ಗಳನ್ನು ದ್ವಿಚಕ್ರ ವಾಹನ ಸವಾರರಿಂದ ವಶಕ್ಕೆ ಪಡೆದು ನಾಶ ಪಡಿಸಿದ್ದರು. ಇನ್ನು ಹಾಫ್ ಹೆಲ್ಮೆಟ್ ಮಾರಾಟ ಮಾಡುತ್ತಿದ್ದ ಅಂಡಿಗಳ ಮೇಲು ದಾಳಿ ನಡೆಸಿದ್ದರು. ಹಾಫ್ ಹೆಲ್ಮೆಟ್‌ನಿಂದ ವಾಹನ ಸವಾರರಿಗೆ ರಕ್ಷಣೆ ಸಿಗುವುದಿಲ್ಲ.
ಐಎಸ್ ಐ ಗುರುತಿನ ಹೆಲ್ಮೆಟ್ ಧರಿಸುವಂತೆ ಪೊಲೀಸರು ಜಾಗೃತಿ ಮೂಡಿಸಿದ್ದರು. ಇನ್ನು, ಬೈಕುಗಳಿಗೆ ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಗಳನ್ನು ಅಳವಡಿಸಿ ತಿರುಗಾಡುತ್ತಿದ್ದವರಿಗು ಪೊಲೀಸರು ಬಿಸಿ ಮುಟ್ಟಿಸಿದ್ದರು. ಈ ಪುನಃ ಕಾರ್ಯಾಚರಣೆ ನಡೆಸಿದ್ದಾರೆ.


