ಹಾವೇರಿ ಜಿಲ್ಲೆಯಲ್ಲಿ ಡಿ.ಆರ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಪೇದೆಯೊಬ್ಬ (Police Constable) ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಇದೀಗ ಬೇರೆ ಮದುವೆಯಾಗಲು ಹೊರಟಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ರವಿ ಬನ್ನಿಮಟ್ಟಿ ಎಂಬ ಪೊಲೀಸ್ ಪೇದೆ, ಐದು ವರ್ಷಗಳಿಂದ ನನ್ನನ್ನ ಪ್ರೀತಿಸಿ, ಲೈಂಗಿಕವಾಗಿ ಬಳಸಿಕೊಂಡು ಅನ್ಯಾಯ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಯುವತಿ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಪೇದೆ ರವಿ ಬನ್ನಿಮಟ್ಟಿ 5 ವರ್ಷದಿಂದ ಪ್ರೀತಿಸುತ್ತಿದ್ದನಂತೆ. ಜೊತೆಗೆ ಆಕೆಯನ್ನು ಲೈಂಗಿಕವಾಗಿ (Sexual) ಬಳಸಿಕೊಂಡಿದ್ದು, ನಾಲ್ಕು ಬಾರಿ ಆಪರೇಷನ್ ಕೂಡ ಮಾಡಿಸಿಕೊಂಡಿರುವುದಾಗಿ ಯುವತಿ ಹೇಳಿದ್ದಾಳೆ.
ಇನ್ನು ನಾನು ನಿನ್ನ ಮದುವೆ ಆಗುವುದಿಲ್ಲ ಎಂದು ಹೇಳಿರುವ ಪೊಲೀಸ್ ಪೇದೆ ರವಿ ಬನ್ನಿಮಟ್ಟಿ, ಮುಂಜಾಗೃತವಾಗಿ ಬೇಲ್ ಪಡೆದುಕೊಂಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ನನಗೆ ನ್ಯಾಯ ಬೇಕು. ಪೊಲೀಸ್ ಪೇದೆಯೊಂದಿಗೆ ಮದುವೆ ಮಾಡಿಸಿ, ನನಗೆ ನ್ಯಾಯ ಕೊಡಿಸಿ ಎಂದು ಮಾಧ್ಯಮಗಳ ಮುಂದೆ ಯುವತಿ ಶೋಭಾ ಮನವಿ ಮಾಡಿದ್ದಾಳೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


