ತುಮಕೂರು: ಒತ್ತಡದ ಕೆಲಸದಲ್ಲಿ ನಿರತರಾಗಿರುವ ಪೊಲೀಸ್ ಸಿಬ್ಬಂದಿಗಳು ಚಟುವಟಿಕೆಯಿಂದ ಇರಲು ಅನೇಕ ರೀತಿಯ ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಳ್ಳುತ್ತಾರೆ, ಅದೇ ರೀತಿ ತುಮಕೂರು ಪೊಲೀಸರು ವಿಭಿನ್ನವಾಗಿ ʼಕುರುಕ್ಷೇತ್ರʼ ನಾಟಕದಲ್ಲಿ ಪಾತ್ರಧಾರಿಗಳಾಗಿ ಭಾಗವಹಿಸಿರುವುದು ವಿಶೇಷವಾಗಿತ್ತು.
ಹೌದು ತುಮಕೂರು ಜಿಲ್ಲಾ ಪೊಲೀಸ್ ಕವಾಯಲು ಮೈದಾನದಲ್ಲಿ ಕುರುಕ್ಷೇತ್ರ ನಾಟಕವನ್ನು ಪೊಲೀಸ್ ಸಿಬ್ಬಂದಿಗಳು ಆಯೋಜಿಸಿದ್ದರು. ಅರ್ಜುನ ಪಾತ್ರಧಾರಿಯಾಗಿ ತಿಲಕ್ ಪಾಕ್ ಸಕಲ್ ಇನ್ಸ್ ಪೆಕ್ಟರ್ ಪುರುಷೋತ್ತಮ್, ದುರ್ಯೋಧನನಾಗಿ ತುಮಕೂರು ನಗರ ಡಿವೈಎಸ್ಪಿ ಚಂದ್ರಶೇಖರ್, ಶ್ರೀಕೃಷ್ಣನ ಪಾತ್ರಧಾರಿಯಾಗಿ ತುಮಕೂರು ನಗರ ಠಾಣೆಯ ಎಲ್.ನರಸಿಂಹರಾಜು ಸೇರಿದಂತೆ ಕುರುಕ್ಷೇತ್ರದ ಎಲ್ಲಾ ಪಾತ್ರಗಳಲ್ಲಿ ಪೊಲೀಸರು, ಇಲಾಖೆ ಅಧಿಕಾರಿಗಳು ನಟಿಸಿ ತಮ್ಮ ಕಲಾಪ್ರೌಢಿಮೆಯನ್ನು ಪ್ರದಶಿಸಿದರು.
ಈ ಮೂಲಕ ಪೊಲೀಸರ ಸಿಬ್ಬಂದಿಗಳು ಸಹ ತಮ್ಮೊಳಗೆ ಅಡಗಿರುವ ರಂಗಕಲೆಯನ್ನು ಅನಾವರಣಗೊಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4