ಬೆಂಗಳೂರು; ಪೊಲೀಸರ ಮೇಲೆಯೇ ಸಿಮೆಂಟ್ ಇಟ್ಟಿಗೆಯಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ದರೋಡೆಕೋರನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ನೆಲಮಂಗಲದ ದಾನೋಜಿಪಾಳ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ನೆಲಮಂಗಲದ ದರೋಡೆಕೋರ ಯೋಗಾನಂದ ಅಲಿಯಾಸ್ ನೈಟ್ಶಿಫ್ಟ್ ಯೋಗಿ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಸ್ಥಳ ಮಹಜರು ಮಾಡುವ ವೇಳೆ ಆರೋಪಿಯ ಯೋಗಾನಂದ ಪೊಲೀಸರ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಲು ಮುಂದಾಗಿದ್ಧ.
ಈ ವೇಳೆ ಯೋಗಾನಂದ ಕಾಲಿಗೆ ಪೊಲೀಸರು ಗುಂಡು ಹಾರಿಸಿದರು ಈ ಸಮಯದಲ್ಲಿ ಕಾನ್ಸ್ ಟೆಬಲ್ ಹನುಮಂತ ಹಿಪ್ಪರಗಿ ಅವರ ಕೈಗಳಿಗೆ ಗಾಯವಾಗಿದೆ. ನೆಲಮಂಗಲ ಟೌನ್ ಪೊಲೀಸ್ ಇನ್ಸ್ ಪೆಕ್ಟರ್ ಶಶಿಧರ್ ರಿಂದ ಗುಂಡು ಹಾರಿಸಿ ಬಂಧಿಸಿದರು. ಆರೋಪಿಯ ಮೇಲೆ 18 ಪ್ರಕರಣಗಳಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


