ಟೋಕಿಯೋ(ಜಪಾನ್): ಭಾರತವು ರಾಜಕೀಯ ಹಾಗೂ ಆರ್ಥಿಕ ಸ್ಥಿರತೆಗಳಲ್ಲಿ ಪಾರ ದರ್ಶಕತೆ ಹೊಂದಿದ್ದು ವಿಶ್ವದಲ್ಲೇ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರಮೋದಿ ತಿಳಿಸಿದರು.
ಭಾರತ ಮತ್ತು ಜಪಾನ್ ನಡುವಿನ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಅವರು, ದೇಶದ ರಾಜಕೀಯ, ಆರ್ಥಿಕ ಸ್ಥಿರತೆ ನೀತಿಗಳಲ್ಲಿ ಪಾರದರ್ಶಕತೆ ಮತ್ತು ಭವಿಷ್ಯವಾಣಿಯನ್ನು ಹೊಂದಿದೆ. ಭಾರತ ಇಂದು ವಿಶ್ವದಲ್ಲೇ 3ನೇ ಅತಿದೊಡ್ಡ ರಾಷ್ಟ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಂಡವಾಳವು ಕೇವಲ ಬೆಳೆಯುವುದಿಲ್ಲ. ಅದು ಗುಣಿಸುತ್ತದೆ. ಕಳೆದ 12 ವರ್ಷಗಳಲ್ಲಿ ಆಗಿರುವ ಬೆಳವಣಿಗೆ ಮತ್ತು ಪರಿವರ್ತನೆ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ನಾವು ಜಾಗತಿಕ ಜಿಡಿಪಿಗೆ ಶೇ.18ರಷ್ಟು ಕೊಡುಗೆ ನೀಡುತ್ತೇವೆ. ಮಾರುಕಟ್ಟೆಗಳು ಬಲವಾದ ಆದಾಯವನ್ನು ನೀಡುತ್ತದೆ. ಸುಧಾರಣೆ, ರೂಪಾಂತರ, ಕಾರ್ಯಕ್ಷಮತೆಯ ನಮ ವಿಧಾನವು ಪ್ರಗತಿಗೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಜೆಟ್ರೊ ಹೇಳುವಂತೆ ಶೇ.80ರಷ್ಟು ಕಂಪನಿಗಳು ಭಾರತದಲ್ಲಿ ವಿಸ್ತರಿಸಲು ಬಯಸುತ್ತಿವೆ. ಶೇ.75ರಷ್ಟು ಕಂಪನಿಗಳು ಲಾಭ ಗಳಿಸುತ್ತಿವೆ. ನಮಲ್ಲಿ ಬಂಡವಾಳ ಹೂಡಿದರೆ ಅದು ಕೇವಲ ಬೆಳೆಯುವುದಲ್ಲ ಗುಣಿಸುತ್ತಾ ಹೋಗುತ್ತದೆ. ಅಂದರೆ ನಿಮ ಹೂಡಿಕೆಗೆ ಲಾಭ ಬರುತ್ತದೆ ಎಂದು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC