ತುಮಕೂರು: ನಗರದ ಸರಕಾರಿ ಪ್ರವಾಸಿ ಮಂದಿರದಲ್ಲಿ ಸಂಸದ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಕಚೇರಿ ಉಪಯೋಗಕ್ಕೆ ನೀಡಿ ಹೊರಡಿಸಲಾಗಿದ್ದ ಆದೇಶವನ್ನು ಹಿಂಪಡೆದಿರುವುದರಲ್ಲಿ ರಾಜಕೀಯ ಕೈವಾಡವಿದೆ ಎಂದು ವಿಧಾನಸಭೆ ಜೆಡಿಎಸ್ ವಿರೋಧಪಕ್ಷದ ನಾಯಕ ಸುರೇಶ್ ಬಾಬು ಅನುಮಾನ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಆದೇಶ ವಾಪಸ್ ಪಡೆದಿರುವುದರಲ್ಲಿ ರಾಜಕೀಯ ಅಡಗಿದೆಯೇ, ಅಥವಾ ಕಚೇರಿಯನ್ನು ಕೊಟ್ಟು ಅದನ್ನು ವಾಪಸ್ ಪಡೆಯುವುದು ಒಂದು ದಂಧೆಯಾಗಿದೆಯೇ ಎಂದು ಅನುಮಾನ ವ್ಯಕ್ತವಾಗಿದೆ. ಸರಕಾರ ಒಂದು ನಿಯಮ ಇಟ್ಟುಕೊಂಡಿರಬೇಕು, ಇದ್ರಲ್ಲಿ ಕೈವಾಡವಿದೆಯೆ ಎಂದು ಅನುಮಾನ ಮೂಡಿದೆ. ಇದ್ರಲ್ಲಿ ರಾಜಕೀಯ ಬೆರೆಸದೆ ಗೌರವಯುತವಾಗಿ ಸರಕಾರ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಂಸದರು ಮತ್ತು ಸಚಿವರಾಗಿರುವ ವಿ.ಸೋಮಣ್ಣ ಸರಕಾರದ ಒಂದು ಅಂಗವಾಗಿದ್ದಾರೆ. ಈ ಸ್ಥಳವು ಸಂಸದರ ಕಚೇರಿಗೆ ಸಹಕಾರಿಯಾಗಿತ್ತು. ಸರಕಾರಿ ಐಬಿ ಬಳಕೆಯಲ್ಲಿರಲಿಲ್ಲ. ಏನೂ ಕೂಡ ಉಪಯೋಗ ಆಗುತ್ತಿರಲಿಲ್ಲ. ಶಿಥಿಲಗೊಂಡಿತ್ತು. ಜಿಲ್ಲಾಧಿಕಾರಿಗಳು ಗುರುತಿಸಿ, ಸರಕಾರದ ಆದೇಶದ ಮೇರೆಗೆ ಲೋಕಸಭೆ ಸದಸ್ಯರು ಮತ್ತು ಕೇಂದ್ರದ ಸಚಿವರಿಗೆ ಕಚೇರಿಗೆ ಉಪಯೋಗಿಸಲು ಆದೇಶ ಹೊರಡಿಸಲಾಗಿತ್ತು ಎಂದರು.
ಆದರೆ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ೮ ವಿಧಾನ ಸಭಾ ಕ್ಷೇತ್ರದ ಮತದಾರರ ಕೆಲಸಗಳನ್ನು ತೊಡಗಿಸಿಕೊಳ್ಳಲು ಸಹಕಾರಿಯಾಗಿತ್ತು. ಇಂದು ಸರಕಾರಿ ಕಾಯದರ್ಶಿಗಳು ರದ್ದುಪಡಿಸಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ.
ಜಿಲ್ಲಾಧಿಕಾರಿ ಅದನ್ನು ನವೀಕರಣ ಮಾಡಿಸಿ ಸಂಸದರ ಕಚೇರಿಗೆ ಉಪಯೋಗಕ್ಕೆ ನೀಡಲಾಗಿತ್ತು. ಆದರೆ ಅನುಮತಿ ರದ್ದುಪಡಿಸಲಾಗಿದೆ ಎಂದು ದಿಢೀರ್ ಆದೇಶ ಹೊರಡಿಸಿರುವುದರಲ್ಲಿ ರಾಜಕೀಯ ಹಸ್ತಕ್ಷೇಪವಿದೆ ಎಂಬ ಅನುಮಾನ ವ್ಯಕ್ತವಾಗಿದೆ ಎಂದು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q