ಮೈಸೂರು: ಮಂಡ್ಯ ನಂತರ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ದ್ವೇಷದ ರಾಜಕಾರಣದ ಆರೋಪ ಕೇಳಿಬಂದಿದೆ. K.R.ನಗರ ಶಾಸಕ ಡಿ.ರವಿಶಂಕರ್ ಮೇಲೆ ಈ ಆರೋಪ ಕೇಳಿ ಬಂದಿದೆ.
ಅರಕೆರೆ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯುವಂತೆ ಒತ್ತಡ ಹಾಕುತ್ತಿದ್ದು, ಕೆಲಸ ಬಿಡುವಂತೆ ಹೇಳುತ್ತಿರುವ ಪ್ರಿನ್ಸಿಪಾಲ್ ಸ್ವಾಮಿ ನೌಕರರಿಗೆ ಸೂಚಿಸುತ್ತಿದ್ದಾರೆ. ಕೆಲಸ ಬಿಡಿ ಇಲ್ಲ ಅಂದರೆ ಶಾಸಕ, ಶಾಸಕರ ಪಿಎರನ್ನು ಭೇಟಿ ಮಾಡಿ, ನಿಮ್ಮ ಸಮಸ್ಯೆ ಸರಿಪಡಿಸಿಕೊಂಡು ಬನ್ನಿ ಎಂದು ಹೇಳುತ್ತಿದ್ದು, ಮನನೊಂದ ನೌಕರ ಚಲುವರಾಜು ಅವರು ಕಣ್ಣೀರಿಟ್ಟಿದ್ದಾರೆ.
ಚಲುವರಾಜು ಅವರಿಗೆ ಹೊರ ಗುತ್ತಿಗೆ ಆಧಾರದಲ್ಲಿ ಸಾ.ರಾ.ಮಹೇಶ್ ಅವರು ಕೆಲಸ ಕೊಡಿಸಿದ್ದರು. ಅದರಂತೆ 15 ವರ್ಷದಿಂದ ಮುಖ್ಯ ಅಡುಗೆ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಬೆಂಬಲಿತ ಎಂಬ ಕಾರಣಕ್ಕೆ ಕೆಲಸದಿಂದ ತೆಗೆಯುತ್ತಿರುವ ಆರೋಪ ಕೇಳಿಬಂದಿದೆ. ಇಷ್ಟು ದಿನ ಕೆಲಸ ಮಾಡಿದ್ದೀರಿ, ಈಗ ನಮ್ಮ ಬೆಂಬಲಿಗರಿಗೆ ಕೆಲಸ ಕೊಡಬೇಕು ಎಂದು ನೇರವಾಗಿ ಶಾಸಕ ಡಿ.ರವಿಶಂಕರ್ ಖಾಸಗಿ ಪಿಎ ನವೀನ್ ಹೇಳಿದ್ದಾರಂತೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


