ತನ್ನ ಸಾವಿನ ವದಂತಿಯನ್ನು ತಾನೇ ಹಬ್ಬಿಸಿಕೊಂಡಿರುವ ಮಾಡೆಲ್, ನಟಿ ಪೂನಂ ಪಾಂಡೆಗೆ ಇದೀಗ ಕಾನೂನಿನ ಸಂಕಷ್ಟ ಎದುರಾಗಿದ್ದು, ಮುಂಬೈನಲ್ಲಿ ಪತ್ರಕರ್ತರೊಬ್ಬರು ಪೂನಂ ಪಾಂಡೆ ವಿರುದ್ಧ ದೂರು ದಾಖಲಿಸಿದ್ದಾರೆ.
ಪೂನಂ ಪಾಂಡೆ ಅವರ ಸಾವಿನ ಕುರಿತು ಸುಳ್ಳು ಸುದ್ದಿ ಹರಡಲು ಕಾರಣರಾದ ಎಲ್ಲರ ವಿರುದ್ಧವೂ ಎಫ್ ಐಆರ್ ದಾಖಲಿಸಿ. ಇಂತಹ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗರ್ಭಕಂಠದ ಕ್ಯಾನ್ಸರ್ನಿಂದ ಪೂನಂ ಪಾಂಡೆ ನಿಧನರಾದರು ಎಂಬ ಸುದ್ದಿ ದೇಶಾದ್ಯಂತ ವ್ಯಾಪಕವಾಗಿ ಹರಿದಾಡಿತ್ತು. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ತನಕ ಅನೇಕರು ಪೂನಂ ಪಾಂಡೆಗೆ ಶ್ರದ್ಧಾಂಜಲಿ ಅರ್ಪಿಸಿದ್ದರು. ಆದ್ರೆ ಕೇವಲ ಪ್ರಚಾರಕ್ಕಾಗಿ ನಟಿ ತನ್ನ ಸಾವಿನ ಸುದ್ದಿಯನ್ನು ತಾನೇ ಹಬ್ಬಿಸಿರೋದಾಗಿ ಆ ನಂತರ ತಿಳಿದು ಬಂದಿತ್ತು.
ಪೂನಂ ಪಾಂಡೆ ಅವರು ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ತಮ್ಮದೇ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರು. ಅವರ ಉದ್ದೇಶ ಒಳ್ಳೆಯದೇ ಆಗಿದ್ದರೂ ಕೂಡ ಮಾರ್ಗ ಸರಿಯಾಗಿಲ್ಲ ಎಂದು ತೀವ್ರ ಟೀಕೆ ವ್ಯಕ್ತವಾಗುತ್ತಿದೆ.


