ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಾಡುಗೊಲ್ಲರ ನಿಗಮದ ವಿಚಾರವಾಗಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮತ್ತು ಅವರ ಪತಿ ಡಿ.ಟಿ.ಶ್ರೀನಿವಾಸ್ ಆಂತರಿಕ ವಿರೋಧದ ಧೋರಣೆಯನ್ನು ಹೊಂದಿದ್ದಾರೆಂದು ಬಿ ಜೆ ಪಿ ಪಕ್ಷದ ತಾಲ್ಲೂಕಿನ ಅಧ್ಯಕ್ಷರಾದ ವಿಶ್ವನಾಥ್ ಯಾದವ್ ಅಭಿಪ್ರಾಯಪಟ್ಟರು.
ಹಿರಿಯೂರು ನಗರದ ಹೊರವಲಯದಲ್ಲಿರುವ ಕೋಳಿ ಪ್ರಭುಯಾದವ್ , ರವರ ತೋಟದ ಮನೆಯಲ್ಲಿ ಆಯೋಜಿಸಿದ್ದ ಕಾಡುಗೊಲ್ಲರ ಚಿಂತನ-ಮಂಥನ ಸಭೆಯಲ್ಲಿ ಮಾತನಾಡಿದ ಅವರು, ಶಾಸಕರು, ಮತ್ತು ಅವರ ಪತಿ ಸೇರಿ ಅಧಿಕಾರ ಪಡೆಯಲು ನಮ್ಮನ್ನ ಬಳಸಿಕೊಂಡು ಸಿಕ್ಕಅಧಿಕಾರದ ಅಮಲಿನಲ್ಲಿ ಕಾಡುಗೊಲ್ಲರಿಗೆ ದ್ರೋಹ ಬಗೆಯುವುದರಲ್ಲಿ ನಿರಂತರವಾಗಿದ್ದಾರೆ ಎಂದು ಆರೋಪಿಸಿದರು.
ಬುಡಕಟ್ಟು ಪರಂಪರೆಯನ್ನು ಹೊಂದಿರುವ ಕಾಡುಗೊಲ್ಲ ಸಮಾಜ ಸರ್ಕಾರದ ಹಲವಾರು ಸಲತ್ತುಗಳಿಂದ ವಂಚಿತವಾಗಿದೆ. ಸಮಾಜದಲ್ಲಿನ ಪಟ್ಟಭದ್ರರು ಸಮಾಜವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಆದರೆ ಶಾಸಕಿ ಪೂರ್ಣಿಮಾ ಅವರು ಕುಲಶಾಸ್ತ್ರ ಅಧ್ಯಯನವನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ . ಕಾಡುಗೊಲ್ಲ ಅಭಿವೃದ್ದಿ ನಿಗಮದ ಘೋಷಣೆಗೆ ತಡೆಯೊಡ್ಡಿ ವಿಳಂಭ ಧೋರಣೆಗಳೊಂದಿಗೆ ದಿನಗಳನ್ನು ಮಾಡುತ್ತಿದ್ದಾರೆ ಎಂಬುದಾಗಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಾಡುಗೊಲ್ಲ ಸಮಾಜದ ಜಿಲ್ಲಾಧ್ಯಕ್ಷರಾದ ಮೀಸೆ ಮಹಲಿಂಗಪ್ಪ ನವರು ತಿಳಿಸಿದರು.
ಹಿರಿಯೂರು ತಾಲ್ಲೂಕಿನ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚಿತ್ರಜಿತ್ ಯಾದವ್ ಅವರು ಮಾತನಾಡಿ, ಕಾಡುಗೊಲ್ಲ ಸಮಾಜವನ್ನು ಎಸ್ ಟಿ ಪಟ್ಟಿಗೆ ಸೇರಿಸಲು ಹೋರಾಟವನ್ನು ಚುರುಕುಗೊಳಿಸಬೇಕು . ಶೀಘ್ರ ನಿಗಮ ಸ್ಥಾಪಿಸಲು ಸರ್ಕಾರಕ್ಕೆ ಒತ್ತಾಯಿಸಬೇಕು ಎಂದರು.
ತಾಲ್ಲೂಕು ಬಿ ಜೆ ಪಿ ಅಧ್ಯಕ್ಷರಾದ ವಿಶ್ವನಾಥ್ ಮಾತನಾಡಿ, ನಾವೇ ನೆಲೆ ಕೊಟ್ಟಂತ ಜನ ಇಂದು ನಮ್ಮನ್ನೆ ತುಳಿಯಲು ಹೊರಟಾಗ ನಾವೇಕೆ ಗಂಡಸರಾಗಬಾರದು , ಸಮಾಜದಲ್ಲಿ ಅವರಿಗೆ ಬೆಲೆ ಬಂದಿದ್ದು, ಈ ಕಾಡುಗೊಲ್ಲ ಸಮಾಜದಿಂದ ಸರ್ಕಾರಕ್ಕೆ ತಲೆನೋವು ತರುವಂತಹ ರಾಜಕೀಯ ಧೋರಣೆಗಳಿಂದ ಇಂದು ನಾವೆಲ್ಲಾ ಅಸ್ತಿತ್ವಕ್ಕಾಗಿ ಹೋರಾಟ ಮಾಡಬೇಕಾದ ಸಂದರ್ಭ ಇದೀಗ ಬಂದಿದೆ. ಇವರಿಂದ ಕಾಡುಗೊಲ್ಲರಿಗೆ ನೆಲೆ ಇಲ್ಲದಂತಾಗಿದೆ ಎಂದು ಶಾಸಕಿ ಪೂರ್ಣಿಮಾ ಮತ್ತು ಪತಿ ಶ್ರೀನಿವಾಸ್ ಹೆಸರು ಬಳಸದೇ ತಾಲ್ಲೂಕು ಬಿಜೆಪಿ ಅಧ್ಯಕ್ಷ ವಿಶ್ವನಾಥ್ ಕಿಡಿಕಾರಿದ್ದಾರೆ.
ನಾವೆಲ್ಲಾ ಸೇರಿ ಒಗ್ಗಟ್ಟಾಗಿ ಧೈರ್ಯದಿಂದ ಇಂತಹವರನ್ನು ಎದುರಿಸಬೇಕು , ಮುಂದೆ ಬರುವ ಯಾವುದೇ ಹುದ್ದೆ ಸವಲತ್ತುಗಳು ಕಾಡುಗೊಲ್ಲ ಸಮಾಜಕ್ಕೆ ಸೇರಬೇಕು. ನಮ್ಮ ನಿರಂತರ ಹೋರಾಟದಿಂದ ಕಾಡುಗೊಲ್ಲ ನಿಗಮ ಆಗಿಯೇ ಆಗುತ್ತದೆ, ಯಾವುದೇ ಚಿಂತೆ ಮಾಡಬೇಕಾಗಿಲ್ಲ ಹಾಗೂ ಕಾಡುಗೊಲ್ಲ ಸಮಾಜ ಎಸ್ಟಿ ಸೇರ್ಪಡೆಗೆ ನಮ್ಮ ಹೋರಾಟ ನಿರಂತರವಾಗಿರಬೇಕು , ತಾಲ್ಲೂಕು , ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ದೊಡ್ಡ ಆಂದೋಲನ ಮಾಡಲು ನಾವೆಲ್ಲರೂ ಸಹ ಸಿದ್ದರಾಗಬೇಕು ಎಂಬುದಾಗಿ ಹೇಳಿದರು .
ಕಾಡುಗೊಲ್ಲ ಕ್ಷೇಮಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶಿವು ಯಾದವ್ ರವರು ಮಾತನಾಡಿ, ಜನಾಂಗದ ಸಮಸ್ಯೆಗಳಿಗೆ ಧ್ವನಿಯಾಗಿ ಸ್ಪಂದಿಸುವ ಬದಲು ಪರಸ್ಪರ ಕಚ್ಚಾಡುವಂತೆ ಮಾಡಿ ಸಮಾಜದಲ್ಲಿ ಪರಸ್ಪರರಿಗೆ ದ್ವೇಷದ ಕಿಡಿಗಳನ್ನು ಹಚ್ಚುವುದೇ ಡಿ.ಟಿ.ಶ್ರೀನಿವಾಸ್ ರವರ ಬಹುದೊಡ್ಡ ಸಾಧನೆಯಾಗಿದೆ . ಸಮಾಜದ ಯುವಕರನ್ನು ದಾರಿತಪ್ಪಿಸಿ ಸ್ವಾರ್ಥ ಕಾರ್ಯಗಳಿಗೆ ಸಾಧಿಸಿಕೊಳ್ಳುವುದೇ ಇವರಿಬ್ಬರ ಕಾಯಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಡುಗೊಲ್ಲ ಮುಖಂಡರಾದ ಗೋಪಿಯಾದವ್ , ಡಾ.ಡಿ ದೊಡ್ಡಮಲ್ಲಯ್ಯ , ಚಳ್ಳಕೆರೆ ವೀರಭದ್ರಬಾಬು, ತಾಲ್ಲೂಕು ಬಿ ಜೆ ಪಿ ಅಧ್ಯಕ್ಷ ವಿಶ್ವನಾಥ್ , ಮ್ಯಾಕ್ಲೂರಹಳ್ಳಿ ಎಸ್ ತಿಮ್ಮಯ್ಯ , ಪ್ರಭುಯಾದವ್ , ಕೆ.ಟಿ. ತಿಪ್ಪೇಸ್ವಾಮಿ, ಬಸವರಾಜ್ ಚಂದ್ರ, ಆಸೆ ಸಣ್ಣಪ್ಪ, ವಕೀಲರು ಪಾಪಣ್ಣ, ಜಿಲ್ಲಾಪಂಚಾಯಿತಿ ಸದಸ್ಯರು ಎಸ್ ಆರ್ ಟಿ ತಿಪ್ಪೇಸ್ವಾಮಿ , ಪ್ರಭು ಯಾದವ್ , ವಿಶ್ವನಾಥ್ , ರಂಗಯ್ಯ , ಹಾಲು ಮಾರ್ ಹಟ್ಟಿ ವಿಜೇಂದ್ರ , ಮಾಗಡಿ ಜಯರಾಮಣ್ಣ , ಶಿವು ಯಾದವ್, ವಕೀಲ ಸಂಘ ಅಧ್ಯಕ್ಷರು ಸಿದ್ದೇಶ್ ಯಾದವ್, ಕೃಷ್ಣ ಪೂಜಾರಿ ,ಬ್ಯಾಡರಹಳ್ಳಿ ಮಂಜುನಾಥ್, ಪಿ ಆರ್ ದಾಸ್ , ವಕೀಲರು ಹರೀಶ್ ಕುಮಾರ್ ಬಿ ಆರ್ , ಆದಿವಾಲ ಈರಣ್ಣ , ನಾಗರಾಜ್ ಯಲ್ಲದಕೆರೆ , ದೊಡ್ಡ ಬೊಮ್ಮಣ್ಣ ಮೊಳಕಾಲ್ಮೂರು ,ಇನ್ನು ಇತರರು ಅಧಿಕ ಹೆಚ್ಚಿನ ರೀತಿಯಲ್ಲಿ ಕಾಡುಗೊಲ್ಲ ಮುಖಂಡರು ಭಾಗವಹಿಸಿದ್ದರು.
ವರದಿ: ಮುರುಳಿಧರನ್ ಆರ್, ಹಿರಿಯೂರು ( ಚಿತ್ರದುರ್ಗ )
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy