ಜನಪ್ರಿಯ ಹಿಂದಿ ಚಲನಚಿತ್ರ ಹಿನ್ನೆಲೆ ಗಾಯಕ ಅನುಪ್ ಘೋಷಾಲ್(78) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಅವರು ಶುಕ್ರವಾರ ಹೃದಯಾಘಾತದಿಂದ ಕೊನೆಯುಸಿರೆಳೆದರು.
ಬಂಗಾಳಿ ಹಾಡುಗಳ ಜೊತೆಗೆ, ‘ಮಾಸೂಮ್’ ಚಿತ್ರದ’ ತುಜೈ ನರಾಜ್ ನಹಿ ಜಿಂದಗಿ’ ನಂತಹ ಸಾಂಪ್ರದಾಯಿಕ ಹಾಡುಗಳಿಗೆ ಅವರು ಹೆಸರುವಾಸಿಯಾಗಿದ್ದರು. ಕೇವಲ ಹಾಡುಗಾರಿಕೆಯಲ್ಲಿ ಮಾತ್ರವಲ್ಲದೇ, 2011ರಲ್ಲಿ ಟಿಎಂಸಿಯಿಂದ ಶಾಸಕರಾಗಿಯೂ ಗೆಲುವು ಸಾಧಿಸಿದ್ದರು.


