ಹೆಚ್.ಡಿ.ಕೋಟೆ: ಪಟ್ಟಣದ ಬಿ ಜಿ ಎಸ್ ಭವನದಲ್ಲಿ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಪೋಷಣ್ ಅಭಿಯಾನದ ಅಂಗವಾಗಿ ಆಶಾ ಕಾರ್ಯಕರ್ತರಿಗೆ ಕಿಟ್ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಟಿ. ರವಿಕುಮಾರ್ ಪೋಷಣ್ ಅಭಿಯಾನದ ಅಡಿಯಲ್ಲಿ ಗರ್ಭೀಣಿಯರಿಗೆ ಪೌಷ್ಟಿಕಾಂಶ ಉಳ್ಳಂತಹ ಆಹಾರ ಪದಾರ್ಥಗಳನ್ನು ಅಂಗನವಾಡಿ ಮತ್ತು ಆಶಾಕಾರ್ಯಕರ್ತರ ಸಮ್ಮುಖದಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಆಶಾ ಮಾತನಾಡಿ, ಮಕ್ಕಳಿಗೆ ಮಹಿಳೆಯರಿಗೆ ಕಾಲ ಕಾಲಕ್ಕೆ ಪೌಷ್ಠಿಕ ಆಹಾರ ಒದಗಿಸುವುದರಿಂದ ಅಪೌಷ್ಠಿಕತೆಯನ್ನು ತೊಲಗಿಸಬಹುದು. ಈ ನಿಟ್ಟಿನಲ್ಲಿ ನಮ್ಮ ಇಲಾಖೆ ಪ್ರಾಮಾಣಿಕ ಕೆಲಸ ಮಾಡುತಿದೆ ಗರ್ಭೀಣಿಯರಿಗೆ ಪ್ರತೀ ತಿಂಗಳು ಪೌಷ್ಠಿಕ ಆಹಾರ ವಿತರಣೆ ಮಾಡುತಿದ್ದು ಇದರಲ್ಲಿ ನಮ್ಮ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ನಾವು ಎಲ್ಲಾವನ್ನು ಹಣವನ್ನು ನೀಡಿ ಕೊಂಡುಕೊಳ್ಳಬಹುದು, ಆದರೆ ಆರೋಗ್ಯವನ್ನು ಹಣಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲ. ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ನೀಡುವ ಮಾಹಿತಿಯಿಂದ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಕೇತಿಕವಾಗಿ ಆಶಾಕಾರ್ಯಕರ್ತರಿಗೆ ಕಿಟ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಸೋಮಣ್ಣ, ತಹಶೀಲ್ದಾರ ಸಣ್ಣರಾಮಪ್ಪ, ಚಿಕ್ಕವೀರನಾಯಕ, ಸರಳ, ಶಾಸಕ ಅನಿಲ್ ಚಿಕ್ಕಮಾದು, ಡಾ.ರವಿಕುಮಾರ್, ಸಿ ಡಿ ಪಿ ಒ ಆಶಾ, ಮುಖಂಡ ನಾಗರಾಜು ಹಾಜರಿದ್ದರು
ವರದಿ: ಮಲಾರ ಮಹದೇವಸ್ವಾಮಿ


