ಮುಂಬಯಿ: ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ಕ್ಲಿಪ್ ಗಳನ್ನು ಹಂಚಿಕೊಂಡ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಮುಂಬಯಿ ಪೊಲೀಸರು. ಮಕ್ಕಳ ಅಶ್ಲೀಲತೆಯ ಮೂರು ಪ್ರಕರಣಗಳಲ್ಲಿ ಫಿರೋಜ್ ಹವಾರಿಯಾ, ವಿಕ್ಕಿ ಡಿಜೆ, ನನ್ಹಕ್ ಕುಮಾರ್ ಸೇರಿ ಒಟ್ಟು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳು ಮಕ್ಕಳ ಅಶ್ಲೀಲ ವೀಡಿಯೊ ಕ್ಲಿಪ್ ಗಳನ್ನು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಇನ್ ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಐಪಿ ವಿಳಾಸ, ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಮ್ ಖಾತೆ ಪ್ರೊಫೈಲ್, ಫೋನ್ ನಂಬರ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿಸಿದ್ದಾರೆ.


