ಬೆಳಗಾವಿ : ಲಿಂಗಾಯತ ಸಂಸ್ಥೆ ಬೆಳೆಯಲು ಕೋರೆ ಅವರು ಪಟ್ಟಿರುವ ಶ್ರಮ ರಾಜಕೀಯದ ರಂಗಕ್ಕೆ ನೀಡಿದ್ದರೆ ದೊಡ್ಡ ನಾಯಕರಾಗಿ ಹೊರಹೊಮ್ಮುತ್ತಿದ್ದರು. ಆದರೆ ಅವರು ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರನ್ನು ದೊಡ್ಡವರನ್ನಾಗಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಡಾ. ಪ್ರಭಾಕರ ಕೋರೆ ಅವರು 75 ವರ್ಷದ ಜನ್ಮದಿನ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ಕೋರೆ ಅವರು ಆದರ್ಶ ಜೀವನ ನಡೆಸಿದ್ದಾರೆ. ಕೆಎಲ್ ಇ ಸಂಸ್ಥೆ ಅವರ ಮುಂದಾಳತ್ವದಲ್ಲಿ ಗುಣಮಟ್ಟ ಉಳಿಸಿಕೊಂಡು ಮುನ್ನಡೆಸಿದರು. ಎಲ್ಲ ಸವಾಲುಗಳನ್ನು ಎದುರುರಿಸಿ ದೊಡ್ಡ ವಿಶ್ವ ವಿದ್ಯಾಲಯಯಾಗಿ ಕೆಎಲ್‍ಇಯನ್ನು ಪರಿವರ್ತಿಸಿದರು. ಗ್ರಾಮೀಣ ಭಾಗದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳನ್ನು ದೊಡ್ಡವರನ್ನಾಗಿ ಮಾಡಿದ್ದಾರೆ. ಕೆಎಲ್‍ಇ ಸಂಸ್ಥೆ ಸರಕಾರ ಮಾಡದ ಕೆಲಸ ಮಾಡುತ್ತಿದೆ. ಕೆಎಲ್‍ಇ ಸಂಸ್ಥೆಯ ಪ್ರೇರಣೆಯಿಂದ ಬೇರೆ ಜಿಲ್ಲೆಯಲ್ಲಿ ಬೇರೆ ಸಂಸ್ಥೆಗಳು ಕಾರ್ಯ ಮಾಡುತ್ತಿವೆ. ಅದಕ್ಕೆ ಕೆಎಲ್‍ಇ ಆದರ್ಶ ಕಾರಣ ಎಂದರು.
ಇನ್ನು ಪ್ರಭಾಕರ ಕೋರೆ ಅವರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಬುಲೇಟ್ ಮ್ಯಾನ್ ಎಂಬ ಬಿರುದು ನೀಡಿದ್ದಾರೆ. ಅವರು ಗುಂಡು ದೇಹದಲ್ಲಿ ಇಟ್ಟುಕೊಂಡು ನೋವಿನೊಂದಿಗೆ ಬಾಳುತ್ತಿದ್ದಾರೆ. ಗುಂಡು ಹೊಕ್ಕಾಗ ಇದು ನನ್ನ ಮರುಜನ್ಮದಲ್ಲಿ ಸಂಸ್ಥೆಗಾಗಿ ದುಡಿಯವುದಾಗಿ ಹೇಳಿದ್ದ ಹಾಗೆ ನಡೆದುಕೊಂಡಿದ್ದಾರೆ. ಇನ್ನಷ್ಟು ನಿಮ್ಮ ಸೇವೆ ಕೆಎಲ್ ಇ ಸಂಸ್ಥೆಗೆ ದೊರೆಯಲಿ ಎಂದು ಹಾರೈಸಿದರು.
ಸಪ್ತಋಷಿಗಳು ಕಟ್ಟಿದ ಕೆಎಲ್‍ಇ ದೇವಾಲಯಕ್ಕೆ ಡಾ. ಪ್ರಭಾಕರ ಕೋರೆ ಬಂಗಾರದ ಕಳಸ ಇಟ್ಟವರಾಗಿದ್ದಾರೆ. ರಾಜ್ಯ ಸರಕಾರ ಮಾಡದ ಕೆಲಸ ಕೋರೆ ಅವರು ಮಾಡ್ತಾ ಇದ್ದಾರೆ. ಈ ಸಂಸ್ಥೆಯಲ್ಲಿ ಪ್ರಭಾಕರ್ ಕೋರೆ ಅವರು ಇತಿಹಾಸವಾಗಿ ಉಳಿಯಲಿದ್ದಾರೆ.
ಬೆಳಗಾವಿಯಲ್ಲಿ ಪ್ರಥಮ ಅಧಿವೇಶನ ಮಾಡಲು ಎಲ್ಲ ಸೌಕರ್ಯ ನೀಡುವ ಮೂಲಕ ಈ ಸಂಸ್ಥೆ ಹಾಗೂ ಕೋರೆ ಅವರು ಸಹಕಾರ ನೀಡಿರುವದು ಸ್ಮರಣೀಯ ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು ಹೇಳಿದರು.
ಬಸವಣ್ಣನವರ ಹಾಗೂ ಚೆನ್ನಮ್ಮಾಜಿಯ ಈ ಪುಣ್ಯಭೂಮಿಯಲ್ಲಿ ಕೆಎಲ್‍ಇ ಸಂಸ್ಥೆಯು ಶಿಕ್ಷಣದೊಂದಿಗೆ ಸಮಾಜ ಸುಧಾರಣೆ ಕಾರ್ಯ ಮಾಡುವ ಮೂಲಕ ಸಪ್ತಋಷಿಗಳ ಕಂಡ ಕನಸು ಪೂರ್ಣ ಮಾಡುತ್ತಿರುವ ಸಂಸ್ಥೆಯ ಕಾರ್ಯ ಉತ್ತಮ ಬೆಳವಣಿಗೆಯಾಗಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ನುಡಿದರು.
ಕಾರ್ಯಕ್ರಮದಲ್ಲಿ ಪ್ರಹ್ಲಾದ ಜೋಶಿ, ಸಚಿವರಾದ ಬಿ.ಸಿ.ನಾಗೇಶ, ಶಶಿಕಲಾ ಜೊಲ್ಲೆ, ಬೈರತಿ ಬಸವರಾಜ, ಮುರಗೇಶ ನಿರಾಣಿ, ಗೋವಿಂದ ಕಾರಜೋಳ, ಕೋಟಾ ಶ್ರೀನಿವಾಸ ಪೂಜಾರಿ, ಸಂಸದರಾದ ಮಂಗಲಾ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, ಶಾಸಕರಾದ ಆರ್.ವ್ಹಿ.ದೇಶಪಾಂಡೆ ಸವದಿ, ಬಸವರಾಜ ಹೊರಟ್ಟಿ, ಅಭಯ್ ಪಾಟೀಲ, ಶಿವಕುಮಾರ್ ಉದಾಸಿ, ಅನಿಲ ಬೆನಕೆ, ಶ್ರೀಮಂತ ಪಾಟೀಲ, ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


