ಕೆ.ಆರ್. ಪೇಟೆಯ ಅಕ್ಕಿ ಹೆಬ್ಬಾಳು ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಮುದಾಯ ಭವನದಲ್ಲಿ ತಾಲೂಕು ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಶ್ರೀ ಮಹರ್ಷಿ ವಾಲ್ಮೀಕಿ ಮಠದ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳು, ಶ್ರೀ ಮಹರ್ಷಿ ವಾಲ್ಮೀಕಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಚುನಾವಣೆ ಬಂದಾಗ ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮಾಜದವರು ರಾಜಕಾರಣಿಗಳಿಗೆ ನೆನಪಾಗುತ್ತಾರೆ, ಚುನಾವಣೆ ನಂತರ ನಮ್ಮ ಸಮಾಜದವರನ್ನು ಮರೆತುಬಿಡುತ್ತಾರೆ. ಅದರಿಂದ ನಮ್ಮ ಸಮಾಜದವರು ಒಗ್ಗಟ್ಟಿನಿಂದ ಇರಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸಬೇಕು ಎಂದು ನಾಯಕ ಸಮಾಜದವರಿಗೆ ಕಿವಿಮಾತು ಹೇಳಿದರು.
ಫೆಬ್ರವರಿ 8 ಮತ್ತು 9 ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿಯಲ್ಲಿ ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಾತ್ರೆ ಹಾಗೂ ಶ್ರೀ ಮಠದ 26 ನೇ ವಾರ್ಷಿಕೋತ್ಸವ ಮತ್ತು ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಮಹಾಸ್ವಾಮಿಜಿಯವರ 17 ನೇ ವರ್ಷದ ಪುಣ್ಯಾರಾಧನೆ ಹಾಗೂ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿಯವರ 16 ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದಲ್ಲಿ ನಾಯಕ ಸಮಾಜದವರು ಮತ್ತು ಇತರೆ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳು ಆಮಂತ್ರಣ ನೀಡಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ.ಎಸ್ ಹರೀಶ್, ಪಂಚಾಯಿತಿ ಸದ್ಯಸರಾದ ಪ್ರದೀಪ್, ರಾಜನಾಯಕ, ನರಸನಾಯಕ, ಜಯರಾಮ್ ನಾಯಕ, ನಿವೃತ ರೈಲ್ವೆ ಪೊಲೀಸ್ ರಮೇಶ್, ಲೋಕೇಶ್ ಎ.ಬಿ., ವೆಂಕಟೇಶ್, ಎ.ಆರ್. ಮಂಜು ಶ್ರವಣೂರು, ಮಹೇಶನಾಯಕ, ಉದಯ್ ಕುಮಾರ್, ದಡದಹಳ್ಳಿ ಕಾಳನಾಯಕ, ಸಿಂಗನಹಳ್ಳಿ ಮಂಜನಾಯಕ, ಬಲರಾಮನಾಯಕ, ಅಗ್ರಹಾರ ಬಾಚ್ಚಳ್ಳಿ ಜಗದೀಶ್ ಮತ್ತು ತಾಲೂಕು ಮಟ್ಟದ ಸಮಾಜದವರು ಸುತ್ತ ಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಮಂಜು ಶ್ರವಣೂರು


