ಮದುವೆ ಆಗಲು ಒಪ್ಪಲಿಲ್ಲ ಅಂತ ಲಿವ್ ಒನ್ ರಿಲೇಷನ್ ಶಿಪ್ ನಲ್ಲಿದ್ದ ಪ್ರೇಯಸಿಯನ್ನು ಪ್ರಿಯಕರ 35 ತುಂಡುಗಳಾಗಿ ಕತ್ತರಿಸಿ ಕೊಂದು 18 ದಿನಗಳ ನಂತರ ಕಾಡಿನಲ್ಲಿ ಬಿಸಾಡಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ.
ಅಫ್ತಾಬ್ ಅಮಿನ್ ಪೂನವಾಲಾ(28) ಪ್ರೇಯಸಿ ಶ್ರದ್ಧಾ ಎಂಬಾಕೆಯನ್ನು ಮೇ 18 ರಂದು ಹತ್ಯೆಗೈದು ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಪ್ರೇಯಸಿಯನ್ನು ಕೊಚ್ಚಿ ಕೊಲೆ ಮಾಡಿದ್ದೂ ಅಲ್ಲದೇ ಆಕೆಯನ್ನು ತುಂಡು ತುಂಡಾಗಿ ಕತ್ತರಿಸಿ ಪ್ರತಿ ದಿನ ರಾತ್ರಿ 2 ಗಂಟೆಗೆ ಕಾಡಿಗೆ ಹೋಗಿ ಬಿಸಾಡುತ್ತಿದ್ದ.
ಶ್ರದ್ಧಾಳ ತುಂಡರಿಸಿದ ದೇಹವನ್ನು ಫ್ರಿಡ್ಜ್ ನಲ್ಲಿ ಕಾಯ್ದಿರಿಸಿದ್ದ ಅಪ್ತಾಬ್, ಮೆಹ್ರುಲ್ ಕಾಡಿನಲ್ಲಿ ದಿನಕ್ಕೊಂದು ಜಾಗದಲ್ಲಿ ದೇಹದ ತುಂಡುಗಳನ್ನು ಬಿಸಾಡುತ್ತಿದ್ದ.
26 ವರ್ಷದ ಶ್ರದ್ಧಾ ಮುಂಬೈನಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕಾಲ್ ಸೆಂಟರ್ ನಲ್ಲಿ ಕೆಲಸಕ್ಕೆ ಸೇರಿದ್ದು ಅಲ್ಲಿ ಅಫ್ತಾಬ್ ಪರಿಚಯವಾಗಿದೆ. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿದ್ದು ಮನೆಯಲ್ಲಿ ಮದುವೆ ಪ್ರಸ್ತಾಪ ಮಾಡಿದ್ದಾರೆ.
ಮನೆಯಲ್ಲಿ ಈ ಸಂಬಂಧಕ್ಕೆ ಒಪ್ಪಿಗೆ ದೊರೆಯದ ಕಾರಣ ಇಬ್ಬರೂ ದೆಹಲಿಯಲ್ಲಿ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಜೊತೆಯಾಗಿ ವಾಸವಾಗಿದ್ದರು.
ನವೆಂಬರ್ 8ರಿಂದ ಮಗಳು ಫೋನ್ ಕರೆ ಸ್ವೀಕರಿಸದ ಕಾರಣ ತಂದೆ ದೆಹಲಿಗೆ ಬಂದು ನೋಡಿದಾಗ ಮನೆಗೆ ಬೀಗ ಹಾಕಿತ್ತು. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy