ತೆಲುಗು ಸ್ಟಾರ್ ನಟ ನಾಗ ಚೈತನ್ಯ ಸದ್ಯ ತಮ್ಮ ಮುಂಬರುವ ʻಥ್ಯಾಂಕ್ಯೂʼ ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಥ್ಯಾಂಕ್ಯೂ ಸಿನಿಮಾ ಜುಲೈ 22 ರಂದು ತೆರೆ ಕಾಣಲಿದೆ. ಈ ಕುರಿತಾಗಿ ನಾಗ ಚೈತನ್ಯ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಭಾವುಕ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.
ನಾಗ ಚೈತನ್ಯ ತಮ್ಮ ಜೀವನದ ಪ್ರಮುಖ ಇಬ್ಬರು ವ್ಯಕ್ತಿಗಳಿಗೆ ಧನ್ಯವಾದ ತಿಳಿಸಿದ್ದಾರೆ. “Thank You.. ನನ್ನ ಜೀವನದಲ್ಲಿ ನಾನು ಸದಾ ಬಳಸುವ ಪದ. ನನ್ನ ಮುಂಬರುವ ʻಥ್ಯಾಂಕ್ಯೂʼ ಚಿತ್ರಕ್ಕೆ ಸಹ ಇದು ಅನ್ವಯಿಸುತ್ತದೆ. ನನ್ನ ಜೀವನದ ಪ್ರಮುಖ ವ್ಯಕ್ತಿಗಳಿಗೆ ಈ ಪೋಸ್ಟ್ ಅರ್ಪಿಸುತ್ತಿದ್ದೇನೆ” ಎಂದು ನಾಗ ಚೈತನ್ಯ ಬರೆದುಕೊಂಡಿದ್ದಾರೆ.
ಭಾವುಕವಾಗಿ ಬರೆದುಕೊಂಡಿರುವ ನಾಗ ಚೈತನ್ಯ, “ನನ್ನ ಜೀವನದ ಪ್ರಮುಖ ಈ ಪ್ರಮುಖರಿಗೆ ಧನ್ಯವಾದ ಹೇಳಿದ ಮಾತ್ರಕ್ಕೆ ಸಾಕಾಗುವುದಿಲ್ಲ. ಹುಟ್ಟಿದಾಗಿನಿಂದ ನನ್ನೊಂದಿಗೆ ಇರುವವರು. ನನ್ನ ಜೀವನದ ಪ್ರತಿ ಹಂತದಲ್ಲೂ ನನಗೆ ಬೆನ್ನುಲುಬಾಗಿ ನಿಂತ ಅಮ್ಮ.. ನನಗೆ ದಾರಿ ತೋರುತ್ತಾ, ಸ್ನೇಹಿತನಂತಿರುವ ಅಪ್ಪ.. ಇಷ್ಟು ವರ್ಷಗಳ ನಿಮ್ಮ ಪ್ರೀತಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಅಭಿನಯಿಸಿರುವ ಥ್ಯಾಂಕ್ಯೂ ಸಿನಿಮಾ ಜುಲೈ 22 ರಂದು ತೆರೆ ಕಾಣುತ್ತಿದೆ” ಎಂದು ಹೆತ್ತವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ನಾಗ ಚೈತನ್ಯ ತಾಯಿ ಲಕ್ಷ್ಮಿ ದಗ್ಗುಬಾಟಿ ಹಾಗೂ ತಂದೆ ಅಕ್ಕಿನೇನಿ ನಾಗಾರ್ಜುನ ಇಬ್ಬರಿಗೂ ಈ ಮೂಲಕ ಧನ್ಯವಾದ ತಿಳಿಸಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿ ಥ್ಯಾಂಕ್ಯೂ ಚಿತ್ರ ಮೂಡಿಬರುತ್ತಿದೆ. ವಿಕ್ರಮ್ ಕುಮಾರ್ ಕಥೆ ಬರೆದಿದ್ದು, ಅವರೇ ನಿರ್ದೇಶಿಸಿದ್ದಾರೆ. ಚಿತ್ರದ ಹಾಡುಗಳಿಗೆ ತಮನ್. ಎಸ್ ಸಂಗೀತ ನೀಡಿದ್ದು, ನಾಗ ಚೈತನ್ಯ ಜೊತೆಗೆ ರಾಶಿ ಖನ್ನಾ, ಮಾಳವಿಕಾ ನಾಯರ್, ಅವಿಕಾ ಗೋರ್, ಸಾಯಿ ಸುಶಾಂತ್, ಪ್ರಕಾಶ್ ರಾಜ್ ಸೇರಿದಂತೆ ದೊಡ್ಡ ತಾರಾ ಬಳಗವಿದೆ.
ಥ್ಯಾಂಕ್ಯೂ ಮಾತ್ರವಲ್ಲದೇ, ಹಿಂದಿಯ ಲಾಲ್ ಸಿಂಗ್ ಚಡ್ಡಾ ಹಾಗೂ ಹೆಸರಿಡದ ಮತ್ತೊಂದು ಸಿನಿಮಾದಲ್ಲಿ ನಾಗಚೈತನ್ಯ ಬ್ಯುಸಿಯಾಗಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz