ಬಕ್ರೀದ್ ಹಬ್ಬ ಸಮೀಪಿಸುತ್ತಿದ್ದಂತೆಯೇ ನಗರದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಟಗರು, ಕುರಿ ಹಾಗೂ ಮೇಕೆಗಳ ಮಾರಾಟ ಬಿರುಸುಗೊಂಡಿದೆ. ಈ ಬಾರಿ ನಾಟಿ ಮತ್ತು ಬಾಗಲಕೋಟೆ ಜಿಲ್ಲೆಯ ಅಮೀನಗಡ ತಳಿಯ ಕುರಿಗಳಿಗೆ ಬೇಡಿಕೆ ಹೆಚ್ಚಿದೆ.
ಹಬ್ಬಕ್ಕೆ ಇನ್ನೂ ಮೂರು ದಿನ ಬಾಕಿ ಇರುವಂತೆ ವ್ಯಾಪಾರ ಜೋರಾಗಿದೆ. ನಾನಾ ಜಿಲ್ಲೆಗಳಿಂದ ವಿವಿಧ ತಳಿಗಳ ಕುರಿ ಹಾಗೂ ಮೇಕೆಗಳ ದಂಡುಗಳೊಂದಿಗೆ ವ್ಯಾಪಾರಿಗಳು ಬೀಡುಬಿಟ್ಟಿದ್ದಾರೆ. ಜೂ. 29ಕ್ಕೆ ಹಬ್ಬವಿದ್ದು, ಗ್ರಾಹಕರು ಈಗಲೇ ಕುರಿ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಬಂಡೂರು, ಕಿರಿಗಾವು, ಮೌಳಿ, ಶಿರೋಹಿ, ತಮಿಳುನಾಡು ಕುರಿ, ಬಾಗಲಕೋಟೆ, ಅಮೀನಗಡ, ಗೆಣಸಿ, ಶಿರಾ, ತುಮಕೂರು, ಚಿತ್ರದುರ್ಗ ಮರಿ ಸೇರಿದಂತೆ ವಿವಿಧ ತಳಿಗಳು ಇಲ್ಲಿವೆ.
ಬಂಡೂರು ಕುರಿಗಳು ಕನಿಷ್ಠ 15ಸಾವಿರದಿಂದ ಗರಿಷ್ಠ 90ಸಾವಿರದವರೆಗೆ ಮಾರಾಟವಾದರೆ, ಅಮೀನಗಡ ತಳಿಯ ಟಗರಿಗೆ ಕನಿಷ್ಠ ಕೆ 20 ಸಾವಿರದಿಂದ ಗರಿಷ್ಠ 7 1. 20ಲಕ್ಷದವರೆಗೂ ಬಿಕರಿಯಾಗುತ್ತಿವೆ’ ಎಂದು ವ್ಯಾಪಾರಿ ಚಿಕ್ಕಣ್ಣ ತಿಳಿಸಿದರು. ಬಾಗಲಕೋಟೆ ಜಿಲ್ಲೆಯ ಅಮೀನಗಡದಿಂದ 60 ಟಗರು ತಂದಿದ್ದೇನೆ. 20 ಟಗರು ಮಾರಾಟವಾಗಿವೆ. ಈ ವರ್ಷ ವ್ಯಾಪಾರ ಕುಸಿದಿದೆ. ಕುರಿ, ಟಗರಿನ ಬೆಲೆಗೆ ಹೋಲಿಸಿದರೆ ಹಸು, ಎತ್ತುಗಳ ಬೆಲೆ ಕಡಿಮೆ. ಗ್ರಾಹಕರು ಅವುಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಹಬ್ಬಕ್ಕೆ ಇನ್ನೂ ಮೂರು ದಿನಗಳಿವೆ. ಎಲ್ಲ ಟಗರು ಮಾರಾಟವಾಗುವ ನಿರೀಕ್ಷೆ ಇದೆ’ ಎಂದು ವ್ಯಾಪಾರಿ ಮಲೀಕ್ ವಿಶ್ವಾಸ ವ್ಯಕ್ತಪಡಿಸಿದರು.
ರಂಜಾನ್ ಬಕ್ರೀದ್ ಸಂದರ್ಭದಲ್ಲಿ ಮಾತ್ರ ಕುರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಗಾತ್ರ ತೂಕದ ಆಧಾರದಲ್ಲಿ ಕುರಿಗಳ ಖರೀದಿ ನಡೆಯುತ್ತದೆ. ಈದ್ಗಾ ಮೈದಾನದಲ್ಲಿ ಮಂಗಳವಾರ ಬೆಳಗಿನ ಜಾವದವರೆಗೆ ಕುರಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು’ ಎಂದು ವ್ಯಾಪಾರಿಗಳ ಒತ್ತಾಯಿಸಿದ್ದಾರೆ. ‘ಬಕ್ರೀದ್ ಹಬ್ಬದ ದಿನ ಸಾಮೂಹಿಕ ಪ್ರಾರ್ಥನೆಗೆ ಈದ್ಗಾ ಮೈದಾನ ಸ್ವಚ್ಛಗೊಳಿಸಲು ಭಾನುವಾರವೇ ಮೈದಾನ ಖಾಲಿ ಮಾಡಬೇಕು ಎಂದು ಹೇಳಲಾಗುತ್ತಿದೆ. ಆದರೆ ಹಬ್ಬ ಇನ್ನೂ ಮೂರು ದಿನ ಬಾಕಿ ಇರುವಂತೆ ಖಾಲಿ ಮಾಡಿಸಿದರೆ 40-60 ಕುರಿಗಳನ್ನು ತೆಗೆದುಕೊಂಡು ಎಲ್ಲಿಗೆ ಹೋಗಬೇಕು ಎನ್ನುವುದೇ ಅರ್ಥವಾಗುತ್ತಿಲ್ಲ’ ಅವಲತ್ತು ತೋಡಿಕೊಂಡರು.
ಅಮೀನಗಡದ ಟಗರುಗಳ ಜತೆಗೆ ನಾಟಿ ಟಗರುಗಳಿಗೆ ಬಾರಿ ಬೇಡಿಕೆ ಇದೆ. ಸಂತೆಯಲ್ಲಿ ಎಲ್ಲಿ ನೋಡಿದರೂ ನಾಟಿ ಟಗರು ಕುರಿ ಮೇಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿವೆ. ಬಂಡೂರು ಕುರಿಗಳು ಹೆಚ್ಚು ಮಾರಾಟವಾಗುತ್ತಿವೆ’ ಎನ್ನುತ್ತಾರೆ ರಾಮನಗರದಿಂದ ಬಂದಿರುವ ವ್ಯಾಪಾರಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


