ನವದೆಹಲಿ: ಉತ್ತರಾಖಂಡ ರಾಜ್ಯ ಸರ್ಕಾರ ಸಲ್ಲಿಸಿದ್ದ ಏಕರೂಪ ನಾಗರಿಕ ಸಂಹಿತೆ ಮಸೂದಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ. ಇದರಿಂದ ಯುಸಿಸಿ ಮಸೂದೆಯು ವಿದ್ಯುಕ್ತವಾಗಿ ಕಾಯಿದೆಯಾಗಿ ಪರಿವರ್ತನೆಯಾಗಲಿದೆ.
ಯುಸಿಸಿ ಜಾರಿಯಾದರೆ ಉತ್ತರಾಖಂಡ ದೇಶದಲ್ಲೇ ಮೊದಲು ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ಮೊದಲ ರಾಜ್ಯವಾಗಿ ಗುರುತಿಸಿಕೊಳ್ಳಲಿದೆ. ಮೊದಲ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಏಕರೂಪ ನಾಗರಿಕ ಸಂಹಿತೆಯ ಪ್ರಸ್ತಾಪ ನೀಡಿತ್ತು. ದೇಶಾದ್ಯಂತ ಯಾವುದೇ ಧರ್ಮ, ಬುಡಕಟ್ಟು, ಮತ ಗಳ ಹೊರತಾಗಿ ಎಲ್ಲರಿಗೂ ಒಂದೇ ಕಾನೂನು ಅನ್ವಯಿಸುವುದು ಯುಸಿಸಿ ಉದ್ದೇಶವಾಗಿದೆ.
ಆದರೆ ವಿವಾಹ, ವಿಚ್ಛೇದನ , ಆಸ್ತಿ ಪಾಲು , ದತ್ತು ಮುಂತಾದ ವೈಯಕ್ತಿಕ ವಿಷಯಗಳಲ್ಲಿ ಸರ್ಕಾರ ಮಧ್ಯಪ್ರವೇಶಿಸುತ್ತಿದೆ ಎಂದು ಆರೋಪಿಸಿ ಹಲವು ಅಲ್ಪಸಂಖ್ಯಾತರು ಏಕರೂಪ ನಾಗರಿಕ ಸಂಹಿತೆ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296