ಎರಡನೇ ವಿವಾಹಕ್ಕೆ ನಿರಾಕರಿಸಿದ್ದಕ್ಕೆ ಮಾಜಿ ಪ್ರೇಯಸಿಗೆ ಆಟೋ ಚಾಲಕ ಚಾಕು ಇರಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಇಂದಿರಾನಗರ ನಿವಾಸಿ ಅಮುದಾ ಚೂರಿ ಇರಿತದಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ಚಾಲಕ ನವಾಝ್ ಚೂರಿ ಇರಿದು ಪರಾರಿಯಾಗಿದ್ದಾನೆ.
ಕೆಲ ವರ್ಷಗಳ ಹಿಂದೆ ಅಮುದಾ ಹಾಗೂ ನಯಾಝ್ ಪ್ರೀತಿಸುತ್ತಿದ್ದರು. ಈ ನಡುವೆ ನವಾಝ್ ಬೇರೆ ಮದುವೆಯಾಗಿತ್ತು. ಅಮುದಾ ಏಳುಮಲೈ ಎಂಬಾತನ ಜೊತೆ ಮದುವೆಯಾಗಿದ್ದರು.
ಇತ್ತೀಚೆಗೆ ಮಾಜಿ ಪ್ರೇಮಿಗಳು ಪರಸ್ಪರ ಸಂಪರ್ಕಕ್ಕೆ ಬಂದಿದ್ದು, ನಿನ್ನ ಗಂಡ ಸರಿ ಇಲ್ಲ. ಹಾಗಾಗಿ ಎರಡನೇ ಮದುವೆ ಆಗುವಂತೆ ನವಾಝ್ ಒತ್ತಡ ಹೇರಿದ್ದಾನೆ. ಆದರೆ ಇದಕ್ಕೆ ಅಮುದಾ ನಿರಾಕರಿಸಿದ್ದರಿಂದ ಈ ಕೃತ್ಯ ಎಸಗಿದ್ದಾನೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


