nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು: ಪಾಲಿಕೆ ಆಯುಕ್ತರಿಂದ ಇಂದಿರಾ ಕ್ಯಾಂಟೀನ್ ಪರಿಶೀಲನೆ

    May 8, 2025

    ಪ.ಜಾತಿಗಳ ಸಮಗ್ರ ಸಮೀಕ್ಷೆ: ಪ್ರತೀ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲು ಡೀಸಿ ಸೂಚನೆ

    May 8, 2025

    ಮಳೆ ಹಾನಿ : 24 ಗಂಟೆಯೊಳಗೆ ಪರಿಹಾರ ನೀಡಲು ಕ್ರಮ : ಡೀಸಿ ಖಡಕ್ ಸೂಚನೆ

    May 8, 2025
    Facebook Twitter Instagram
    ಟ್ರೆಂಡಿಂಗ್
    • ತುಮಕೂರು: ಪಾಲಿಕೆ ಆಯುಕ್ತರಿಂದ ಇಂದಿರಾ ಕ್ಯಾಂಟೀನ್ ಪರಿಶೀಲನೆ
    • ಪ.ಜಾತಿಗಳ ಸಮಗ್ರ ಸಮೀಕ್ಷೆ: ಪ್ರತೀ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲು ಡೀಸಿ ಸೂಚನೆ
    • ಮಳೆ ಹಾನಿ : 24 ಗಂಟೆಯೊಳಗೆ ಪರಿಹಾರ ನೀಡಲು ಕ್ರಮ : ಡೀಸಿ ಖಡಕ್ ಸೂಚನೆ
    • ಮಳೆಗಾಲದಲ್ಲಿ ವಿದ್ಯುತ್ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಡೀಸಿ ಸೂಚನೆ
    • ಶಿಥಿಲಗೊಂಡಿರುವ ಕಟ್ಟಡಗಳನ್ನು ತೆರವಿಗಾಗಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕೆಂದು ಸೂಚನೆ
    • ಭೂಕಬಳಿಕೆದಾರರಿಂದ ಶೀಬಿ ಅರಣ್ಯ ಭೂಮಿ ರಕ್ಷಣೆಗೆ ಈಶ್ವರ ಖಂಡ್ರೆ ಸೂಚನೆ
    • ಉತ್ತರಾಖಂಡದ ಗಂಗೋತ್ರಿ ದೇಗುಲಕ್ಕೆ ತೆರಳುತ್ತಿದ್ದ ಹೆಲಿಕಾಫ್ಟರ್ ಪತನ: 6 ಮಂದಿ ಸಾವು
    • ಭಾರತೀಯ ಯೋಧರ ಹೆಸರಿನಲ್ಲಿ ವಿಶೇಷ ಪೂಜೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪ್ರಧಾನಿ ಮೋದಿ ಆಧುನಿಕ ಪ್ರಪಂಚದ ಕಾಯಕಯೋಗಿ ಬಸವಣ್ಣ:  ಕೇಂದ್ರ ಸಚಿವ ವಿ.ಸೋಮಣ್ಣ
    ರಾಜ್ಯ ಸುದ್ದಿ April 30, 2025

    ಪ್ರಧಾನಿ ಮೋದಿ ಆಧುನಿಕ ಪ್ರಪಂಚದ ಕಾಯಕಯೋಗಿ ಬಸವಣ್ಣ:  ಕೇಂದ್ರ ಸಚಿವ ವಿ.ಸೋಮಣ್ಣ

    By adminApril 30, 2025No Comments3 Mins Read
    basavanna

    ಇಂದು ನವದೆಹಲಿಯ ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಜಗಜ್ಯೋತಿ ಬಸವೇಶ್ವರರ ೮೯೪ನೇ ಜಯಂತಿಯನ್ನು ಆಚರಿಸಲಾಯಿತು.   ಈ ಕಾರ್ಯಕ್ರಮವನ್ನು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣನವರು ತಮ್ಮ ಇಲಾಖೆಯ ಮೂಲಕ ಆಯೋಜಿಸಿ, ಅತ್ಯಂತ ಯಶಸ್ವಿಯಾಗಿ ದೆಹಲಿಯ ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಬಸವ ಜಯಂತಿಯನ್ನು ಆಯೋಜಿಸುವಲ್ಲಿ ಸಫಲರಾಗಿದ್ದಾರೆ. ಕಾರ್ಯಕ್ರಮಕ್ಕೆ ಕೇಂದ್ರದ ಸಚಿವರುಗಳನ್ನು, ರಾಜ್ಯದ ಸಂಸದರುಗಳನ್ನು, ಮಠಾಧೀಶರುಗಳನ್ನು ಮತ್ತು ಬಸವಾಭಿಮಾನಿಗಳನ್ನು, ದೆಹಲಿ ಕನ್ನಡಿಗರನ್ನು ವಿ.ಸೋಮಣ್ಣನವರು ಆಹ್ವಾನಿಸಿದ್ದರು.

    ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು, ರೇಲ್ವೆ ಸಚಿವರಾದ ಅಶ್ವಿನಿ ವೈಷ್ಣವ್, ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಮತ್ತು ನೂತನ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಸಚಿವ ಪ್ರಹ್ಹಾದ್ ಜೋಶಿ, ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ ಸಚಿವೆ ಕು. ಶೋಭಾ ಕರಂದ್ಲಾಜೆ, ರೈಲ್ವೆ ರಾಜ್ಯ ಖಾತೆಯ ಸಚಿವ ರವನೀತ ಸಿಂಗ್, ಜಲಶಕ್ತಿ ರಾಜ್ಯ ಖಾತೆಯ ಸಚಿವ ರಾಜಬೂಷಣ್ ಚೌಧರಿ, ಸಂಸದರಾದ ಪಿ.ಸಿ.ಗದ್ದಿಗೌಡರ, ತೇಜಸ್ವಿ ಸೂರ್ಯ, ಮಾಜಿ ಸಂಸದರಾದ ಡಾ. ಉಮೇಶ್ ಜಾದವ್, ಅಣ್ಣಾ ಸಾಹೆಬ್ ಜೊಲ್ಲೆ, ಶಾಸಕರಾದ ಬಿ.ಪಿ.ಹರೀಶ್, ವಿಧಾನ ಪರಿಷತ್ ಸದಸ್ಯ ಡಾ.ಎಮ್. ಜಿ. ಮೂಳೆ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮತ್ತು  ಬಸವ ಮೃತ್ಯುಂಜಯ ಸ್ವಾಮಿಗಳು, ಡಾ.ಬಸವ ಪ್ರಕಾಶ ಸ್ವಾಮಿ, ಬಸವಕುಮಾರ್ ಸ್ವಾಮಿ ಹಾಗೂ ಮತ್ತು ಅಸಂಖ್ಯಾತ  ಕನ್ನಡಿಗರು ಇಂದು ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಬಸವ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಿದ್ದಾರೆ.


    Provided by

    ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, ಜಾತಿ ರಹಿತ ಮತ್ತು ವರ್ಗರಹಿತ ಸಮಾಜದ ಕಲ್ಪನೆಯನ್ನು ಜಗತ್ತಿಗೆ ತೋರಿಸಿದವರು ಬಸವಣ್ಣನವರು, ಕಾಯಕವೇ ಕೈಲಾಸ ಎಂಬ ತತ್ವದೊಂದಿಗೆ ಆರೋಗ್ಯವಂತ ಸಮಾಜಕ್ಕೆ ಅಡಿಪಾಯ ಹಾಕಿದವರು ಶ್ರೀ ಬಸವೇಶ್ವರರು ಎಂದಿದ್ದಾರೆ.

    ಬಸವಣ್ಣನವರ ಸಾರಥ್ಯದಲ್ಲಿ ನಡೆದ ಸುಧಾರಣೆಯ ಪ್ರಯತ್ನ ಒಂದು ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿತ್ತು. ಸಾಮಾನ್ಯ ಬದುಕಿನ ಎಲ್ಲಾ ಸ್ಥರಗಳು ಆ ಚಳುವಳಿಯ ಒಂದು ಭಾಗವಾದ್ದದ್ದು ಶರಣರ ಪೂರ್ಣ ದೃಷ್ಟಿಯ ಸಂಕೇತ ಎಂದು ಮಾದ್ಯಮಕ್ಕೆ ತಿಳಿಸಿದ್ದಾರೆ.

    ಬಸವಣ್ಣನವರು ವಿದ್ಯೆಯೆಂಬ ಆಯುಧವನ್ನು ಸಮಾಜದ ಎಲ್ಲಾ ವರ್ಗದ ಹಿಂದುಳಿದವರ, ಶೋಷಿತ ವರ್ಗದ ಹಾಗೂ ಮಹಿಳೆಯರ ಉದ್ಧಾರಕ್ಕಾಗಿ ತೊಡಗಿಸಿಕೊಂಡಿದ್ದರು. ಜೀವನದ ಸತ್ಯತೆಗಳನ್ನು ಸಾಮಾನ್ಯರಿಗೆ ತಲುಪಿಸುವಲ್ಲಿ ಬಸವಣ್ಣನವರ ವಚನಗಳು ಬಹು ಮುಖ್ಯ ಪಾತ್ರ ವಹಿಸಿದೆ ಎಂದರು.

    ಬಸವಣ್ಣನವರ ಅನುಭವ ಮಂಟಪ ಸಮಾಜದ ಎಲ್ಲಾ ವರ್ಗಗಳ ಪ್ರತಿನಿಧಿತ್ವದೊಂದಿಗೆ ಲಿಂಗಬೇಧ ರಹಿತ ಸಮಾನತೆಯೊಂದಿಗೆ ಅಭಿವ್ಯಕ್ತಿ ಸ್ವಾತಂತ್ಯದ ವೇದಿಕೆಯಾಗಿತ್ತು. ಅನುಭವ ಮಂಟಪದ ಆ ವೇದಿಕೆಯೆ ಇಂದಿನ ನಮ್ಮ ಮುಂದಿರುವ ಸಂಸತ್ತು ಎಂದು ವಿ. ಸೋಮಣ್ಣ ಪುನರುಚ್ಚರಿಸಿದ್ದಾರೆ.

    ಇಂಗ್ಲೆಂಡ್‌ನಲ್ಲಿ ಮ್ಯಾಗ್ನಾ ಕಾರ್ಟರ ಪರಿಕಲ್ಪನೆಯ ಸಂಸತ್ತು ಜಾರಿಗೆ ಬರುವ ಮೊದಲೇ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಬಸವಣ್ಣನವರು ಸಂಸತ್ತಿನ ಪರಿಕಲ್ಪನೆ ಸೃಷ್ಟಿಸಿದ್ದು – ಅನುಭವ ಮಂಟಪ ರೂವಾರಿಯಾಗಿದ್ದರು ಎಂದು ಅನುಭವ ಮಂಟಪದ ಹಿರಿಮೆ ಗರಿಮೆಯನ್ನು ಇಂದು ಸೋಮಣ್ಣ ಸಂಸತ್ತಿನಲ್ಲಿ ಆವರಣದಲ್ಲಿ ಕೊಂಡಾಡಿದ್ದಾರೆ.

    ಶ್ರೀ ಬಸವಣ್ಣನವರ ಕಾಯಕ ತತ್ವದ ಪ್ರತಿಪಾದನೆಯಲ್ಲಿಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ದೇಶವನ್ನು ಮುನ್ನಡೆಸುತ್ತಿದ್ದಾರೆ. ಬಸವಣ್ಣನವರು 12ನೇ ಶತಮಾನದಲ್ಲಿ; ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ — ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ, ನಿಮ್ಮ ಮನೆಯ ಮಗನೆಂದೆನಿಸಯ್ಯಾ ಎಂಬ ಸೂತ್ರವನ್ನು ಜಗಜ್ಯೋತಿ ಬಸವಣ್ಣನವರು ಜಗತ್ತಿಗೆ ಪರಿಚಯಿಸಿದ್ರು.

    ಇಂದು 21ನೇ ಶತಮಾನದಲ್ಲಿ ಇದೇ ತತ್ವದಡಿಯಲ್ಲಿ ಕಾಯಕ ಮಾಡುತ್ತಿದ್ದಾರೆ ಆಧುನಿಕ ಜಗತ್ತಿನ ಅಭಿವೃದ್ದಿಯ ಹರಿಕಾರ, ಕಾಯಕಯೋಗಿ ಪ್ರದಾನಿ ಮೋದಿಯವರು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.

    ಭಾರತ ದೇಶ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಪ್ರಬಲ ರಾಷ್ಟ್ರವಾಗಬೇಕೆಂಬ ಹಂಬಲದಿಂದ ಸಬ್ಕಾ ಸಾಥ್,  ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ೧ಸಬ್ಕಾ ಪ್ರಯಾಸ್,  ಎಂಬ ಧ್ಯೇಯ ಮಂತ್ರದೊಂದಿಗೆ ಪ್ರಧಾನಿ ಮೋದಿಯವರು  ಈ ದೇಶವನ್ನು ಮುನ್ನೇಡುಸುತ್ತಿದ್ದಾರೆ ಮೋದಿಯವರು ಆಧುನಿಕ ಭಾರತದ “ಕಾಯಕಯೋಗಿ ಬಸವಣ್ಣ” ಎಂದರೆ ತಪ್ಪಾಗಲಾರದು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ನವದೆಹಲಿಯಲ್ಲಿ ಬಸವಜಯಂತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

    ಜಗಜ್ಯೋತಿ ಬಸವಣ್ಣನವರ 894ನೇ ಜಯಂತಿಯನ್ನು  ಸಂಸತ್ತಿನ ಆವರಣದಲ್ಲಿ ಅಚರಿಸಲು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್  ಓಂ ಬಿರ್ಲಾ ಅವರು ಅನುಮತಿಯನ್ನು ನೀಡಿದ್ದಾರೆ. ಬಸವಮೂರ್ತಿ ಸಂಸತ್ತಿನ ಆವರಣದಲ್ಲಿ ಸ್ಥಾಪನೆಯಾಗಿ ಸುಮಾರು 22 ವರ್ಷಗಳ ನಂತರ ಇಂತಹ ಜಯಂತಿಯ ಕಾರ್ಯಕ್ರಮವನ್ನು ಆಯೋಜಿಸಿಲು ಅವಕಾಶ ಸಿಕ್ಕಿದೆ. ಇದು ಕನ್ನಡ ನಾಡಿನ ಸಮಸ್ತ ಜನತೆಗೆ ಸಂಸತ್ತಿನ ಮುಖೇನ ಭಾರತ ಸರ್ಕಾರ ನೀಡಿದ ಮಹಾ ಗೌರವ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    admin
    • Website

    Related Posts

    ಶಿಥಿಲಗೊಂಡಿರುವ ಕಟ್ಟಡಗಳನ್ನು ತೆರವಿಗಾಗಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕೆಂದು ಸೂಚನೆ

    May 8, 2025

    ಭೂಕಬಳಿಕೆದಾರರಿಂದ ಶೀಬಿ ಅರಣ್ಯ ಭೂಮಿ ರಕ್ಷಣೆಗೆ ಈಶ್ವರ ಖಂಡ್ರೆ ಸೂಚನೆ

    May 8, 2025

    ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಇನ್ಸ್‌’ಪೆಕ್ಟರ್, ಸಬ್ ಇನ್ಸ್‌’ಪೆಕ್ಟರ್!

    May 7, 2025
    Our Picks

    ಉತ್ತರಾಖಂಡದ ಗಂಗೋತ್ರಿ ದೇಗುಲಕ್ಕೆ ತೆರಳುತ್ತಿದ್ದ ಹೆಲಿಕಾಫ್ಟರ್ ಪತನ: 6 ಮಂದಿ ಸಾವು

    May 8, 2025

    ಪಾಕ್ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ: 15 ಭಾರತೀಯ ನಾಗರಿಕರು ಸಾವು, ಹಲವರಿಗೆ ಗಾಯ

    May 8, 2025

    ಅಗತ್ಯ ಬಿದ್ದರೆ ಭಾರತದೊಂದಿಗೆ ನಾವು ನಿಲ್ಲುತ್ತೇವೆ: ಇಸ್ರೇಲ್

    April 25, 2025

    ನಾವಿಲ್ಲಿ ಕಷ್ಟದಲ್ಲಿದ್ದೇವೆ, ನೀವು ಹೇಗೆ ಸಂಭ್ರಮಿಸುತ್ತೀರಿ ಎಂದು ಗುಂಡು ಹಾರಿಸಿಯೇ ಬಿಟ್ಟ!

    April 25, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು: ಪಾಲಿಕೆ ಆಯುಕ್ತರಿಂದ ಇಂದಿರಾ ಕ್ಯಾಂಟೀನ್ ಪರಿಶೀಲನೆ

    May 8, 2025

    ತುಮಕೂರು: ಮಹಾನಗರಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ಅವರು ಬುಧವಾರ ಪಾಲಿಕೆ ವ್ಯಾಪ್ತಿಯಲ್ಲಿರುವ 4 ಇಂದಿರಾ ಕ್ಯಾಂಟೀನ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.…

    ಪ.ಜಾತಿಗಳ ಸಮಗ್ರ ಸಮೀಕ್ಷೆ: ಪ್ರತೀ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲು ಡೀಸಿ ಸೂಚನೆ

    May 8, 2025

    ಮಳೆ ಹಾನಿ : 24 ಗಂಟೆಯೊಳಗೆ ಪರಿಹಾರ ನೀಡಲು ಕ್ರಮ : ಡೀಸಿ ಖಡಕ್ ಸೂಚನೆ

    May 8, 2025

    ಮಳೆಗಾಲದಲ್ಲಿ ವಿದ್ಯುತ್ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಡೀಸಿ ಸೂಚನೆ

    May 8, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.