ತುಮಕೂರು: ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ(ರಿ) ವತಿಯಿಂದ ತುಮಕೂರು ನಗರದ ವಾರ್ಡ್ ನಂ. 34ರ ಕ್ಯಾತ್ಸಂದ್ರ ಎಳ್ಳರಬಂಡೆ ಸ್ಲಂನಲ್ಲಿ ಎ ನ್‌ಹೆಚ್–4 ಕಾಯ್ದಿರಿಸಿದ ರಸ್ತೆ ಜಾಗದಲ್ಲಿ ಅನಧಿಕೃತ ಶೆಡ್ ಗಳನ್ನು ನಿರ್ಮಿಸಿದ್ದು ತೆರವುಗೊಳಿಸಲು ಹಾಗೂ ಹಿಂದೂ–ಮುಸ್ಲಿಂ ಎಂದು ದ್ವೇಷ ಬಿತ್ತುವ ಸಮಾಜ ಘಾತಕ ಜಯಸಿಂಹ ಎನ್ನುವವರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ. ನರಸಿಂಹಮೂರ್ತಿ, ತುಮಕೂರು ನಗರದ ವಾರ್ಡ್ ನಂ. 34 ರಲ್ಲಿರುವ ಕ್ಯಾತ್ಸಂದ್ರ ಎಳ್ಳರಬಂಡೆ ಸ್ಲಂ ಘೋಷಿತ ಕೊಳಚೆ ಪ್ರದೇಶವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹಾಗೂ ಜಿಲ್ಲಾಡಳಿತದಿಂದ ಈ ಹಿಂದೆ ಎನ್‌ಹೆಚ್–4 ಗೆ ಬಂದ 12 ಗುಡಿಸಲುಗಳಿಗೆ ಪರಿಹಾರ ಹಣವಾಗಿ 1 ಲಕ್ಷದ ವರೆವಿಗೂ ಪಡೆದುಕೊಂಡು ಪರ್ಯಾಯವಾಗಿ ಕ್ಯಾತ್ಸಂದ್ರ ಎಸ್.ಎಲ್ ನಗರದಲ್ಲಿ ಹಕ್ಕುಪತ್ರಗಳನ್ನು ಇತ್ತೀಚೆಗೆ ಪಡೆದಿರುವ ಕೆಲವೊಬ್ಬರನ್ನು ಸ್ವಯಂ ಘೋಷಿತ ಸಮಾಜ ಸೇವಕ ಜಯಸಿಂಹ ಎಂಬುವವರು ಹಕ್ಕುಪತ್ರದ ಆಮಿಷವೊಡ್ಡಿ ಎಳ್ಳರಬಂಡೆಯ ನಾಗರಿಕರಲ್ಲಿ ಅಶಾಂತಿಯನ್ನು ಉಂಟು ಮಾಡಿ ಏಕಾಏಕಿ ಗುಡಿಸಲುಗಳನ್ನು ಹಾಕಿಸಿ ಇಲ್ಲಿ ವಾಸಿಸುವ ಕುಟುಂಬಗಳಿಗೆ ಬೆದರಿಕೆ ಹಾಕಿರುವುದು ಗೂಂಡಾ ಪ್ರವೃತ್ತಿಯಾಗಿದೆ. ತುಮಕೂರು ನಗರದ ಶಾಸಕರಾದ ಜ್ಯೋತಿ ಗಣೇಶ್ ಮತ್ತು ಮಾಜಿ ಸಚಿವರಾದ ಕೆ.ಎನ್ ರಾಜಣ್ಣನವರಿಗೆ ಸುಳ್ಳು ಮಾಹಿತಿಯನ್ನು ನೀಡಿ ಹಿಂದೂ ಮುಸ್ಲಿಂ ದ್ವೇಷವನ್ನು ಬಿತ್ತುತ್ತಿರುವುದು ಇಲ್ಲಿರುವ ಸಮಾಜದ ಶಾಂತಿಯನ್ನು ಕದಡುವ ಕೆಲಸವಾಗುತ್ತಿದೆ. ಘನ ಸರ್ಕಾರದ ಸುತ್ತೋಲೆ ಮತ್ತು ಮಾನದಂಡದಂತೆ ಇತ್ತೀಚೆಗೆ ಜಿಲ್ಲಾಡಳಿತ ಇಲ್ಲಿರುವ 44 ಕುಟುಂಬಗಳಿಗೆ ಹಕ್ಕುಪತ್ರ ನೀಡಿದೆ, ಹಾಗಾಗಿ ಅನಧಿಕೃತ ಶೆಡ್‌ಗಳನ್ನು ನಗರಪಾಲಿಕೆ ಅಧಿಕಾರಿಗಳು ತೆರವುಗೊಳಿಸಬೇಕು. ದ್ವೇಷ ಬಿತ್ತುವ ಕಿಡಿಗೇಡಿಗಳ ಮೇಲೆ ಪೊಲೀಸ್ ಇಲಾಖೆ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಸ್ಥಳೀಯರಾದ ರಾಜಮ್ಮ ಮತ್ತು ನಗೀನಾ ಮಾತನಾಡಿ, ಕಳೆದ 40 ವರ್ಷಗಳಿಂದ ನಾವು ವಾಸಿಸುವ ಮನೆಗಳಿಗೆ ಹಕ್ಕುಪತ್ರಗಳಿರಲಿಲ್ಲ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಇರಲಿಲ್ಲ ನಾವು ತುಮಕೂರು ಸ್ಲಂ ಸಮಿತಿಯಿಂದ ಸಂಘಟಿತರಾಗಿ ನಮ್ಮ ಪ್ರದೇಶವನ್ನು ಘೋಷಣೆ ಮಾಡಿಸಿಕೊಂಡ ಮೇಲೆ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಕಲ್ಪಿಸಿ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದಿಂದ ಹಕ್ಕುಪತ್ರ ನೀಡಿರುವುದರಿಂದ ನಿಟ್ಟುಸಿರು ಬಿಟ್ಟಿದ್ದೇವೆ, ಆದರೆ ನಮ್ಮ ಪ್ರದೇಶಕ್ಕೆ ಸಂಬಂಧವಿಲ್ಲದ ಜಯಸಿಂಹ ಮತ್ತು ಅವರ ಹಿಂಬಾಲಕರು ನಮಗೆ ಪ್ರತಿನಿತ್ಯ ತೊಂದರೆ ನೀಡುತ್ತಿರುವುದಲ್ಲದೆ ಬೇರೆ ನಗರದ ಜನರನ್ನು ಕರೆಸಿ ಗುಂಪು ಗುಂಪಾಗಿ ಸೇರುವುದು, ತೊಡೆತಟ್ಟಿ ಹೆಣ್ಣು ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸ್ಥಳೀಯರನ್ನು ಎತ್ತುಕಟ್ಟಿ ಜಗಳ ಮಾಡಿಸಬೇಕೆಂದು ಮುಂದಾಗಿರುವುದು ಭಯದ ವಾತಾವರಣಕ್ಕೆ ಕಾರಣವಾಗಿದೆ ಮಾನ್ಯ ಜಿಲ್ಲಾಧಿಕಾರಿಗಳು ನಮಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಗರಪಾಲಿಕೆ ಮತ್ತು ಪೊಲೀಸ್ ಇಲಾಖೆಗೂ ಮನವಿ ಸಲ್ಲಿಸಲಾಯಿತು ಪ್ರತಿಭಟನಾ ನೇತೃತ್ವವನ್ನು ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಅರುಣ್, ತಿರುಮಲಯ್ಯ, ಕೃಷ್ಣಮೂರ್ತಿ, ತಂಕ್ರಯ್ಯ, ಮುಬಾರಕ್, ರಂಗನಾಥ್ ಶಾಬುದ್ದೀನ್ ವಹಿಸಿದ್ದರು ಎಳ್ಳರಬಂಡೆ ಶಾಖಾ ಸಮಿತಿಯ ಶಾಖಾ ಸಮಿತಿಯ ಜಾಬೀರ್ ಖಾನ್, ಮಂಜುನಾಥ್, ಶಹೇಬ್ ಉಲ್ಲಾಖಾನ್, ಗೌರಮ್ಮ, ರತ್ನಮ್ಮ, ಶಾರದಮ್ಮ, ಮುನೀರ್ ಅಹಮದ್, ಅಮೀನ್ ಬಾನು, ಜಯಂತಿ, ಮಂಜುಳಾ, ರಮಾದೇವಿ, ಆಯಿಷಾ, ಪದ್ಮ, ಅಂಜನಮ್ಮ ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


