ಕೊರಟಗೆರೆ: ಉದ್ಯೋಗ ಹರಸಿ ಬೆಂಗಳೂರಿಗೆ ಪ್ರಯಾಣಿಸುವಂತಹ ಸಮಸ್ಯೆ, ಆದರೆ ವಾರದ ಮೊದಲ ದಿನ ಸೋಮವಾರ ಮಾತ್ರ ಪ್ರಯಾಣಿಕರು ಗಂಟೆ ಗಟ್ಟಲೆ ಬಸ್ ಗಾಗಿ ಕಾಯುವಂತಹ ಪರಿಸ್ಥಿತಿ ಎದುರಾಗಿದ್ದು, ಬೇಸತ್ತ ಪ್ರಯಾಣಿಕರು ಸೋಮವಾರ ಮುಂಜಾನೆ ಕೆಎಸ್ ಆರ್ ಟಿಸಿ ಬಸ್ ತಡೆದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಪಾವಗಡ, ಮಧುಗಿರಿ ಮಾರ್ಗದಿಂದ ಬರುವಂತಹ ಕೆಎಸ್ ಆರ್ ಟಿಸಿ ಬಸ್ ಗಳು ಭರ್ತಿಯಾಗಿ ಬರುತ್ತಿರುವ ಕಾರಣ ನಿಲ್ದಾಣದಲ್ಲಿ ನಿಲ್ಲಿಸುತ್ತಿಲ್ಲಾ, ಕೆಲ ಬಸ್‌ಗಳು ಪಟ್ಟಣದೊಳಗೆ ಬಾರದೆ ಬೈಪಾಸ್ ಮೂಲಕವೇ ಹೋಗುತ್ತಿವೆ, ಎಂದು ಗಂಟೆ ಗಟ್ಟಲೆ ಬಸ್‌ಗಾಗಿ ಕಾದು ಬೇಸೆತ್ತು ಕೆಲ ನಿಮಿಷಗಳ ಕಾಲ ಬಸ್ ತಡೆದು ಆಕ್ರೋಶ ಹೊರಹಾಕಿದ್ದಾರೆ.
ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವ ತನಕ ಬಸ್ ಮುಂದಕ್ಕೆ ಬಿಡುವುದಿಲ್ಲಾ, ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಬರಲು ಹೇಳಿ ಪ್ರಯಾಣಿಕರ ನೋವನ್ನು ಗಮನಿಸುವಂತೆ ತಿಳಿಸಿ ಎಂದು ಪ್ರಯಾಣಿಕರು ಸಾರಿಗೆ ಬಸ್ ಚಾಲಕ, ನಿರ್ವಾಹಕರಿಗೆ ಸೂಚನೆ ನೀಡಿದ್ದು, ಪೊಲೀಸ್ ಅಧಿಕಾರಿಗಳ ಮಧ್ಯಪ್ರವೇಶದಿಂದ ಪ್ರಯಾಣಿಕರು ಮತ್ತು ಚಾಲಕರ ನಡುವೆ ಉಂಟಾಗಿದ್ದ ವಾಗ್ವಾದವನ್ನು ನಿಲ್ಲಿಸಿ ತಿಳಿ ಹೇಳಿ ಪ್ರಯಾಣಿಕ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
		
					
					


