ತಿಪಟೂರು: ದಿನೇ ದಿನೇ ಹೆಚ್ಚುತ್ತಿರುವ ಬೆಲೆ ಏರಿಕೆಯಿಂದ ಲಾರಿ ಮಾಲೀಕರ ಹೈರಾಣಾಗಿದ್ದು ಬೆಲೆ ಏರಿಕೆ ನಡುವೆ ಕೆ.ಬಿ.ಕ್ರಾಸ್ ಮೈನ್ಸ್ ಟ್ರಾನ್ಸ್ ಪೋರ್ಟ್ ಮಾಲೀಕರು ಲಾರಿ ಮಾಲೀಕರಿಗೆ ಟೆನೇಜ್ ಹಣ ಕಡಿತಗೊಳಿಸಿ ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ಕೆ.ಬಿ ಕ್ರಾಸ್ ನಲ್ಲಿ ಚಿಕ್ಕನಾಯ್ಕನಹಳ್ಳಿ ತಾಲ್ಲೂಕು ಲಾರಿ ಮಾಲೀಕರ ಸೇವಾ ಅಭಿವೃದ್ದಿ ಸಂಘದಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಪ್ರತಿಭಟನಾ ನಿರತರನ್ನ ಉದ್ದೇಶಿಸಿ ಮಾತನಾಡಿದ ತುಮಕೂರು ಜಿಲ್ಲಾ ಟ್ರಕ್ ಮಾಲೀಕರ ಸಂಘದ ಅಧ್ಯಕ್ಷ ಮುಜಾಮಿಲ್ ಪಾಷ, ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಕೆ.ಬಿ ಕ್ರಾಸ್ ಭರತ್ ರಾಜ್ ಮೈನ್ಸ್ ನಿಂದ ಬಳ್ಳಾರಿ ಹೊಸಪೇಟೆಗೆ ಟನ್ ಅದಿರು ಸಾಗಿಸಲು ಎಂಟುನೂರು ರೂಪಾಯಿ ನಿಗದಿಗೊಳಿಸಲಾಗಿತ್ತು, ಆರುತಿಂಗಳ ಕಾಲಾ ಎಂಟುನೂರು ರೂಪಾಯಿ ನೀಡಿದ, ಟ್ರಾನ್ಸ್ ಪೋರ್ಟ್ ಕಂಪನಿ ಮಾಲೀಕರು ಏಕಾಏಕಿಯಾಗಿ ಏಳುನೂರು ರೂಪಾಯಿ ಟನ್ ಗೆ ನೀಡಲು ಮುಂದಾಗಿರುವುದು ಸರಿಯಲ್ಲ, ಇತ್ತಿಚಿನ ದಿನಗಳಲ್ಲಿ ಡಿಸೇಲ್ ಬೆಲೆ ಏರಿಕೆ, ಸ್ಪೇರ್ ಸ್ಪಡ್ಸ್ ಬೆಲೆ ಏರಿಕೆ , ಟಯರ್ ಬೆಲೆ ಏರಿಕೆಯಾಗಿದೆ ಸೇರಿದಂತೆ ಲಾರಿ ಹಾಗೂ ಟ್ರ್ಸಾನ್ಸ್ ಪೋರ್ಟ್ ವಾಹನಗಳಿಗೆ ಬಳಸುವ ವಸ್ತುಗಳು ಸೇರಿದಂತೆ ಟೋಲ್ ಬೆಲೆಯು ದುಬಾರಿಯಾಗಿದ್ದು, ಲಾರಿಮಾಲೀಕರು ಬೆಲೆಏರಿಕೆಯಿಂದ ಲಾರಿಗಳನ್ನ ಮಾರಾಟ ಮಾಡಿ ಬೀದಿಗೆ ಬೀಳುವಂತ್ತಾಗಿದೆ. ತಿಂಗಳು ಪೂರ್ತಿ ದುಡಿದರು ಲಾರಿ ಡ್ರೈವರ್ಸ್ ಹಾಗೂ ಕ್ಲೀನರ್ ಗಳಿಗೆ ಸಂಬಳ ಕೊಡಲು ಸಾಧ್ಯವಾಗುತ್ತಿಲ್ಲ. ಸಂಕಷ್ಟದಲ್ಲಿ ಲಾರಿಗಳನ್ನ ನಡೆಸುತ್ತಿದ್ದು ಟ್ರ್ಸಾನ್ಸ್ ಪೋರ್ಟ್ ಮಾಲೀಕರು ಟನ್ ಅದಿರಿಗೆ ಸಾಗಣೆ ವೆಚ್ಚ ಜಾಸ್ತಿ ಮಾಡದೆ ಇಳಿಕೆ ಮಾಡಿರುವುದು ಖಂಡನೀಯವಾಗಿದು, ಕೂಡಲೇ ಟ್ರ್ಸಾನ್ಸ್ ಪೋರ್ಟ್ ಮಾಲೀಕರು ಟನ್ ಗೆ ಎಂಟುನೂರು ರೂಪಾಯಿಗಳ ಕೊಡಬೇಕು ನಮ್ಮ ಬೇಡಿಕೆ ಈಡೇರುವವರೆಗೂ ನಾವು ನಮ್ಮ ಲಾರಿಗಳನ್ನ ಲೋಡ್ ಮಾಡುವುದಿಲ್ಲ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಉಪಸ್ಥಿತರಿದ ಚಿಕ್ಕನಾಯ್ಕನಹಳ್ಳಿ ತಾಲ್ಲೂಕು ಲಾರಿ ಮಾಲೀಕರ ಸೇವಾ ಅಭಿವೃದ್ದಿ ಸಂಘದ ಅಧ್ಯಕ್ಷ ಜಯದೇವ್ ಮಾತನಾಡಿ, ಕೆ.ಬಿ.ಕ್ರಾಸ್ ನಿಂದ ಚಿತ್ರದುರ್ಗ , ಬಳ್ಳಾರಿ, ಹೊಸಪೇಟೆಗೆ ಟನ್ ಅದಿರು ಸಾಗಿಸಲು ಕೇವಲ ಏಳುನೂರು ರೂಪಾಯಿ ನೀಡುತ್ತಿದ್ದಾರೆ. ಎಂಟುನೂರು ರೂಪಾಯಿ ಟನ್ ಗೆ ನೀಡುತ್ತಿದ್ದ ಹಣವನ್ನ ಏಕಾಏಕಿ ಏಳುನೂರು ರೂಪಾಯಿಗೆ ಇಳಿಸಿ ಸಂಕಷ್ಟದಲ್ಲಿ ಇರುವ ಲಾರಿ ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡುತ್ತಿದ್ದಾರೆ ಟ್ರಾನ್ಸ್ ಪೋರ್ಟ್ ಮಾಲೀಕರ ದೌರ್ಜನ್ಯದಿಂದ ಲಾರಿ ಮಾಲೀಕರು ವಿಷ ಕುಡಿಯುವಂತಾಗಿದೆ. ಬೆಲೆ ಏರಿಕೆಯಿಂದ ಕಂಗಾಲಾಗಿರುವ ನಮಗೆ ಕೂಡಲೇ ಎಂಟುನೂರು ರೂಪಾಯಿ ಟನ್ ಗೆ ನೀಡ ಬೇಕು ಲಾರಿ ಮಾಲೀಕರ ನ್ಯಾಯಯುತ ಬೇಡಿಕೆಗಳನ್ನ ಈಡೇರಿಸ ಬೇಕು ಎಂದು ಒತ್ತಾಯಿಸಿದರು
ಪ್ರತಿಭಟನೆಯಲ್ಲಿ ಲಾರಿ ಮಾಲೀಕರ ಸಂಘದ ಮುಖಂಡರಾದ ಅಜ್ಮಲ್ ಅಹಮದ್, ಕಾರ್ಯದರ್ಶಿ ಚನ್ನಬಸವಯ್ಯ, ಜಫರ್ ಉಲ್ಲಾ ಖಾನ್, ಅಲ್ತಾಫ್ ಪಾಷ, ತ್ಯಾಗರಾಜ್, ಅಕ್ಬರ್ ಪಾಷ ಸಯ್ಯಾದ್ ಅಲೀಮ್, ಸಯ್ಯದ್ ಜಾಬೀರ್ ಪಾಷ ಮುಂತಾದವರು ಉಪಸ್ಥಿತರಿದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/F93PYUrewdsCfgROQBejv5
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ: https://www.youtube.com/channel/UCtrQuDOToxHu8dzMaHjoYXA