ಕುಕಡೊಳ್ಳಿ ಗ್ರಾಮಸ್ಥರ ಬಹು ವರ್ಷಗಳ ಬೇಡಿಕೆಯಾದ ನೂತನ ಪ್ರೌಢ ಶಾಲೆಯ ಮಂಜೂರಾತಿಗಾಗಿ ಸೋಮವಾರ ಮುಂಜಾನೆ ಗಣೇಶ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲರಿಗೆ, ಮುಖ್ಯ ಮಂತ್ರಿಗಳಿಗೆ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಗಳಿಗೆ ರಕ್ತದಿಂದ ಗ್ರಾಮಸ್ಥರು ಮನವಿ ಬರೆದು ಕರ್ನಾಟಕ ಸರ್ಕಾರದ ಮುಖ್ಯ ಮಂಂತ್ರಿಗಳಾದ ಬಸವರಾಜ ಬೊಮ್ಮಾಯಿ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಬಿ ಸಿ ನಾಗೇಶ ಮತ್ತು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ,ಪೋಸ್ಟ ಮುಖಾಂತರ ರಕ್ತದ ಮೂಲಕ ಮನವಿ ಕಳಿಸಲಾಯಿತು.
ಇದೇ ಸಂದರ್ಭದಲ್ಲಿ ಗ್ರಾಮದ ಶಿಕ್ಷಣ ಪ್ರೇಮಿಗಳು, ಪಾಲಕರು ಯುವಕರು, ಸಂಘ ಸಂಸ್ಥೆಗಳ ಸರ್ವ ಸದಸ್ಯರು ಪಕ್ಷಾತೀತವಾಗಿ ಪಾಲ್ಗೊಂಡು ಗ್ರಾಮಸ್ಥರು ರಕ್ತದಲ್ಲಿ ಮನವಿ ಸಲ್ಲಿಸಲಿದರು.
ಇದೆ ಸಮಯದಲ್ಲಿ ಗ್ರಾಮದ ಯುವಕರಾದ ಮಾರುತಿ ಸಾರಾವರಿ, ವಿಠ್ಠಲ ಬಡಸ, ರಮೇಶ ಲಕಮೋಜಿ,ಪುಂಡಲಿಕ ರಜಪೂತ,ಕಿರಣ ಹಟ್ಟಿ, ಶ್ರೀಕಾಂತ ಹಟ್ಟಿ , ಬಾಬು ಲಕಮೋಜಿ, ಬಸ್ಸು ಗಾಡಿಕೊಪ್ಪ,ರಾಮಕೃಷ್ಣ ವಡ್ಡಿನ , ತುಕಾರಾಮ ಹಟ್ಟಿ,
ವಿಜಯ ವಡ್ಡಿನ. ಸೇರಿದಂತೆ ಕುಕಡೊಳ್ಳಿ ಗ್ರಾಮಸ್ಥರು ಪಕ್ಷಾತೀತವಾಗಿ ಪಾಲ್ಗೊಂಡಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


