ಬೆಂಗಳೂರು: ಇಂದು ಬೆಂಗಳೂರಲ್ಲಿ ನಡೆದ 545 ಪಿಎಸ್ ಐ ನೇಮಕಾತಿ ಮರುಪರೀಕ್ಷೆಯಲ್ಲಿ ಕೆಲವರು ಉದ್ದತೋಳಿನ ಶರ್ಟ್ ಮತ್ತು ಮಹಿಳೆಯರು ಆಭರಣಗಳನ್ನು ಧರಿಸಿ ಬಂದಿದ್ದರು.
ಪರೀಕ್ಷಾರ್ಥಿಗಳಿಗೆ ನೀಡಿದ ಸೂಚನೆಗಳಲ್ಲಿ ಪೂರ್ತಿ ತೋಳಿನ ಶರ್ಟ್ ಧರಿಸಿ ಬರಕೂಡದು ಮತ್ತು ಮಹಿಳಾ ಅಭ್ಯರ್ಥಿಗಳು ಯಾವುದೇ ಬಗೆಯ ಅಭರಣ ಧರಿಸಿ ಬರಬಾರದು ಅಂತ ಸ್ಪಷ್ಟವಾಗಿ ಹೇಳಲಾಗಿದ್ದರು ಎನ್ನಲಾಗಿದೆ.
ಉದ್ದತೋಳಿನ ಶರ್ಟ್ ಧರಿಸಿ ಬಂದಿದ್ದ ಅಭ್ಯರ್ಥಿಗಳ ಶರ್ಟ್ ತೋಳುಗಳನ್ನು ಪ್ರಾಧಿಕಾರದ ಸಿಬ್ಬಂದಿ ಕತ್ತರಿಸಿ ಅರ್ಧತೋಳು ಮಾಡಿದ್ದಾರೆ. ನೌಕರಿಗಾಗಿ ನಿರೀಕ್ಷಿಸುತ್ತಿರುವ ಯುವಕರು ಅನಿವಾರ್ಯವಾಗಿ ತಮ್ಮ ಅಂಗಿಗಳ ತೋಳನ್ನು ಕತ್ತರಿಸಲು ಒಪ್ಪಲೇ ಬೇಕಾಯಿತು. ಹಾಗೆಯೇ, ಮಹಿಳಾ ಅಭ್ಯರ್ಥಿಗಳು ಆಭರಣಗಳನ್ನು ತೆಗೆದಿಟ್ಟು ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಿದರು. ಕೆಲ ಮಹಿಳೆಯರು ಪರೀಕ್ಷೆ ಬರೆಯದೆ ವಾಪಸ್ಸು ಹೋದರೆಂಬ ಮಾಹಿತಿಯೂ ಇದೆ.
ಇದರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ್ದೇನೂ ತಪ್ಪಿಲ್ಲಅನ್ನಬಹುದು. ಪರೀಕ್ಷಾರ್ಥಿಗಳಿಗೆ ಮೊದಲೇ ಪರೀಕ್ಷಾ ನಿಬಂಧನೆಗಳನ್ನು ನೀಡಿದ್ದರೆನ್ನಲಾಗಿದೆ.


