nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸಾರ್ವಜನಿಕರ ಮೇಲೆ ಜೇನುಹುಳು ದಾಳಿ: ತಡೆ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಮನವಿ

    March 27, 2026

    ಪಾವಗಡದಲ್ಲಿ ಜನ ಸಂಪರ್ಕ ಸಭೆ: ಬೆಟ್ಟಗಳಲ್ಲಿ ಮಣ್ಣು ಅಗೆತ: ಕ್ರಮಕ್ಕೆ ಸೂಚನೆ, ಸಾರ್ವಜನಿಕರ ಅಹವಾಲುಗಳೇನು?

    March 27, 2026

    ತುಮಕೂರು: ಅರಣ್ಯ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ; ಜಾಲ ಬಯಲಿಗೆ

    March 27, 2026
    Facebook Twitter Instagram
    ಟ್ರೆಂಡಿಂಗ್
    • ಸಾರ್ವಜನಿಕರ ಮೇಲೆ ಜೇನುಹುಳು ದಾಳಿ: ತಡೆ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಮನವಿ
    • ಪಾವಗಡದಲ್ಲಿ ಜನ ಸಂಪರ್ಕ ಸಭೆ: ಬೆಟ್ಟಗಳಲ್ಲಿ ಮಣ್ಣು ಅಗೆತ: ಕ್ರಮಕ್ಕೆ ಸೂಚನೆ, ಸಾರ್ವಜನಿಕರ ಅಹವಾಲುಗಳೇನು?
    • ತುಮಕೂರು: ಅರಣ್ಯ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ; ಜಾಲ ಬಯಲಿಗೆ
    • ಒಂದೇ ಸರ್ವೆ ನಂಬರ್ ನಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಯಿದ್ದರೆ ಜಂಟಿ ಸರ್ವೆ:  ಅರಣ್ಯ ಭೂಮಿಯನ್ನು ಮಂಜೂರು ಮಾಡಲು ಸಾಧ್ಯವೇ ಇಲ್ಲ: ಸಚಿವ ಈಶ್ವರ ಖಂಡ್ರೆ
    • ತುಮಕೂರು: ಬೇಡಿಕೆ 1,400 ಸಿಲಿಂಡರ್‌ ಗಳು, ಪೂರೈಕೆಯಾಗುತ್ತಿರುವುದು ಕೇವಲ 350!
    • ಏ.4 ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ “ಜಿಲ್ಲಾ ಮಟ್ಟದ ಬೃಹತ್ ಜನತಾ ದರ್ಶನ”
    • ಬೀದರ್‌ ನಲ್ಲಿ ತೈಲ ಅಭಾವ: 7ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ ಗಳು ಬಂದ್!
    • ಶಾಲಾ ದಾಖಲಾತಿ ವಯೋಮಿತಿ: 60 ದಿನಗಳ ವಿನಾಯಿತಿ: ಸಚಿವ ಮಧುಬಂಗಾರಪ್ಪ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪಾವಗಡದಲ್ಲಿ ಜನ ಸಂಪರ್ಕ ಸಭೆ: ಬೆಟ್ಟಗಳಲ್ಲಿ ಮಣ್ಣು ಅಗೆತ: ಕ್ರಮಕ್ಕೆ ಸೂಚನೆ, ಸಾರ್ವಜನಿಕರ ಅಹವಾಲುಗಳೇನು?
    ಪಾವಗಡ March 27, 2026

    ಪಾವಗಡದಲ್ಲಿ ಜನ ಸಂಪರ್ಕ ಸಭೆ: ಬೆಟ್ಟಗಳಲ್ಲಿ ಮಣ್ಣು ಅಗೆತ: ಕ್ರಮಕ್ಕೆ ಸೂಚನೆ, ಸಾರ್ವಜನಿಕರ ಅಹವಾಲುಗಳೇನು?

    By adminMarch 27, 2026No Comments2 Mins Read
    shubha kalyan

    ಪಾವಗಡ: ಸರ್ಕಾರಿ ಯೋಜನೆಗಳ ಜೊತೆಗೆ ಅಧಿಕಾರಿಗಳ ಕಾರ್ಯಕ್ಷಮತೆ ಪರಿಶೀಲಿಸುವ ಸಲುವಾಗಿ ಹೋಬಳಿ ಮಟ್ಟದಲ್ಲಿ ಜನ ಸಂಪರ್ಕ ಸಭೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.

    ಅವರು ಗುರುವಾರ ತಾಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಹಾಗೂ ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅರ್ಜಿ ಅಹವಾಲು ಸ್ವೀಕರಿಸಿ ಮಾತನಾಡಿದರು.


    Provided by
    Provided by

    ವೈ.ಎನ್.ಹೊಸಕೋಟೆ ಗ್ರಾಮದಲ್ಲಿ 163, ಪಟ್ಟಣದಲ್ಲಿ 232 ಅರ್ಜಿಗಳು ಸೇರಿ ಒಟ್ಟು 395 ಅರ್ಜಿಗಳು ಸ್ವೀಕರಿಸಲಾಗಿದೆ. ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ವಸತಿ, ನಿವೇಶನ, ಶುದ್ಧ ಕುಡಿಯುವ ನೀರಿನ ಸಮಸ್ಯೆ, ರೈತರ ಜಮೀನುಗಳಿಗೆ ದಾರಿ ಸೇರಿದಂತೆ ಪಿಂಚಣಿ ಸಮಸ್ಯೆಗಳು, ಆಧಾರ್, ಆಹಾರ, ಪಿಂಚಣಿ ಮತ್ತು ಪೌತಿ ಖಾತೆ ಅದಾಲತ್ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರ ನಾನಾ ರೀತಿಯ ಸಮಸ್ಯೆಗಳ ಜೊತೆಯಲ್ಲಿ ಗ್ರಾಹಕರ ಸಮಸ್ಯೆಗಳ ಬಗ್ಗೆ ಕೂಡ ಅರ್ಜಿ ಸಲ್ಲಿಕೆಯಾಗಿವೆ ಎಂದರು.

    ತಾಲೂಕಿನ ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಸಾರ್ವಜನಿಕರು ಅರ್ಜಿ ಸಲ್ಲಿಸಿದ್ದು, ಪ್ರತಿ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಆಯಾ ಇಲಾಖೆಯ ಅಧಿಕಾರಿಗಳನ್ನು ಕರೆಸಿ ತಕ್ಷಣ ಬಗೆಹರಿಸಿ ಮಾಹಿತಿ ನೀಡುವಂತೆ ಸೂಚಿಸಿದರು.

    ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮನವಿ ಸಲ್ಲಿಸಿ, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದರು.

    ಪಾವಗಡ ಪಟ್ಟಣದಲ್ಲಿ ನಡೆದ ಜನ ಸಂಪರ್ಕ ಸಭೆಗೆ ಸುಮಾರು 500ಕ್ಕೂ ಹೆಚ್ಚು ಸಾರ್ವಜನಿಕರು ಬಂದಿದ್ದರು. ಸೂಕ್ತ ಸ್ಥಳದಲ್ಲಿ ಸಭೆ ನಡೆಯದ ಪರಿಣಾಮ ಸಾಕಷ್ಟು ಜನ ಸಾಲಿನಲ್ಲಿ ನಿಲ್ಲಲಾಗದೆ ವೃದ್ಧರು ತಾಲೂಕು ಆಡಳಿತದ ವಿರುದ್ಧ ಕಿಡಿಕಾರಿ ಅರ್ಜಿ ನೀಡದೆ ಹಿಂತಿರುಗಿದರು.

    ಪಟ್ಟಣದ ಸುತ್ತಮುತ್ತ ಬೆಟ್ಟಗಳಲ್ಲಿ ಮಣ್ಣು ತೆಗೆಯುವವರ ಮೇಲೆ ತಕ್ಷಣ ಕ್ರಮವಹಿಸಬೇಕೆಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಸಭೆಯಲ್ಲಿ ಮಧುಗಿರಿ ಎಸಿ ಗೋಟೂರು ಶಿವಪ್ಪ, ತಹಶೀಲ್ದಾರ್ ವೈ.ರವಿ, ಇಒ ಮಧುಸೂದನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

    ಜಾತಿ ತಾರತಮ್ಯ: ಇನ್ನೂ  ವೈ.ಎನ್.ಹೊಸಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ವೈದ್ಯೋಪಚಾರ ಮಾಡುವ ವೈದ್ಯರು ಕೀಳು ಮನಸ್ಥಿತಿಯಿಂದ ರೋಗಿಗಳನ್ನು ಕಾಣುತ್ತಾರೆ. ಹತ್ತಿರ ನಿಲ್ಲುವಂತಿಲ್ಲ, ದೂರ ನಿಂತು ರೋಗಿಗಳು ಆರೋಗ್ಯ ಸಮಸ್ಯೆ ಬಗ್ಗೆ ಹೇಳಬೇಕು. ಇಲ್ಲಿ ಜಾತಿ ತಾರತಮ್ಯದಿಂದ ನೋಡುವ ಪ್ರವೃತ್ತಿ ಇದೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಮುಂದೆ ವೇದನೆ ವ್ಯಕ್ತಪಡಿಸಿದರು.

    ಮೃತ ಮಲ್ಲಿಕಾರ್ಜುನಯ್ಯನ ತಾಯಿ ಕಣ್ಣೀರು:

    ಮೃದು ಸ್ವಭಾವದ, ಯಾರಿಗೂ ಕೇಡು ಬಯಸದ ನನ್ನ ಮಗ ಮಲ್ಲಿಕಾರ್ಜುನಯ್ಯ ಜೆಡಿ ಕೃಷ್ಣಪ್ಪನ ಕಿರುಕುಳದಿಂದ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಕೃಷ್ಣಪ್ಪ, ಕೆ.ಆರ್. ಮಂಜುನಾಥ ಮತ್ತು ಸೋಮಶೇಖರ್ ಮೂವರನ್ನು ಬಂಧಿಸಿ, ವಿಚಾರಣೆಗೊಳಪಡಿಸಿ ಎಂದು ಜಿಲ್ಲಾಧಿಕಾರಿಗಳ ಕೈಹಿಡಿದು ಅತ್ತ ಘಟನೆ ನಡೆಯಿತು.

    “ಏಪ್ರಿಲ್ 4ರಂದು ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜನ ಸಂಪರ್ಕ ಸಭೆ ನಡೆಯಲಿದೆ. 9 ತಾಲೂಕುಗಳಿಂದ ಬಂದಿರುವ ಅರ್ಜಿಗಳ ಸಮಸ್ಯೆಗಳಿಗೆ ಅಂದು ತಹಶೀಲ್ದಾರ್ ಮತ್ತು ತಾಲೂಕು ಮಟ್ಟದ ಇತರೆ ಅಧಿಕಾರಿಗಳು ಗಮನಹರಿಸಿ ಪರಿಹಾರ ನೀಡುವ ಕೆಲಸ ಆಗಲಿದೆ.”

    — ಶುಭ ಕಲ್ಯಾಣ್, ಜಿಲ್ಲಾಧಿಕಾರಿಗಳು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಹಿಂದೆ ಜಾರಿಯಲ್ಲಿದ್ದ ಮೀಸಲಾತಿ ಮುಂದುವರಿಸಿ: ಮಾ. 24 ರಂದು ಬೆಂಗಳೂರು ಚಲೋ: ತಿಪ್ಪೇಸ್ವಾಮಿ

    March 23, 2026

    ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಮಾಜ ಕಲ್ಯಾಣ ಅಧಿಕಾರಿ: ಮಲ್ಲಿಕಾರ್ಜುನ್

    March 21, 2026

    ಪಾವಗಡ: ಎಲ್‌ ಪಿಜಿ ಸಿಲಿಂಡರ್‌ ಗಾಗಿ ಗ್ರಾಹಕರ ಪರದಾಟ; ವಿತರಣಾ ಕೇಂದ್ರದ ಮುಂದೆ ಕ್ಯೂ

    March 13, 2026

    Leave A Reply Cancel Reply

    Our Picks

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026

    ನಮ್ಮೊಂದಿಗೆ ಪ್ರೇಮ, ಆದ್ರೆ ಮದುವೆಯಾಗಿದ್ದು ಮೋದಿಯವರನ್ನು: ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ

    March 18, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಸಾರ್ವಜನಿಕರ ಮೇಲೆ ಜೇನುಹುಳು ದಾಳಿ: ತಡೆ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಮನವಿ

    March 27, 2026

    ತುಮಕೂರು: ಸಾರ್ವಜನಿಕರ ಮೇಲೆ ಜೇನು ಹುಳುಗಳು ದಾಳಿ ಮಾಡುತ್ತಿರುವ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು, ತಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅಖಿಲ…

    ಪಾವಗಡದಲ್ಲಿ ಜನ ಸಂಪರ್ಕ ಸಭೆ: ಬೆಟ್ಟಗಳಲ್ಲಿ ಮಣ್ಣು ಅಗೆತ: ಕ್ರಮಕ್ಕೆ ಸೂಚನೆ, ಸಾರ್ವಜನಿಕರ ಅಹವಾಲುಗಳೇನು?

    March 27, 2026

    ತುಮಕೂರು: ಅರಣ್ಯ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ; ಜಾಲ ಬಯಲಿಗೆ

    March 27, 2026

    ಒಂದೇ ಸರ್ವೆ ನಂಬರ್ ನಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಯಿದ್ದರೆ ಜಂಟಿ ಸರ್ವೆ:  ಅರಣ್ಯ ಭೂಮಿಯನ್ನು ಮಂಜೂರು ಮಾಡಲು ಸಾಧ್ಯವೇ ಇಲ್ಲ: ಸಚಿವ ಈಶ್ವರ ಖಂಡ್ರೆ

    March 27, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.