ಮುಂಬೈ: ಇಲ್ಲಿನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಐಪಿಎಲ್ (Indian Premier League 2022) ಟೂರ್ನಿಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಐದು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಪಂಜಾಬ್ ಕಿಂಗ್ಸ್ ತಂಡವು ಬೆಂಗಳೂರು ತಂಡವನ್ನು 20 ಓವರ್ ಗಳಲ್ಲಿ ಕೇವಲ ಎರಡು ವಿಕೆಟ್ ಪಡೆಯುವ ಮೂಲಕ 205 ರನ್ ಗಳಿಗೆ ನಿಯಂತ್ರಿಸಿತು. ಬೆಂಗಳೂರು ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ ದುಫ್ಲೆಸಿಸ್ ನಾಯಕನ ಆಟವನ್ನು ಆಡಿದರು.ಕೇವಲ 57 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಏಳು ಸಿಕ್ಸರ್ ಗಳ ನೆರವಿನಿಂದ 88 ರನ್ ಗಳನ್ನು ಗಳಿಸಿದರು.
ಇದಾದ ನಂತರ ಅನುಜ್ ರಾವತ್ 21 ರನ್ ಗಳಿಸಿ ಔಟಾದಾಗ ಕ್ರೀಸ್ ಗೆ ಬಂದಂತಹ ಕೊಹ್ಲಿ ಹಾಗೂ ಕಾರ್ತಿಕ್ ಕ್ರಮವಾಗಿ 41 ಹಾಗೂ 32 ರನ್ ಗಳಿಸುವ ಮೂಲಕ ತಂಡದ ಮೊತ್ತವು 200 ರ ಗಡಿಯನ್ನು ದಾಟಲು ನೆರವಾದರು.
ರಾಯಲ್ ಚಾಲೆಂಜರ್ಸ್ ತಂಡವು ನೀಡಿದ 206 ರನ್ ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು ಆರಂಭದಲ್ಲಿ ಮಾಯಾಂಕ್ ಅಗರವಾಲ್ ಶಿಖರ್ ಧವನ್ ಹಾಗೂ ಭಾನುಷಾ ರಾಜಪಕ್ಷ ಅವರು ಕ್ರಮವಾಗಿ 32,43 43 ರನ್ ಗಳಿಸುವ ಮೂಲಕ ತಂಡವು ಗೆಲುವಿತ್ತ ಕೊಂಡೊಯ್ದರು.
ಇದಾದ ನಂತರ ಕೊನೆಯಲ್ಲಿ ಶಾರುಖ್ ಖಾನ್ ಮತ್ತು ಒಡೆನ್ ಸ್ಮಿತ್ ಕ್ರಮವಾಗಿ 24,25 ರನ್ ಗಳಿಸುವ ಮೂಲಕ ತಂಡವನ್ನು ಇನ್ನೂ ಒಂದು ಓವರ್ ಬಾಕಿ ಇರುವಂತೆ ಗೆಲುವಿನ ತಡಕ್ಕೆ ಸೇರಿಸಿದರು.
ವರದಿ: ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5