ಡ್ರಗ್ಸ್ ದಾಸನಾಗಿದ್ದ ಯುವಕನೊಬ್ಬ ಪುನಶ್ಚೇತನ ಶಿಬಿರದಿಂದ ಮರಳಿದ ಬೆನ್ನಲ್ಲೇ ಹೆತ್ತವರನ್ನೂ ಬಿಡದೇ ತನ್ನ ಮನೆಯ ನಾಲ್ವರನ್ನು ಭೀಕರವಾಗಿ ಹತ್ಯೆಗೈದ ಘಟನೆ ದೆಹಲಿಯಲ್ಲಿ ನಡೆದಿದೆ.
ಕೇಶವ್ (25) ಎಂಬಾತ ಫಾಮ್ ಹೌಸ್ ನ ಮನೆಯಲ್ಲಿ ತಂದೆ ದಿನೇಶ್ (50), ತಾಯಿ ದರ್ಶನ, ಸೋದರಿ ಊರ್ವಶಿ (18) ಮತ್ತು ಅಜ್ಜಿ ದೀವಾನಾ ದೇವಿ (75) ಹತ್ಯೆಗೈದಿದ್ದಾನೆ.
ತಂದೆ-ತಾಯಿಯ ಶವ ಬಾತ್ ರೂಮ್ ನಲ್ಲಿ ಅಜ್ಜಿ ಮತ್ತು ಸೋದರಿಯ ಶವ ಮತ್ತೊಂದು ಕೊಠಡಿಯಲ್ಲಿ ಪತ್ತೆಯಾಗಿದ್ದು, ಇಡೀ ಮನೆ ರಕ್ತದ ಕಲೆಗಳಿಂದ ತುಂಬಿದ್ದು, ಭಯಾನಕ ದೃಶ್ಯವಾಗಿತ್ತು.
ಮಾರಕಾಸ್ತ್ರದಿಂದ ಎಲ್ಲರ ಕುತ್ತಿಗೆ ಸೀಳಿ ನಂತರ ಮನ ಬಂದಂತೆ ಇರಿದು ಕುಟುಂಬದ ಸದಸ್ಯರನ್ನೇ ಕೇಶವ್ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಸಮೀಪದಲ್ಲೇ ಇದ್ದ ಸಂಬಂಧಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳೆದ ದೀಪಾವಳಿಯಲ್ಲಿ ಉದ್ಯೋಗ ಕಳೆದುಕೊಂಡಿದ್ದ ಕೇಶವ್, ಡ್ರಗ್ಸ್ ದಾಸನಾಗಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಪುನಶ್ಚೇತನ ಶಿಬಿರಕ್ಕೆ ಹೆತ್ತವರು ದಾಖಲಿಸಿದ್ದರು. ಆದರೆ ಅಲ್ಲಿಂದ ಬಂದ ಕೂಡಲೇ ಮನೆಯವರನ್ನೇ ಬಲಿಪಡೆದಿದ್ದಾನೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy