ಕರ್ನಾಟಕ ಲೇಖಕಿಯರ ಸಂಘ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತೆ ಆರ್. ಪೂರ್ಣಿಮಾ ಅವರಿಗೆ ‘ನಾಗಮಣಿ ಎಸ್. ರಾವ್ ದತ್ತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಸಾಹಿತಿ ಕಮಲಾ ಹಂಪನಾ ಮಾತನಾಡಿ, ಶಾಸನವೊಂದರಲ್ಲಿ ‘ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸ. ‘ಎನ್ನಲಾಗಿದೆ. ಇದನ್ನು ಪ್ರೌಢಪ್ರತಾಪದೇವರಾಯನ ಮಂತ್ರಿ ಲಕ್ಷ್ಮೀಧರಾಮಾತ್ಯನಿಗೆ ಬಾಲ್ಯದಲ್ಲಿ ಆತನ ತಾಯಿ ಹಾಲನ್ನು ಕುಡಿಸುತ್ತಾ ಹೇಳುತ್ತಾಳೆ. ಆಗ ಕೆರೆ, ಬಾವಿಗಳು ನೀರಿನ ಮೂಲಾಧಾರವಾಗಿದ್ದವು.
ದೇವಾಲಯಗಳು ಪಂಚಾಯಿತಿ ಕಟ್ಟೆಗಳಾಗಿದ್ದವು. ಅಲ್ಲಿ ಸರಿ ತಪ್ಪುಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಆದರೆ, ಈಗ ಅವುಗಳ ಮಹತ್ವ ಅರಿತುಕೊಳ್ಳುವಲ್ಲಿ ವಿಫಲವಾಗುತ್ತಿದ್ದೇವೆ. ನಮ್ಮ ನಡೆ ಇತರರಿಗೆ ಮಾದರಿಯಾಗುವಂತಿರಬೇಕು’ ಎಂದು ಹೇಳಿದರು.
ಆರ್. ಪೂರ್ಣಿಮಾ, ‘ನಾಗಮಣಿ ಅವರು ವಿಧಾನಮಂಡಲ ಅಧಿವೇಶನದ ವರದಿ ಮಾಡಿದ ಮೊದಲ ಪತ್ರಕರ್ತೆ. ಅವರ ಅನುಭವ ರೋಮಾಂಚನಕಾರಿಯಾದದ್ದು. ಅವರು ತಮ್ಮ ಜೀವನಾನುಭವವನ್ನು ಪುಸ್ತಕ ರೂಪದಲ್ಲಿ ಹೊರತರಬೇಕು’ ಎಂದು ಹೇಳಿದರು.
ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಅವರು ‘ಪತ್ರಿಕೆಗಳಲ್ಲಿ ಸಾಹಿತ್ಯದ ಪಾತ್ರ ಅಂದು-ಇಂದು’ ಎಂಬ ವಿಷಯ ಬಗ್ಗೆ ಮತ್ತು ಬಸವನಗುಡಿಯ ನ್ಯಾಷನಲ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಮೋಹನಬಾಬು ಅವರು ‘ಪತ್ರಿಕೋದ್ಯಮದಲ್ಲಿ ಅವಕಾಶಗಳು ಮತ್ತು ಸವಾಲುಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


