ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ರೋಟರಿ ಸಂಸ್ಥೆಗಳು ಸಾರ್ವಜನಿಕರಿಗೆ ಆರೋಗ್ಯ, ಶಿಕ್ಷಣ, ಸಮಾಜಸೇವೆ ಸೇರಿದಂತೆ ಹಲವಾರು ಉತ್ತಮ ಸೇವೆಗಳನ್ನು ನೀಡುವುದರ ಜೊತೆಗೆ ಯುದ್ಧದ ಸಂದರ್ಭದಲ್ಲಿ ಸಹ ನಮ್ಮ ಸೈನಿಕರಿಗೆ ಗಾಯಾಳುಗಳಿಗೆ ತುರ್ತು ಸೇವೆ ಸೇರಿದಂತೆ ಹಲವಾರು ಉಪಯುಕ್ತ ಸಹಾಯಗಳನ್ನು ಮಾಡು ವಂತಹ ಸಂಸ್ಥೆಯಾಗಿದೆ, ಇವರ ಸೇವೆ ಇದೇ ರೀತಿ ಮುಂದುವರೆಯಲಿ ಎಂಬುದಾಗಿ ನಗರಸಭೆ ಅಧ್ಯಕ್ಷರಾದ ಶಂಷುನ್ನೀಸಾ ಅವರು ತಿಳಿಸಿದರು.
ಹಿರಿಯೂರು ನಗರದ ರೋಟರಿ ಸಭಾಭವನದಲ್ಲಿ ಬುಧವಾರ ಮಧ್ಯಾಹ್ನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ ಸಂಸ್ಥೆ ಹಾಗೂ ಇನ್ಹರ್ ವ್ಹೀಲ್ ಕ್ಲಬ್ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕರಿಗೆ ಉಚಿತ ಹೈಜನ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಿರಿಯೂರು ನಗರಸಭೆ ಅಧ್ಯಕ್ಷೆ ಶಂಶುನ್ನಿಸಾ ಅವರು ಮಾತನಾಡಿದರು.
ರೋಟರಿ ಸಂಸ್ಥೆ ಜಿಲ್ಲಾ ಗೌರ್ನರ್ ವಿ.ತಿರುಪತಿನಾಯ್ಡು ಅವರು ಮಾತನಾಡಿ, ರೋಟರಿ ಸಂಸ್ಥೆ ವತಿಯಿಂದ ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಸಮಾಜದ ಬಡವರಿಗೆ, ಅನಾಥರಿಗೆ, ನಿರ್ಗತಿಕರಿಗೆ, ಫುಟ್ ಮಾಸ್, ಸ್ಯಾನಿಟೈಸರ್ ಗಳನ್ನು ಹಂಚಿಕೆ ಮಾಡಿದ್ದು, ರೋಟರಿ ಸಂಸ್ಥೆಯ ವರ್ಷದ 365 ದಿನಗಳ ಪ್ರತಿಯೊಂದು ಕಾರ್ಯಕ್ರಮವನ್ನು ರೆಕಾರ್ಡ್ ಮಾಡಲಾಗುತ್ತದೆ. ಕಳೆದ 50 ವರ್ಷಗಳಿಂದ ನಮ್ಮ ಸಂಘದ ನಾಗಣ್ಣ ನವರು ಸೇರಿದಂತೆ ಎಲ್ಲರೂ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎಂದರಲ್ಲದೆ, ನಮ್ಮ ರೋಟರಿ 3160 ಚಿತ್ರದುರ್ಗ ವತಿಯಿಂದ ಜಿಲ್ಲೆಯಲ್ಲಿನ ಎಸ್.ಎಸ್.ಎಲ್.ಸಿ. ಎಲ್ಲಾ ವಿದ್ಯಾರ್ಥಿಗಳಿಗೆ ಸುಮಾರು 50 ಸಾವಿರ ರೂಪಾಯಿಗಳ ಮೌಲ್ಯದ ಪುಸ್ತಕಗಳನ್ನು ವಿತರಣೆ ಮಾಡಲಾಗಿದ್ದು, ಇದರ ಜೊತೆಗೆ ನಗರದ ಪೌರಕಾರ್ಮಿಕರಿಗೆ ಅವರ ಆರೋಗ್ಯ ಕಾಪಾಡಿಕೊಳ್ಳಲು ಹೈಜನಿಕ್ ಕಿಟ್ ಗಳು ಹಾಗೂ ಒಂದು ಟಿಫನ್ ಬಾಕ್ಸ್ ಸಹ ವಿತರಣೆ ಮಾಡಲಾಗುತ್ತಿದೆ, ಎಂಬುದಾಗಿ ಹೇಳಿದರು.
ರೋಟರಿ ಅಧ್ಯಕ್ಷರಾದಂತಹ ಕಿರಣ್ ಕುಮಾರ್ ರವರು ಮಾತನಾಡಿ, ನಮ್ಮ ನಗರದ ಸ್ವಚ್ಛತೆ ಹಾಗೂ ನೈಮರ್ಲ್ಯವನ್ನು ಕಾಪಾಡುವಲ್ಲಿ ಶ್ರಮಿಸುತ್ತಿರುವ ಪೌರಕಾರ್ಮಿಕರು ನಮ್ಮ ನಗರದ ನಿಜವಾದ ಕೋವಿಡ್ ವಾರಿರ್ಯಸ್ ಗಳು ನಗರದ ಸ್ವಚ್ಛತೆ ಕಾಪಾಡುವ ಮೂಲಕ ನಾಗರೀಕರ ಆರೋಗ್ಯ ರಕ್ಷಿಸುವ ನಿಟ್ಟಿನಲ್ಲಿ ಇವರ ಪರಿಶ್ರಮ ಅತ್ಯಂತ ಪ್ರಶಂಷನೀಯವಾದದ್ದು ಎಂಬುದಾಗಿ ತಿಳಿಸಿದರು .
ಇದೇ ಸಂದರ್ಭದಲ್ಲಿ ನಗರದಲ್ಲಿರುವ ಶ್ರೀ ಸತ್ಯ ಸಾಯಿಬಾಬಾ ವಿದ್ಯಾಸಂಸ್ಥೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ವಿದ್ಯಾಸೇತು ಪುಸ್ತಕಗಳನ್ನು ವಿತರಣೆ ಮಾಡಲಾಯಿತು.ವೇದಿಕೆಯಲ್ಲಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ವಿಶ್ವನಾಥ್, ಜಿಲ್ಲಾ ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ, ರೋಟರಿ ಕಾರ್ಯದರ್ಶಿ ಎ.ರಾಘವೇಂದ್ರ, ನಗರಸಭೆ ಉಪಾಧ್ಯಕ್ಷರಾದ ಬಿ.ಎನ್.ಪ್ರಕಾಶ್, ನಗರಸಭೆ ಪೌರಾಯುಕ್ತರಾದ ಡಿ.ಉಮೇಶ್, ಸದಸ್ಯರಾದ ಜಗದೀಶ್, ಇನ್ಹರ್ ವ್ಹೀಲ್ ಅಧ್ಯಕ್ಷರಾದ ಸ್ವಪ್ನಾ ಸತೀಶ್, ರಾಘವೇಂದ್ರಾಚಾರ್, ಪೌರಕಾರ್ಮಿಕರ ಅಧ್ಯಕ್ಷರಾದ ದುರ್ಗೇಶ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಹಿರಿಯ ಸದಸ್ಯರಾದ ಬಿ.ಕೆ.ನಾಗಣ್ಣ, ಎಸ್.ಜೋಗಪ್ಪ, ಕೆ.ಎಸ್.ಮಹಾಬಲೇಶ್ವರಶೆಟ್ಟಿ, ಪಿ.ಆರ್.ಸತೀಶ್ ಬಾಬು, ರೋಟರಿಯನ್ ಗಳಾದ ಚಂದ್ರಕೀರ್ತಿ ಗುಜ್ಜಾರ್, ಆರ್.ಶಿವಕುಮಾರ್, ಗುಣಶೇಖರ್, ಪ್ರಶಾಂತ್, ನರೇಶ್ ಜೈನ್, ಚಂದ್ರಹಾಸ್, ಮಂಜುನಾಥ್, ವೆಂಕಟೇಶ್, ಮಧುಸೂದನ್, ಇನ್ಹರ್ ವ್ಹೀಲ್ ಕ್ಲಬ್ ನ ರಚನಾ, ಸೌಮ್ಯ, ಪದ್ಮಜಾ ಶೆಟ್ಟಿ, ಸ್ವರ್ಣಾ, ರೇಷ್ಮಾ ಗುಜ್ಜಾರ್ ಸೇರಿದಂತೆ ಸತ್ಯ ಸಾಯಿಬಾಬಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು, ನಗರಸಭೆ ಪೌರ ನೌಕರರು ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್. ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy