ಔರಾದ: ಸತತ ಮೂರು ಬಾರಿ ಪಟ್ಟಣದ ಪಿಕಾರ್ಡ ಬ್ಯಾಂಕ್ ನ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾದ ರಘುನಾಥ ಬಿರಾದರವರಿಗೆ ತಮ್ಮ ಸ್ವಗ್ರಾಮ ತೇಗಂಪೂರನಲ್ಲಿ ಗ್ರಾಮಸ್ಥರಿಂದ ಸನ್ಮಾನ ಮಾಡಲಾಯಿತು.
ಸನ್ಮಾನ ಮಾಡಿ ಮಾತನಾಡಿದ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಕಾಶಪ್ಪ ಮುಕ್ತೆದಾರ, ರಘುನಾಥ ಬಿರಾದರ ಸತತ ಮೂರು ಬಾರಿ ಪಿಕಾರ್ಡ ಬ್ಯಾಂಕ್ ನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಇದಕ್ಕೆ ಕಾರಣ ಅವರ ಪ್ರಾಮಾಣಿಕತೆ, ಪ್ರತಿಯೊಂದು ಕೆಲಸದಲ್ಲೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಾರೆ, ಹೀಗಾಗಿ ಅವರು ಸತತ ಮೂರು ಬಾರಿ ನಿರ್ದೇಶಕರಾಗಿ ಹಾಗೂ ಪಿಕಾರ್ಡ ಬ್ಯಾಂಕನ ಅಧ್ಯಕ್ಷರಾಗಿದಾರೆ, ಮತ್ತೆ ಅವರಿಗೆ ಅಧ್ಯಕ್ಷ ಸ್ಥಾನ ಲಭಿಸಲೆಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ನುಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬಸವಣಪ್ಪಾ ಮುಕ್ತೆದಾರ, ಗ್ರಾಪಂ ಮಾಜಿ ಸದಸ್ಯರಾದ ಕಾಶಪ್ಪಾ ಮುಕ್ತೆದಾರ ಗುರುನಾಥ ಮುಕ್ತೆದಾರ, ಪತ್ರಕರ್ತ ರವೀಂದ್ರ ಮುಕ್ತೆದಾರ, ಅಮರ ಮುಕ್ತೆದಾರ, ಯುವ ಉದ್ಯಮಿ ನಾಗೇಶ ಮುಕ್ತೆದಾರ, ಕಿರಣ ಬಿರಾದರ, ರತಿಕಾಂತ ಬಿರಾದರ ಹೀಗೆ ಅನೇಕರು ಭಾಗಿಯಾಗಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx