ತಿಪಟೂರು: ನಫೆಡ್ ಕೇಂದ್ರದಲ್ಲಿ ರಾಗಿ ಕೇಂದ್ರ ತೆರೆದು ಅರ್ಧಂಬರ್ಧ ರೈತರಿಂದ ರಾಗಿ ಖರೀದಿ ಮಾಡಿ, ಏಕಾಏಕಿ ಖರೀದಿ ಕೇಂದ್ರವನ್ನು ಸಂದಿಗ್ದಗೊಳಿಸಿರುವುದರಿಂದ ಬೆಳೆಗಾರರಿಗೆ ಮಾಡಿದ ಮೋಸವಾಗಿದೆ ಎಂದು ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ಆರೋಪಿಸಿದ್ದಾರೆ.
ನಗರದ ತಮ್ಮ ಗೃಹ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲೇ ರಾಗಿ ಕೇಂದ್ರ ತೆರೆದು ಎಲ್ಲಾ ರೈತರಿಂದ ಸಣ್ಣ ಹಿಡುವಳಿದಾರರು ಇರಬಹುದು, ದೊಡ್ಡ ಹಿಡುವಳಿದಾರರ ಆಗಿರಬಹುದು ಎಲ್ಲಾ ವರ್ಗದ ರೈತರಿಂದ ರಾಗಿಯನ್ನು ಕೊಂಡುಕೊಳ್ಳಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದರು.
ಸರ್ಕಾರ ದೊಡ್ಡ ಮತ್ತು ಸಣ್ಣ ರೈತರಿಂದ ವಿಂಗಡನೆ ಮಾಡಿ ಖರೀದಿಯಲ್ಲಿ ರೈತರಿಗೆ ಮೋಸ ಮಾಡುತ್ತಿದ್ದಾರೆ ತುಮಕೂರು ಜಿಲ್ಲೆಯಲ್ಲಿ ರಾಗಿ ಬೆಳೆ ಹೆಚ್ಚು ಬೆಳೆಯುತ್ತಿದ್ದು, ತಿಪಟೂರು ವಾಣಿಜ್ಯ ಕೇಂದ್ರವಾಗಿ ಬೆಳೆದಿದ್ದು, ರೈತರ ಜೀವನಾಧಾರಿತ ರಾಗಿ ಬೆಳೆ ಜೀವನಾಧಾರಕ್ಕೆ ಸಹಕಾರಿಯಾಗಿದೆ. ರಾಗಿ ತಂದು ಕೇಂದ್ರಕ್ಕೆ ಹಾಕಿದ್ದ ಖಾಲಿ ಚೀಲ ವನ್ನು ಸಹ ರೈತರಿಗೆ ಕೊಡದೆ ರೈತರಿಗೆ ಬಹಳ ಅನ್ಯಾಯ ಮಾಡುತ್ತಿದ್ದಾರೆ. ಎಲ್ಲಾ ರೈತರಿಂದ ರಾಗಿ ಖರೀದಿ ಮಾಡಬೇಕೆಂದು ಮನವಿ ಮಾಡಿದ್ದು ಈ ಮನವಿಗೆ ಸ್ಪಂದಿಸದೆ ಹೋದರೆ ಬೃಹತ್ ಪ್ರತಿಭಟನೆಯನ್ನು ತಿಪಟೂರಿನ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy