ಕೈ ಹಿಡಿದೆಳೆದ ಅಭಿಮಾನಿಯೊಬ್ಬನಿಗೆ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಕಪಾಳ ಮೋಕ್ಷ ಮಾಡಿರುವ ಘಟನೆ ಕಾರ್ಯಕ್ರಮವೊಂದರಲ್ಲಿ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.
ಅಭಿಮಾನಿಯೊಬ್ಬ ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ರಾಗಿಣಿಯ ಕೈ ಹಿಡಿದು ಎಳೆದಿದ್ದಾರೆ. ಕೂಡಲೇ ನಟಿ ರಾಂಗ್ ಆಗಿದ್ದಾರೆ. ಕೈ ಹಿಡಿದು ಎಳೆದ ಆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಅಭಿಮಾನಿಯ ಕೆನ್ನೆಗೆ ಬಾರಿಸಿದ ನಂತರ ಸ್ಥಳದಲ್ಲೇ ಆತನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ರಾಗಿಣಿ ಅವರ ರೌದ್ರಾವತಾರ ಕಂಡು ಸ್ಥಳದಲ್ಲಿದ್ದ ಜನರು ಶಾಕ್ ಆಗಿದ್ದಾರೆ.
ತಕ್ಷಣವೇ ಕೈ ಹಿಡಿದೆಳೆದ ವ್ಯಕ್ತಿಯನ್ನು ಸ್ಥಳದಿಂದ ಹೊರ ದಬ್ಬಲಾಗಿದೆ. ಅಂದ ಹಾಗೆ ಇತ್ತೀಚೆಗೆ ಸಾಂಗ್ ಲಾಂಚ್ ಕಾರ್ಯಕ್ರಮಕ್ಕೆ ಬಂದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4