ಕೊರಟಗೆರೆ: ತಾಲ್ಲೂಕಿನ ವಜ್ಜನಕುರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಜಿ.ಕಂಬದಹಳ್ಳಿ ಗ್ರಾಮದಲ್ಲಿ ರಂಗರಾಜು ಎಂಬ ರೈತನ ಎಡವಟ್ಟಿನಿಂದ ಇಡಿ ಗ್ರಾಮವೇ ಅಪಾಯಕ್ಕೀಡಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಅದೃಷ್ಟವಶಾತ್ ಯಾವುದೇ ಅಂತಹ ಘಟನೆಗಳು ಸಂಭವಿಸದೇ ಗ್ರಾಮಸ್ಥರು ದೊಡ್ಡ ಅಪಾಯದಿಂದ ಪಾರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಪಕ್ಕದ ಜಮೀನಿನ ಮಾಲೀಕ ಸರ್ಕಾರಿ ಭೂಮಿಯನ್ನು ಉಳುಮೆ ಮಾಡಿ ಒತ್ತುವರಿ ಮಾಡುವ ಭರದಲ್ಲಿ ರಸ್ತೆ ಪಕ್ಕದಲ್ಲಿ ವಿದ್ಯುತ್ ಕಂಬವಿದ್ದರು ಸಹ ರೈತ ರಂಗರಾಜುವಿನ ದುರಾಸೆಗೆ ಮಣ್ಣು ತೆಗೆಸಿ ಭೂ ಸ್ವಾಧೀನ ಮಾಡಿಕೊಂಡು ವಿದ್ಯುತ್ ಕಂಬವನ್ನು ನೆಲಕ್ಕುರುಳಿಸಿದ್ದಾನೆ. ಆದ್ದರಿಂದ ಇಂತಹ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬೆಸ್ಕಾಂ ಇಲಾಖೆ ನಿರ್ಲಕ್ಷ್ಯ:
ಕಳೆದ ಎರಡು ತಿಂಗಳ ಹಿಂದೆಯೇ ಕಂಬ ಬೀಳುವ ಸಾಧ್ಯತೆ ಕಂಡುಬಂದಿತ್ತು. ಇದನ್ನು ಕಂಡ ಸ್ಥಳೀಯರು ತೀತಾ ಬೆಸ್ಕಾಂ ಇಲಾಖೆಯ ಗಮನಕ್ಕೆ ಅರ್ಜಿ ನೀಡಿ ಬೇರೆಡೆಗೆ ಕಂಬ ಸ್ಥಳಾಂತರಿಸಿ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಲು ತಿಳಿಸಿದ್ದರು . ಆದರೆ ಇವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ ಅರ್ಜಿಯನ್ನು ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಗ್ರಾಮಸ್ಥ ಶಿವಣ್ಣ ಅವರು ಆರೋಪಿಸಿದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


