ವಿಶೇಷ ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ಕೊರಟಗೆರೆ : ತಾಲ್ಲೂಕಿನಲ್ಲಿ ಕಳೆದ 7-8 ವರ್ಷಗಳ ಹಿಂದೆ ಬಗರ್ ಹುಕ್ಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ವಿತರಣೆ ಮಾಡಿದ್ದರು ಸಮೇತ ಖಾತೆ ಪಹಣಿಯಾಗದೆ ಕಳೆದ 7-8 ವರ್ಷಗಳಿಂದ ತಾಲ್ಲೂಕಿನ ರೈತರು ಪ್ರತಿದಿನವೂ ಕೂಡ ತಾಲ್ಲೂಕು ಕಚೇರಿಗೆ ಮತ್ತು ಮಧುಗಿರಿಯ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಪರದಾಡುತ್ತಿದ್ದ ಸ್ಥಿತಿ ನಿರ್ಮಾಣವಾಗಿತ್ತು.
ಬಗರ್ ಹುಕ್ಕುಂ ಸಾಗುವಳಿ ಅರ್ಜಿ ನಮೂನೆ 53,54,57 ರ ನಮೂನೆಯಲ್ಲಿ ಅರ್ಜಿ ಸಲ್ಲಿಸಿದ್ದ ಬಗರ್ ಹುಕ್ಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರವನ್ನೇ ನೀಡದೆ ಕೆಲವೊಂದಷ್ಟು ಅರ್ಜಿಗಳು ನನೆಗುದಿಗೆ ಬಿದ್ದಿದ್ದವು ಅಂತಹ ನೂರಾರು ಅರ್ಜಿಗಳನ್ನು ಈ ಬಾರಿಯ ಬಗರ್ ಹುಕ್ಕುಂ ಸಾಗುವಳಿ ಸಮಿತಿಯ ಅಧ್ಯಕ್ಷರಾದ ಶಾಸಕ ಡಾ.ಜಿ.ಪರಮೇಶ್ವರ್ ಅವರ ಮಾರ್ಗದರ್ಶನದಂತೆ ಕಮಿಟಿ ಸದಸ್ಯರ ಸಮ್ಮುಖದಲ್ಲಿ ಶೀಘ್ರವೇ ಬಗೆಹರಿಸಲು ಮುಂದಾಗಿರುವುದು ಕಂಡುಬಂದಿರುತ್ತದೆ.
ಈ ಹಿಂದೆ ನಡೆದ ಬಗರ್ ಹುಕ್ಕುಂ ಸಾಗುವಳಿದಾರರ ಸಭೆಯಲ್ಲಿ ಕೆಲವೊಂದಷ್ಟು ವಿಚಾರಗಳ ಬಗ್ಗೆ ಚರ್ಚಿಸಿದಾಗ ಮುಖ್ಯವಾಗಿ ಕಂಡುಬಂದಿದ್ದು, ಕಳೆದ ಬಾರಿ ಸಾಗುವಳಿ ಚೀಟಿ ನೀಡಿದ ರೈತರ ಹೆಸರಿಗೆ ಖಾತೆ-ಪಹಣಿಯಾಗದೆ ರೈತರು ಪ್ರತಿನಿತ್ಯವೂ ಕೂಡ ಕಚೇರಿಗೆ ಬಂದು ತಮ್ಮ ಅಳಲನ್ನು ತೋಡಿಕೊಂಡಿದ್ದನ್ನು ಕಂಡು ಸಮಿತಿಯ ಅಧ್ಯಕ್ಷರ ಗಮನಕ್ಕೆ ತಂದ ನಂತರ ಅಧ್ಯಕ್ಷರ ಮಾರ್ಗದರ್ಶನದಂತೆ ರೈತರು ಅನುಭವದಲ್ಲಿರುವಂತಹ ಜಮೀನಿನ ಸ್ಥಳಕ್ಕೆ ಖುದ್ದು ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡದೊಂದಿಗೆ ಜನಸ್ನೇಹಿ ತಹಶೀಲ್ದಾರ್ ನಹಿದಾ ಜಂ ಜಂ ರವರು ಹಗಲು ರಾತ್ರಿ ಎನ್ನದೆ ರೈತರ ಸಾಗುವಳಿ ಜಮೀನಿನ ಸ್ಥಳ ಪರಿಶೀಲನೆ ಮಾಡಿ ದಾಖಲಾತಿಗಳನ್ನು ಪರಿಶೀಲಿಸುತ್ತಿರುವಿದು ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು ಕಾಣಬಹುದು.
ತಾಲೂಕಿನ ಚನ್ನರಾಯನದುರ್ಗ, ಕಸಬಾ, ಹೊಳವನಹಳ್ಳಿ, ಕೋಳಾಲ ಹೋಬಳಿಯ ರೈತರ ಜಮೀನುಗಳಿಗೆ ಖುದ್ದು ತಹಶೀಲ್ದಾರ್ ನಹಿದಾ ಜಂ ಜಂ ಭೇಟಿ ನೀಡಿ ಭೂ ಸಂಕಷ್ಟದಿಂದ ಬೇಸತ್ತು ಹೋಗಿದ್ದಂತಹ ರೈತರ ಮೊಗದಲ್ಲಿ ನಗುವಿನ ನೋಟ ಕಾಣುತ್ತಿರುವುದು ಕಂಡುಬಂದಿದೆ.
ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾದ ತಹಶೀಲ್ದಾರ್ ನಹಿದಾ ಸರ್ಕಾರಿ ಖರಾಬು, ಸರ್ಕಾರಿ ಗೋಮಾಳ, ಸರ್ಕಾರಿ ಫಾರೆಸ್ಟ್ ಮತ್ತು ವಿಲೇ ಜಮೀನುಗಳನ್ನು ಒತ್ತುವರಿ ಮಾಡಿಕೊಂಡು ಸುಮಾರು 40-50 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರು ಸರ್ಕಾರಕ್ಕೆ ಸಕ್ರಮಗೊಳಿಸಲು ಅರ್ಜಿಗಳನ್ನು ಹಾಕಿಕೊಂಡಿದ್ದರು. ಅಂತಹ ಮುಗ್ಧ ರೈತರಿಂದ ಸಾಗುವಳಿ ಚೀಟಿ ಕೊಡಿಸುತ್ತೇವೆಂದು ಮತ್ತು ಖಾತೆ- ಪಹಣಿ ಮಾಡಿಸಿಕೊಡುತ್ತೇವೆಂದು ಹಣ ವಸೂಲಿಗೆ ನಿಂತಿದಂತಹ ಅದೆಷ್ಟೋ ಮಧ್ಯವರ್ತಿಗಳಿಗೆ ಭ್ರಷ್ಟ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ರವಾನಿಸುವ ಮೂಲಕ ತಹಶೀಲ್ದಾರ್ ನಹಿದಾರವರು ಉತ್ತಮ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂದಿದೆ.
ಅತಿ ಶೀಘ್ರದಲ್ಲೇ ಪ್ರತಿಯೊಬ್ಬ ರೈತನ ಸಮಸ್ಯೆಗಳನ್ನು ಬಗೆಹರಿಸಿ ಸಾಗುವಳಿ ಚೀಟಿಯನ್ನು ನೀಡಿ ಖಾತೆ ಪಹಣಿಯನ್ನು ಮಾಡುವುದರ ಮೂಲಕ ಬೃಹತ್ ಮಟ್ಟದ ಆಂದೋಲನವನ್ನು ತಾಲೂಕು ಮಟ್ಟದಲ್ಲಿ ಮಾಡಲಾಗುವುದೆಂದು ಬಗರ್ ಹುಕ್ಕುಂ ಸಾಗುವಳಿ ಸಮಿತಿಯ ಅಧ್ಯಕ್ಷರಾದ ಶಾಸಕ ಜಿ.ಪರಮೇಶ್ವರ್ ಸಾರ್ವಜನಿಕರ ಗಮನಕ್ಕೆ ತಂದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz