ಗುಬ್ಬಿ: ತಾಲೂಕಿನ ಅಮ್ಮನಘಟ್ಟ ಗ್ರಾಮದಲ್ಲಿ ಶಾರದಮ್ಮ ಲೇಟ್ ದೊಡ್ಡತಿಮ್ಮಯ್ಯ ಎಂಬುವವರ ಜಮೀನಿನಲ್ಲಿ ಯಾವುದೇ ನೋಟಿಸ್ ನೀಡದೆ, ಮೀಸಲು ಅರಣ್ಯ ಪ್ರದೇಶ ಎಂದು ವಲಯ ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಪೊಲೀಸ್ ಭದ್ರತೆಯಲ್ಲಿ ಅಡಕೆ ಮರ ಹಾಗೂ ತೆಂಗಿನ ಮರಗಳನ್ನು ತೆರವುಗೊಳಿಸುತ್ತಿದ್ದು, ಇದರಿಂದಾಗಿ ಬಡ ರೈತ ಕುಟುಂಬ ಕಂಗಾಲಾಗಿದೆ.
ಇಂದು ಗುಬ್ಬಿ ವಲಯ ಅರಣ್ಯ ಅಧಿಕಾರಿ ದುರ್ಗಪ್ಪ ಮತ್ತು ಸಿಬ್ಬಂದಿ ಪೊಲೀಸ್ ಇಲಾಖೆಯ ಬಂದೋ ಬಸ್ತ್ ಪಡೆದು ರೈತ ಅಡಿಕೆ ಮತ್ತು ತೆಂಗಿನ ಮರಗಳ ತೆರವಿಗೆ ಮುಂದಾದರು.
ಈ ವೇಳೆ ರೈತ ಮಹಿಳೆ ಶಾರದಮ್ಮ ಕೋರ್ಟ್ ಗೆ ಆಫೀಲ್ ಹೋಗಿದ್ದು, ತಡೆ ಅರ್ಜಿಯನ್ನು ಸೋಮವಾರ ತೋರಿಸುತ್ತೇವೆ ಎಂದು ಅಂಗಲಾಚಿದರು ಅರಣ್ಯಾಧಿಕಾರಿಗಳು ಯಾವುದಕ್ಕೂ ಜಗ್ಗಲಿಲ್ಲ.
ಕಳೆದ 10 ವರ್ಷಗಳ ಹಿಂದೆ ಅರಣ್ಯ ಅಧಿಕಾರಿಗಳು ಬಂದು ಸರ್ವೇ ಕಲ್ಲನ್ನು ಹಾಕಿದ್ದಾರೆ. ಇಂದು ಯಾವುದೇ ಮಾಹಿತಿಯನ್ನು ನೀಡದೆ ಏಕಾಏಕಿ ಅಡಿಕೆ, ತೆಂಗು ಮರಗಳನ್ನು ಉರುಳಿಸುತ್ತಿರುವುದು ಆರಣ್ಯಧಿಕಾರಿಗಳ ಸರ್ವಾಧಿಕಾರಿ ಧೋರಣೆ ಕಂಡು ಬರುತ್ತಿದೆ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ರೈತರು ಅಸಹಾಯಕತೆ ವ್ಯಕ್ತಪಡಿಸಿದರು.
ಉದ್ದೇಶಪೂರ್ವಕವಾಗಿ ಭಾನುವಾರದಂದೇ ಅಧಿಕಾರಿಗಳು ತೋಟ ತೆರವು ಮಾಡಿದ್ದಾರೆ. ಇದರ ಬಗ್ಗೆ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಸ್ಥಳೀಯರು ಹಾಗೂ ರೈತ ಮುಖಂಡರು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು .
ವರದಿ: ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB