ಕೊರಟಗೆರೆ: ರಿಯಲ್ ಎಸ್ಟೇಟ್ ದಂಧೆಕೋರರಿಂದ ರಾಜಕಾಲುವೆ ಒತ್ತುವರಿಯ ಪರಿಣಾಮ ರಸ್ತೆ ಜಮೀನುಗಳಿಗೆ ನೀರು ನುಗ್ಗಿರುವ ಘಟನೆ ಕೊರಟಗೆರೆ ಪಟ್ಟಣದ ಮೂಡಲಪಣ್ಣೆ ಗ್ರಾಮದಲ್ಲಿ ನಡೆದಿದೆ.
ರೈತರು ಸಾಲ ಸೋಲ ಮಾಡಿ ಬಿತ್ತನೆ ಮಾಡಿದ್ದ ಬೆಳೆ ಸಂಪೂರ್ಣ ಮಳೆಯ ನೀರಿಗೆ ಆಹುತಿಯಾಗಿದೆ. 20ಕ್ಕೂ ಹೆಚ್ಚು ಮನೆಗಳಿಗೆ ಓಡಾಡಲು ಇದ್ದ ರಸ್ತೆ ಕೂಡ ನಾಶವಾಗಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ದಂಧೆಕೋರರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಕೊರಟಗೆರೆಯ 90% ಚರಂಡಿ ಕೊಚ್ಚೆ ನೀರು ಸೇರಿದಂತೆ ಗಂಗಾಧರೇಶ್ವರ ಕೆರೆ, ಗೊಬಲಕಟ್ಟೆ ಕೆರೆ, ಸೇರಿದಂತೆ ಇನ್ನೂ ನಾಲ್ಕೈದು ಕೆರೆ ನೀರು ಬಂದು ಓಡಾಡಲು ಆಗದಂತೆ ರಸ್ತೆ ಹಾಳಾಗಿದೆ.
ನಕ್ಷೆಯಲ್ಲಿ ಇರುವಂತೆ ರಾಜಕಾಲುವೆ ಇದ್ದಿದ್ದರೆ ಈ ಪಜೀತಿ ಆಗುತ್ತಿರಲಿಲ್ಲ. ರಿಯಲ್ ಎಸ್ಟೇಟ್ ಉದ್ಯಮಿಗಳ ಲಾಭಕ್ಕಾಗಿ ಇಂತಹ ಅವ್ಯವಸ್ಥೆ ಸೃಷ್ಟಿಸಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ.
ಈ ದಾರಿಯಲ್ಲಿ ಶಾಲಾ ಕಾಲೇಜುಗಳಿಗೆ ಮಕ್ಕಳು ಹಾಗೂ ವಯೋವೃದ್ಧರು ಸಹ ಇದೆ ದಾರಿಯಲ್ಲಿ ಪ್ರತಿನಿತ್ಯ ಓಡಾಡಬೇಕು. ಏನು ಅರಿಯದ ಹಳ್ಳಿ ರೈತರೇ ಇವರ ಟಾರ್ಗೆಟ್ ಆಗಿದ್ದು, ಅವರಿಗೆ ಅಲ್ಪಸಲ್ಪದ ಹಣದಾಸೆ ತೋರಿಸಿ. ಅವರ ಜಮೀನುಗಳನ್ನು ಕಸಿದು ಸೈಟ್ ಗಳನ್ನು ಮಾರ್ಪಡಿಸಿ ದುಪ್ಪಟ್ಟು ಬೆಲೆಗೆ ಮಾರುವುದೇ ಇವರ ಕಾಯಕವಾಗಿದೆ.
ಕೊರಟಗೆರೆ ಪಟ್ಟಣದ ಮೂಡಲಪಣ್ಣೆ ಗ್ರಾಮದ 30 ರಿಂದ 40 ಮನೆಗಳಿಗೆ ರಾಜ ಕಾಲುವೆಯ ಒತ್ತುವರಿಯಿಂದಾಗಿ ಕಂಟಕ ಎದುರಾಗಿದೆ. ಹಣದ ಆಸೆಗೆ ರಾಜಕಾಲುವೆಯ ದಿಕ್ಕನ್ನೇ ರಿಯಲ್ ಎಸ್ಟೇಟ್ ದಂಧೆಕೋರರರು ಬದಲಿಸಿದ್ದಾರೆ. ಸೈಟ್ ಗಳ ನಿರ್ಮಾಣಕ್ಕೆ ಮಾಡಿದ ಅವಜ್ಞಾನಿಕ ಕೆಲಸದಿಂದ ರೈತರು ಹಾಗೂ ಸಾರ್ವಜನಿಕರಿಗೆ ಸಂಕಷ್ಟ ಸೃಷ್ಟಿಯಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಇವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು, ರಸ್ತೆ ಹಾಗೂ ರಾಜಕಾಲುವೆ ಸರಿಪಡಿಸುವಂತೆ ರೈತರು ಹಾಗೂ ಸಾರ್ವಜನಿಕರು ತಾಲೂಕು ತಹಶೀಲ್ದಾರ್ ಮಂಜುನಾಥ್ ರವರಿಗೆ ಮನವಿ ನೀಡಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q